For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್‌ ವಿರುದ್ಧ ಮಾಜಿ ಬಿಗ್‌ಬಾಸ್ ಸ್ಪರ್ಧಿ ವನಿತಾ ಗಂಭೀರ ಆರೋಪ

  |

  ಕನ್ನಡದಲ್ಲಿ ಸುದೀಪ್‌ ಬಿಗ್‌ಬಾಸ್ ಕಾರ್ಯಕ್ರಮ ನಡೆಸಿಕೊಡುವಂತೆಯೇ ಕಮಲ್ ಹಾಸನ್ ತಮಿಳಿನಲ್ಲಿ ಬಿಗ್‌ಬಾಸ್ ನಿರೂಪಣೆ ಮಾಡುತ್ತಾರೆ. ಕನ್ನಡದಲ್ಲಿ ಸುದೀಪ್‌ಗೆ ಇರುವಂತೆಯೇ ತಮಿಳಿನಲ್ಲಿ ಕಮಲ್ ನಿರೂಪಣೆಗೆ ಅಭಿಮಾನಿ ವರ್ಗವಿದೆ. ಆದರೆ ಇದೀಗ ಕಮಲ್ ಹಾಸನ್‌ ವಿರುದ್ಧ ಮಾಜಿ ಬಿಗ್‌ಬಾಸ್ ಸ್ಪರ್ಧಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

  ತಮಿಳು ಬಿಗ್‌ಬಾಸ್ ಸೀಸನ್ ಆರು ಪ್ರಸ್ತುತ ಚಾಲ್ತಿಯಲ್ಲಿದ್ದು ಈವರೆಗೆ ಏಳು ಮಂದಿ ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದಾರೆ. ಒಬ್ಬ ಸ್ಪರ್ಧಿ ಇತರೆ ಕಾರಣಗಳಿಂದ ಮನೆಯಿಂದ ಹೊರಗುಳಿದಿದ್ದಾರೆ. ಆದರೆ ಇದೀಗ ಮಾಜಿ ಬಿಗ್‌ಬಾಸ್ ಸ್ಪರ್ಧಿಯೊಬ್ಬರು ಶೋ ನಿರೂಪಕ ಕಮಲ್ ಹಾಸನ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

  ಬಿಗ್‌ಬಾಸ್ ಮನೆ ಸದಸ್ಯರಿಗೆ ಅರಣ್ಯವಾಸ, ಮನೆಗೆ ಎಂಟ್ರಿ ಕೊಟ್ಟ ಹೊಸ ಸ್ಪರ್ಧಿ! ಯಾರದು?ಬಿಗ್‌ಬಾಸ್ ಮನೆ ಸದಸ್ಯರಿಗೆ ಅರಣ್ಯವಾಸ, ಮನೆಗೆ ಎಂಟ್ರಿ ಕೊಟ್ಟ ಹೊಸ ಸ್ಪರ್ಧಿ! ಯಾರದು?

  ತಮಿಳು ಬಿಗ್‌ಬಾಸ್‌ನ ಮೂರನೇ ಸೀಸನ್‌ನಲ್ಲಿ ಮನೆಯ ಸ್ಪರ್ಧಿಯಾಗಿದ್ದ ವನಿತಾ ವಿಜಯ್‌ಕುಮಾರ್, ಪ್ರಸ್ತುತ ಪ್ರಸಾರವಾಗುತ್ತಿರುವ ಆರನೇ ಸೀಸನ್‌ನಲ್ಲಿನ ಸ್ಪರ್ಧಿ ಅರ್ಚನಾ ಪರವಾಗಿದ್ದಾರೆ ಕಮಲ್ ಹಾಸನ್. ಅರ್ಚನಾರ ತಪ್ಪುಗಳನ್ನು ಬೇಕೆಂದೇ ನಿರ್ಲಕ್ಷ್ಯ ಮಾಡಿ ಬೇರೆ ಸ್ಪರ್ಧಿಗಳ ಬಗ್ಗೆ ಕಠಿಣವಾಗಿ ನಡೆದುಕೊಳ್ಳುತ್ತಿದ್ದಾರೆ'' ಎಂದಿದ್ದಾರೆ.

  ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಕಳೆದ ವಾರದ ವಾರಾಂತ್ಯದ ಎಪಿಸೋಡ್‌ ಬಗ್ಗೆ ಮಾತನಾಡುತ್ತಾ, ''ಸ್ಪರ್ಧಿ ಅಜೀಮ್ ಚೆನ್ನಾಗಿ ಆಡುತ್ತಿದ್ದಾನೆ. ಗೇಮ್ ಅನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಆತ ಈಗ ಕಮಲ್ ಹಾಸನ್ ಅವರಿಗೇ ಎದುರಾಗಿ ನಿಂತಿಬಿಟ್ಟಿದ್ದಾನೆ. ಆದರೆ ಅದನ್ನು ಜನ ಹೇಗೆ ಸ್ವೀಕಾರ ಮಾಡುತ್ತಾರೋ ನೋಡಬೇಕು'' ಎಂದಿದ್ದಾರೆ.

  ಮುಂದುವರೆದು, ''ರಾಬರ್ಟ್ ಹಾಗೂ ರಚಿತಾ ನಡುವೆ ನಡೆದ ಘಟನೆ ಬಗ್ಗೆ ಕಮಲ್ ಹಾಸನ್ ಏಕೆ ಮಾತನಾಡಲಿಲ್ಲವೊ ನನಗೆ ಗೊತ್ತಿಲ್ಲ. ರಾಬರ್ಟ್‌, ಗಂಭೀರ ವಿಷಯವನ್ನೂ ಸಹ ನಗುತ್ತಲೇ ಹೇಳಿದ. ಆದರೆ ಕಮಲ್ ಹಾಸನ್, ರಚಿತಾಗೆ ಕಠಿಣವಾಗಿ ಎಚ್ಚರಿಕೆ ಕೊಡುವ ಬದಲು ಅವರೂ ಸಹ ರಾಬರ್ಟ್ ಜೊತೆ ಸೇರಿಕೊಂಡು ನಗುತ್ತಿದ್ದರು. ರಚಿತಾ ಬಗ್ಗೆ ಏಕೆ ಹೀಗೆ ಪಕ್ಷಪಾತ ಮಾಡಲಾಗುತ್ತಿದೆಯೋ ಗೊತ್ತಿಲ್ಲ. ಆಕೆ 'ದೀವಟಿಗೆ ಹಿಡಿದ ಪವಿತ್ರ ಮಹಿಳೆ' ಎಂಬಂತಾಗಿದೆ. ಯಾರೂ ಆಕೆಯ ವಿರುದ್ಧ ಮಾತನಾಡುತ್ತಿಲ್ಲ. ಕಮಲ್ ಹಾಸನ್ ಸಹ ಅವಳ ಅಭಿಮಾನಿಯಂತೆ ಆಡುತ್ತಾರೆ. ಅದು ಅವರ ವೈಯಕ್ತಿಕ ವಿಷಯ ಆದರೆ ಗೇಮ್‌ನಲ್ಲಿ ಹಾಗೆ ಮಾಡುವಂತಿಲ್ಲ'' ಎಂದಿದ್ದಾರೆ ವನಿತಾ.

  ''ಇದು ಬಿಗ್‌ಬಾಸ್ ಆಯೋಜಕರ ಸ್ಟ್ರಾಟೆಜಿ ಸಹ ಆಗಿರಬಹುದು. ರಚನಾ ಮಾಡಿದ ತಪ್ಪುಗಳನ್ನು ನಿರ್ಲಕ್ಷಿಸುವಂತೆ ಅವರೇ ಕಮಲ್ ಹಾಸನ್‌ಗೆ ಸೂಚನೆ ಕೊಟ್ಟಿರಲೂ ಬಹುದು. ತೆರೆಯ ಹಿಂದೆ ಏನೇನು ನಡೆಯುತ್ತದೆಯೋ ನಮಗೆ ಗೊತ್ತಾಗುವುದಿಲ್ಲ'' ಎಂದಿದ್ದಾರೆ.

  Former Tamil Bigg Boss Contestant Vanitha Allegation On Kamal Haasan Being Biased

  ವನಿತಾ, ತಮಿಳಿನ ಜನಪ್ರಿಯ ನಟ-ನಟಿ ಜೋಡಿ ವಿಜಯ್ ಕುಮಾರ್ ಹಾಗೂ ಮಂಜುಳಾರ ಪುತ್ರಿ. ತಮ್ಮ ಅಭಿಪ್ರಾಯಗಳನ್ನು ಧೈರ್ಯವಾಗಿ ಹೇಳುವುದರಿಂದಲೇ ವನಿತಾ ಖ್ಯಾತಿ ಪಡೆದಿದ್ದಾರೆ. ಬಿಗ್‌ಬಾಸ್ ಮೂರನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದ ವನಿತಾ ಇತ್ತೀಚೆಗೆ ನಡೆದ ತಮಿಳು ಬಿಗ್‌ಬಾಸ್ ಒಟಿಟಿ ಶೋನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು.

  English summary
  Former Tamil Bigg Boss Contestant Vanitha allegation on show host Kamal Haasan being biased towards contestant Archana.
  Wednesday, November 23, 2022, 7:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X