For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗುವುದಾಗಿ ಹೇಳಿ ಯುವತಿಗೆ ವಂಚನೆ: ನಟ ಆರ್ಯ ವಿರುದ್ಧ ದೂರು ದಾಖಲು

  By ಫಿಲ್ಮಿಬೀಟ್ ಡೆಸ್ಕ್
  |

  ತಮಿಳಿನ ಖ್ಯಾತ ನಟ ಆರ್ಯ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಇತ್ತೀಚಿಗೆ ಆರ್ಯ ಪತ್ನಿ ಸಯೇಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಂದೆಯಾದ ಸಂಭ್ರಮ ಮತ್ತು ಸರ್ಪಟ್ಟ ಪರಂಬರೈ ಯಶಸ್ಸಿನ ಖುಷಿಯಲ್ಲಿದ್ದ ನಟ ಆರ್ಯಗೆ ವಂಚನೆ ದೂರು ಶಾಕ್ ನೀಡಿದೆ.

  ಯುವರತ್ನ ನಟಿ ಸಯೇಶಾ ಗೆ ಮೋಸ ಮಾಡಿದ್ರ ಪತಿ ಆರ್ಯ

  ಜರ್ಮನಿ ಮೂಲಕ ವಿದ್ಜಾ ಎನ್ನುವ ಮಹಿಳೆ ನಟ ಆರ್ಯ ವಿರುದ್ಧ 70 ಲಕ್ಷ ರೂ. ವಂಚನೆ ಆರೋಪ ಮಾಡಿದ್ದಾರೆ. ಆರ್ಯ ತನ್ನನ್ನು ಪ್ರೀತಿಸಿ, ಮದುವೆಯಾಗುವುದಾಗಿ ಹೇಳಿ ಭರವಸೆ ನೀಡಿದ್ದರು. ಆದರೀಗ ಬೇರೆ ಯುವತಿ ಜೊತೆ ಮದುವೆಯಾಗಿದ್ದಾರೆ ಎಂದು ಜರ್ಮನಿ ಮೂಲದ ವಿದ್ಜಾ ಗಂಭೀರ ಆರೋಪ ಮಾಡಿದ್ದಾರೆ.

  ವಿದ್ಜಾಗೆ ಪವರ್ ಆಫ್ ಆಟಾರ್ನಿ ಆಗಿರುವ ಚೆನ್ನೈನ ರಾಜಪಾಂಡಿಯನ್ ಈ ವಿಚಾರವಾಗಿ ತನಿಖೆ ಕೋರಿ ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಂದು ವಿಚಾರಣೆಗೆ ಬಂದಿದ್ದು, ಆರ್ಯ ವಿದ್ಜಾಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಮತ್ತು ಅವಳಿಂದ 70 ಲಕ್ಷ ಸಾಲ ಪಡೆದಿದ್ದರು ಎಂದು ಉಲ್ಲೇಖಿಸಲಾಗಿದೆ.

  ಇನ್ನು ಸಯೇಶಾಳನ್ನು ಮದುವೆಯಾದ ಬಗ್ಗೆ ಆರ್ಯರನ್ನು ಪ್ರಶ್ನಿಸಿದಾಗ ಎಲ್ಲಾ ಸಾಲ ತೀರಿಸುವುದಾಗಿ ಭರವಸೆ ನೀಡಿದ್ದರು ಎಂದಿದ್ದಾರೆ. ಅಲ್ಲದೆ ಆರು ತಿಂಗಳೊಳಗೆ ಸಯೇಶಾಗೆ ವಿಚ್ಛೇದನ ನೀಡಿ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಹಾಗಾಗಿ ಆರ್ಯ ಮದುವೆಗೆ ಒಪ್ಪಿಗೆ ನೀಡಿದೆ ಎಂದು ವಿದ್ಜಾ ಹೇಳಿದ್ದಾರೆ.

  ವಿದ್ಜಾ ಪರ ವಕೀಲರು ಆನಂದ್ ಇಂದು ವಿಚಾರಣೆ ವೇಳೆ, ಆರ್ಯ ನಟನೆಯ ತಮಿಳು ಸಿನಿಮಾ ಮತ್ತು ಮಲಯಾಳಂ ಸಿನಿಮಾ ಬಿಡುಗಡೆಯಾಗದಂತೆ ನಿಲ್ಲಿಸಬೇಕು ಎಂದು ಕೇಳಿಕೊಂಡಿದ್ದಾರೆ. ವಿದ್ಜಾ ಅವರಿಗೆ ಹಣ ವಾಪಸ್ ಕೊಡುವವರೆಗೂ ಹಣ ಹಿಂದಿರುಗಿಸಬಾರದು ಎಂದು ವಕೀಲರು ಮನವಿ ಮಾಡಿಕೊಂಡಿದ್ದಾರೆ. ಬಳಿಕ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಲಾಗಿದೆ.

  English summary
  Germany woman filed Case against Arya for cheating Rs 70 lakh by promising to marry her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X