For Quick Alerts
  ALLOW NOTIFICATIONS  
  For Daily Alerts

  ಬದುಕಿದ್ದಾಗಲೇ ಶ್ರದ್ಧಾಂಜಲಿ ಕೋರಿದ ನೆಟ್ಟಿಗರು, ಉದ್ದೇಶಪೂರ್ವಕ ಎಂದ ನಟ

  By ಫಿಲ್ಮೀಬೀಟ್ ಡೆಸ್ಕ್‌
  |

  ಹಿಂದಿಯ ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ನಿಧನರಾದ ಬೆನ್ನಲ್ಲೆ, ಹಿಂದಿ ಸಿನಿಮಾಗಳಲ್ಲೂ ನಟಿಸಿರುವ ದಕ್ಷಿಣ ಭಾರತದ ಖ್ಯಾತ ನಟ ಸಿದ್ಧಾರ್ಥ್‌ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಶ್ರದ್ದಾಂಜಲಿ ಕೋರಿದ್ದಾರೆ.

  ತಾವು ಬದುಕಿದ್ದಾಗಲೇ ಕೆಲವರು ತಮಗೆ ಶ್ರದ್ಧಾಂಜಲಿ ಕೋರಿರುವ ಬಗ್ಗೆ ಬೇಸರಗೊಂಡಿರುವ ನಟ ಸಿದ್ಧಾರ್ಥ್, ''ಈ ರೀತಿಯ ಟ್ವೀಟ್‌ಗಳು ಮತ್ತು ಅದಕ್ಕೆ ಬಂದಿರುವ ಪ್ರತಿಕ್ರಿಯೆಗಳು ನನಗೆ ಬೇಸರ ಉಂಟುಮಾಡುತ್ತಿಲ್ಲ ಇತ್ತೀಚೆಗೆ. ಈ ಬಗ್ಗೆ ನಾನು ಮಾತನಾಡುವುದೂ ಇಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.

  ಸಿದ್ಧಾರ್ಥ್‌ಗೆ ಶ್ರದ್ಧಾಂಜಲಿ ಕೋರಿದ ಟ್ವೀಟ್‌ಗೆ ಕೆಲವರು ದ್ವೇಷ ಹರಡುವ ಮಾದರಿಯ ಕಮೆಂಟ್‌ಗಳು, ಸಿದ್ಧಾರ್ಥ್ ಸಾವು ಕೋರುವ ಮಾದರಿಯ ಪ್ರತಿಕ್ರಿಯೆಗಳು ಬಂದಿದ್ದವು.

  ಮೆನ್ ಆಫ್ ಮನು ಹೆಸರಿನ ಟ್ವಿಟ್ಟರ್ ಖಾತೆಯಿಂದ ತಮಗೆ ಶ್ರದ್ಧಾಂಜಲಿ ಕೋರಿದ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಸಿದ್ಧಾರ್ಥ್, ''ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿರುವ ದೌರ್ಜನ್ಯ ಮತ್ತು ದ್ವೇಷ ಹರಡುವಿಕೆ. ಮಾನವೀಯತೆಯಲ್ಲಿ ಎಷ್ಟು ಕೆಳಗೆ ಇಳಿದುಬಿಟ್ಟೆವು ನಾವು'' ಎಂದು ಹೇಳಿದ್ದಾರೆ.

  ಸಿದ್ಧಾರ್ಥ್‌ಗೆ ಬಿಜೆಪಿ ಹಾಗೂ ಮೋದಿ ವಿರುದ್ಧ ಆಗಾಗ್ಗೆ ಟ್ವೀಟ್ ಮಾಡುತ್ತಲೇ ಇರುತ್ತಾರೆ. ಹಾಗಾಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧಿಗಳು ಹೆಚ್ಚು. ಈ ಹಿಂದೆಯೂ ಸಿದ್ಧಾರ್ಥ್‌ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲಾಗಿತ್ತು, ಪೋಸ್ಟರ್‌ಗಳನ್ನು ಮಾಡಿ ಹರಿಬಿಡಲಾಗಿತ್ತು.

  ಇನ್ನು ನಟ ಸಿದ್ಧಾರ್ಥ್, ಹಿಂದಿಯ ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಸಾವಿಗೆ ಟ್ವಿಟ್ಟರ್‌ನಲ್ಲಿ ಕಂಬನಿ ಮಿಡಿದಿದ್ದಾರೆ. ''ಸಿದ್ಧಾರ್ಥ್ ಶುಕ್ಲಾ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ತೀವ್ರ ಸಂತಾಪ. ಕಡಿಮೆ ವಯಸ್ಸಿನಲ್ಲಿಯೇ ಅಗಲಿದ್ದಾರೆ'' ಎಂದಿದ್ದಾರೆ.

  2003ರಲ್ಲಿ ಬಿಡುಗಡೆ ಆದ ತಮಿಳು ಸಿನಿಮಾ 'ಬಾಯ್ಸ್' ಮೂಲಕ ಚಿತ್ರರಂಗ ಪ್ರವೇಶಿಸಿದ ಸಿದ್ಧಾರ್ಥ್ ಈ ವರೆಗೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಇಂಗ್ಲೀಷ್‌ ಸಿನಿಮಾಗಳಲ್ಲಿಯೂ ಸಿದ್ಧಾರ್ಥ್ ನಟಿಸಿದ್ದಾರೆ. ಇದೀಗ 'ಮಹಾಸಮುದ್ರಂ', 'ಟಕ್ಕರ್', 'ಇಂಡಿಯನ್ 2' ಸಿನಿಮಾಗಳಲ್ಲಿ ನಟಿಸಿದ್ದು ಇವು ಇನ್ನಷ್ಟೆ ಬಿಡುಗಡೆ ಆಗಬೇಕಿವೆ.

  English summary
  Few netizen mourns for Tamil actor Siddharth instead of Siddharth Shukla. Actor said it is intentional.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X