Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಜೋಡಿ: ಶಶಿಕಲಾ ಜೊಲ್ಲೆ ಮಾಲೀಕತ್ವದ ಬ್ಯಾಂಕ್ಗೆ ಕನ್ನ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಮಿಳು ನಟ ವಿಜಯ್ ಐಟಿಗೆ 'ಟಾರ್ಗೆಟ್' ಆಗಲು ಕಾರಣ ಆ 65 ಕೋಟಿ
Recommended Video
ತಮಿಳು ಸೂಪರ್ ಸ್ಟಾರ್ ವಿಜಯ್ ತಮ್ಮ ಮುಂದಿನ ಸಿನಿಮಾ 'ಮಾಸ್ಟರ್' ಚಿತ್ರೀಕರಣದಲ್ಲಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ನಟಿಸುತ್ತಿದ್ದಾರೆ.
ಜೇವಿಯರ್ ಬ್ರಿಟ್ಟೊ ನಿರ್ಮಿಸುತ್ತಿರುವ ಈ ಚಿತ್ರ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ಸದ್ಯಕ್ಕೆ ತಮಿಳಿನಲ್ಲಿ ವಿಜಯ್ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾತು ಕೂಡ ಇದೆ.
ತೆರಿಗೆ
ವಂಚನೆ
ಆರೋಪದಲ್ಲಿ
ತಮಿಳು
ನಟ
ವಿಜಯ್
ಗೆ
ಐಟಿ
ವಿಚಾರಣೆ
ತಮಿಳುನಾಡಿನ ಕಡಲೂರು ಜಿಲ್ಲೆಯ ನೆವಿಲಿಯಲ್ಲಿ ಮಾಸ್ಟರ್ ಸಿನಿಮಾ ಶೂಟಿಂಗ್ ಆಗುತ್ತಿದ್ದ ಸಮಯದಲ್ಲಿ ವಿಜಯ್ ಅವರನ್ನು ಐಟಿ ದಾಳಿ ಮಾಡಿದ್ದಾರೆ. ಅದಕ್ಕೆ ಕಾರಣ ಬಿಗಿಲ್ ಸಿನಿಮಾದ ನಿರ್ಮಾಪಕರ 65 ಕೋಟಿ. ಏನಿದು 65 ಕೋಟಿ ಕಥೆ? ಮುಂದೆ ಓದಿ....

ಫೈನಾನ್ಶಿಯರ್ ದಾಳಿಯಲ್ಲಿ 65 ಕೋಟಿ ಪತ್ತೆ
ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಫೈನಾನ್ಶಿಯರ್ ಎನಿಸಿಕೊಂಡಿರುವ ಅನ್ಬು ಚೆಲಿಯಾನ್ ಕಛೇರಿ ಮೇಲೆ ಐಟಿ ದಾಳಿ ಆಗಿದೆ. ಈ ಸಮಯದಲ್ಲಿ ಸುಮಾರು 65 ಕೋಟಿ ಪತ್ತೆಯಾಗಿದೆ. ಇದಕ್ಕೆ ಸರಿಯಾದ ಲೆಕ್ಕ ಸಿಕ್ಕಿಲ್ಲ. ಈ ಹಣಕ್ಕೆ ಸಂಬಂಧಿಸಿದಂತೆ ತಮಿಳು ನಟ ವಿಜಯ್ ಅವರ ವಿಚಾರಣೆಯೂ ಆಗಿದೆ ಎನ್ನಲಾಗಿದೆ.

ವಿಜಯ್ ಗೆ ಏನು ಸಂಬಂಧ?
ಫೈನಾನ್ಶಿಯರ್ ಅನ್ಬು ಚೆಲಿಯಾನ್ ಮತ್ತು ನಟ ವಿಜಯ್ ನಡುವೆ ಹಣದ ವಹಿವಾಟು ನಡೆದಿದೆ. ಅದಕ್ಕೆ ಸರಿಯಾದ ಲೆಕ್ಕ ಸಿಕ್ಕಿಲ್ಲ. ಹಾಗಾಗಿ, ನಟ ವಿಜಯ್ ಅವರನ್ನು ಐಟಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಭಾರತೀಯ
ಚಿತ್ರರಂಗದಲ್ಲಿ
ಅತೀ
ಹೆಚ್ಚು
ಸಂಭಾವನೆ
ಪಡೆಯುವ
ನಟ
ವಿಜಯ್?

ಬಿಗಿಲ್ ನಿರ್ಮಾಪಕನಿಗೂ ನಂಟು
ಅಂದ್ಹಾಗೆ, ಫೈನಾನ್ಶಿಯರ್ ಅನ್ಬು ಚೆಲಿಯಾನ್ ಗೂ ಮತ್ತು ಬಿಗಿಲ್ ಸಿನಿಮಾದ ನಿರ್ಮಾಪಕ ಎಜಿಎಸ್ ಪ್ರೊಡಕ್ಷನ್ ಸಂಸ್ಥೆಗೂ ಸಂಬಂಧ ಇದೆ. ಬಿಗಿಲ್ ಚಿತ್ರದಲ್ಲಿ ವಿಜಯ್ ನಾಯಕನಾಗಿ ನಟಿಸಿದ್ದರು. ಹಾಗಾಗಿ, ಒಬ್ಬರಿಗೊಬ್ಬರು ಸಂಬಂಧ ಇರುವ ಕಾರಣ ಐಟಿ ಅಧಿಕಾರಿಗಳು ಈ ಮೂವರನ್ನು ಆಸ್ತಿಪಾಸ್ತಿ ಲೆಕ್ಕಾಚಾರ ಕೇಳುತ್ತಿದ್ದಾರೆ.

ಬಿಗಿಲ್ ಸಿನಿಮಾ ಬಜೆಟ್-ಲಾಭ ಎಷ್ಟು?
ವಿಜಯ್ ನಟಿಸಿ, ಅಟ್ಲಿ ನಿರ್ದೇಶನ ಮಾಡಿದ್ದ ಬಿಗಿಲ್ ಸಿನಿಮಾ ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಿತ್ತು. 150 ಕೋಟಿಗೂ ಅಧಿಕ ಬಜೆಟ್ ನಲ್ಲಿ ತಯಾರಾಗಿದ್ದ ಈ ಚಿತ್ರ ಸುಮಾರು 250 ಕೋಟಿ ಬಿಸಿನೆಸ್ ಮಾಡಿತ್ತು ಎನ್ನಲಾಗಿದೆ. ಇನ್ನು ಫೈನಾನ್ಶಿಯರ್ ಮತ್ತು ಬಿಗಿಲ್ ನಿರ್ಮಾಪಕ ಎಜಿಎಸ್ ಸಂಸ್ಥೆಯ ವಹಿವಾಟು ಮೇಲೆ ಐಟಿ ಅಧಿಕಾರಿಗಳು ಮೊದಲಿನಿಂದಲೂ ಗಮನ ಹರಿಸಿದ್ದರು ಎಂದು ಹೇಳಲಾಗಿದೆ.
ತೆಲುಗು
ಖ್ಯಾತ
ನಿರೂಪಕಿ
ಸುಮಾ-ಅನುಸೂಯ
ಮನೆ
ಮೇಲೆ
ಐಟಿ
ದಾಳಿ

ವಿಜಯ್ ಪರ ನಿಂತ ಅಭಿಮಾನಿಗಳು
ಇನ್ನು ತಮಿಳು ನಟ ವಿಜಯ್ ಅವರನ್ನು ನೇರವಾಗಿ ಐಟಿ ಅಧಿಕಾರಿಗಳು ಟಾರ್ಗೆಟ್ ಮಾಡಿಲ್ಲ. ಆದರೂ ಫೈನಾನ್ಶಿಯರ್, ಬಿಗಿಲ್ ನಿರ್ಮಾಪಕರ ವಹಿವಾಟುವಿನಲ್ಲಿ ಸಂಬಂಧ ಹೊಂದಿರುವುದರಿಂದ ವಿಚಾರಣೆ ನಡೆಸಿದ್ದಾರೆ. ಆದರೆ, ನೆಚ್ಚಿನ ನಟನ ಮನೆ ಮೇಲೆ ದಾಳಿ ಮಾಡಿರುವುದನ್ನು ವಿಜಯ್ ಅಭಿಮಾನಿಗಳು ವಿರೋಧಿಸಿದ್ದಾರೆ. ತಮಿಳುನಾಡಿನ ಹಲವು ಕಡೆ ಐಟಿ ದಾಳಿಯನ್ನು ಖಂಡಿಸಿದ್ದಾರೆ. ''#WeStandWithVIJAY'' ಎಂಬ ಹ್ಯಾಷ್ ಟ್ಯಾಗ್ ಕೂಡ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ.