For Quick Alerts
  ALLOW NOTIFICATIONS  
  For Daily Alerts

  ಹೊಂಬಾಳೆ ಫಿಲ್ಮ್ಸ್ ಜತೆ ರಜನಿಕಾಂತ್ ಚಿತ್ರ; ಅನುಮಾನ ಹುಟ್ಟಿಸಿತು ಆ ಒಂದು ಪೋಸ್ಟ್!

  |

  ಹೊಂಬಾಳೆ ಫಿಲ್ಮ್ಸ್ ಸದ್ಯ ದೇಶದಾದ್ಯಂತ ಓರ್ವ ನಟ ಹಾಗೂ ನಿರ್ದೇಶಕನ ಮಟ್ಟಿಗೆ ಹೆಸರನ್ನು ಮಾಡಿರುವ ಹಾಗೂ ಭರವಸೆಯನ್ನು ಹುಟ್ಟುಹಾಕಿರುವಂತಹ ಚಿತ್ರ ನಿರ್ಮಾಣ ಸಂಸ್ಥೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರ ಬಿಡುಗಡೆಯಾಗಿದೆ ಎಂದರೆ ಕೊಡುವ ಕಾಸಿಗೆ ಮೋಸವಿರಲ್ಲ ಎಂದು ಚಿತ್ರಮಂದಿರಕ್ಕೆ ತೆರಳುವ ಪ್ರೇಕ್ಷಕ ವರ್ಗವೇ ಇದೆ. ಹೀಗೆ ಸಿನಿ ರಸಿಕರಲ್ಲಿ ನಂಬಿಕೆ ಮೂಡಿಸಿರುವ ಹೊಂಬಾಳೆ ಫಿಲ್ಮ್ಸ್ ಮೊದಲು ಕನ್ನಡ ಚಿತ್ರಗಳನ್ನು ನಿರ್ಮಿಸಿ ಈಗ ಇತರೆ ಇಂಡಸ್ಟ್ರಿಗಳಿಗೂ ಸಹ ಕಾಲಿಟ್ಟಿದೆ.

  ಹೌದು, ತೆಲುಗಿನಲ್ಲಿ ಪ್ರಭಾಸ್ ನಟನೆಯ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಟಾಲಿವುಡ್ ಪ್ರವೇಶಿಸಿ ಅಚ್ಚರಿ ಮೂಡಿಸಿದ್ದ ಹೊಂಬಾಳೆ ಫಿಲ್ಮ್ಸ್ ನಂತರ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಹಾಗೂ ನಟನೆಯ ಟೈಸನ್ ಮತ್ತು ಫಹಾಸ್ ಫಾಸಿಲ್ ನಟನೆಯ ಧೂಮಮ್ ಚಿತ್ರಗಳನ್ನು ಘೋಷಿಸಿ ಮಾಲಿವುಡ್ ಚಿತ್ರರಂಗವನ್ನೂ ಸಹ ಪ್ರವೇಶಿಸಿ ಕೆಲ ದಿನಗಳ ಹಿಂದಷ್ಟೇ ಕೀರ್ತಿ ಸುರೇಶ್ ಅಭಿನಯದ ರಘು ತಾತಾ ಎಂಬ ತಮಿಳು ಚಿತ್ರವನ್ನು ಘೋಷಿಸಿ ಕಾಲಿವುಡ್ ಚಿತ್ರರಂಗವನ್ನೂ ಸಹ ಪ್ರವೇಶಿಸಿತು.

  ಹೀಗೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳಲ್ಲಿಯೂ ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ಹಿಂದಿ ಭಾಷೆಗೂ ಕಾಲಿಡಲಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುವಾಗಲೇ ತಮಿಳಿನ ರಜನಿಕಾಂತ್ ಅಭಿನಯದ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳವನ್ನು ಹೂಡಲಿದೆ ಎಂಬ ಸುದ್ದಿಯೊಂದು ಹರಿದಾಡಲು ಆರಂಭಿಸಿದೆ. ಈ ರೀತಿಯ ಸುದ್ದಿ ಶುರುವಾಗಲು ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಕಾರಣವಾಗಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಕೆಳಕಂಡಂತಿದೆ.

  ರಜನಿ ಹುಟ್ಟುಹಬ್ಬಕ್ಕೆ ಹೊಂಬಾಳೆ ವಿಷ್!

  ರಜನಿ ಹುಟ್ಟುಹಬ್ಬಕ್ಕೆ ಹೊಂಬಾಳೆ ವಿಷ್!

  ಇಂದು ( ಡಿಸೆಂಬರ್ 12 ) ಸೂಪರ್ ಸ್ಟಾರ್ ರಜನಿಕಾಂತ್ ಅವರ 72ನೇ ವರ್ಷದ ಹುಟ್ಟುಹಬ್ಬ. ಈ ದಿನದಂದು ರಜನಿಕಾಂತ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಶುಭಾಶಯಗಳ ಪೋಸ್ಟ್‌ಗಳು ಹರಿದುಬಂದಿವೆ. ಇನ್ನು ಹೊಂಬಾಳೆ ಫಿಲ್ಮ್ಸ್ ಕೂಡ ರಜನಿಕಾಂತ್ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ಸಿದ್ಧಪಡಿಸಿ ಅದನ್ನು ಪೋಸ್ಟ್ ಮಾಡಿದ್ದು "ಹುಟ್ಟುಹಬ್ಬದ ಶುಭಾಶಯಗಳು ತಲೈವಾ, ನೀವು ಮತ್ತಷ್ಟು ಪಭಾವವನ್ನು ಬೀರಿ ಸ್ಪೂರ್ತಿ ನೀಡಿ" ಎಂದು ಬರೆದುಕೊಂಡಿದೆ.

  ಚಿತ್ರ ಪಕ್ಕಾ ಎಂದ ನೆಟ್ಟಿಗರು

  ಚಿತ್ರ ಪಕ್ಕಾ ಎಂದ ನೆಟ್ಟಿಗರು

  ರಜನಿಕಾಂತ್ ಹುಟ್ಟುಹಬ್ಬದ ದಿನದಂದು ಹೊಂಬಾಳೆ ಫಿಲ್ಮ್ಸ್ ವಿಶೇಷ ಪೋಸ್ಟರ್ ಹಂಚಿಕೊಂಡದ್ದನ್ನು ಕಂಡ ನೆಟ್ಟಿಗರು ರಜನಿಕಾಂತ್ ಹಾಗೂ ಹೊಂಬಾಳೆ ಫಿಲ್ಮ್ಸ್ ಕಾಂಬಿನೇಶನ್‌ನಲ್ಲಿ ಚಿತ್ರ ಮೂಡಿ ಬರುವುದು ಖಚಿತ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಹೊಂಬಾಳೆ ಫಿಲ್ಮ್ಸ್ ಯಾವ ಕಲಾವಿದರೊಂದಿಗೆ ಚಿತ್ರ ಮಾಡುತ್ತೋ ಅಂಥವರಿಗೆ ಮಾತ್ರ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುವುದು. ಹೌದು, ಹೊಂಬಾಳೆ ಫಿಲ್ಮ್ಸ್ ತನ್ನ ಹಿಂದಿನ ಚಿತ್ರಗಳಲ್ಲಿ ನಟಿಸಿದ್ದ ಅಥವಾ ಮುಂದಿನ ಚಿತ್ರಗಳಲ್ಲಿ ನಟಿಸುವ ಕಲಾವಿದರಿಗೆ ಮಾತ್ರ ಹುಟ್ಟುಹಬ್ಬದ ಶುಭಾಶಯ ಕೋರುತ್ತೆ ಎಂಬ ಗಟ್ಟಿಯಾದ ಅಭಿಪ್ರಾಯ ಕನ್ನಡ ಸಿನಿ ರಸಿಕರಲ್ಲಿದೆ.

  ಈ ಹಿಂದೆ ಶುಭಾಶಯ ಕೋರಿದವರ ಜತೆಗೆ ಸಿದ್ಧವಾಗ್ತಿದೆ ಚಿತ್ರಗಳು!

  ಈ ಹಿಂದೆ ಶುಭಾಶಯ ಕೋರಿದವರ ಜತೆಗೆ ಸಿದ್ಧವಾಗ್ತಿದೆ ಚಿತ್ರಗಳು!

  ಇನ್ನು ಸಿನಿ ರಸಿಕರಲ್ಲಿ ಇರುವ ಈ ಅಭಿಪ್ರಾಯ ಕೂಡ ನಿಜ ಎನ್ನುವಂತೆ ಮಾಡುತ್ತಿದೆ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಘೋಷಿಸಿದ ಚಿತ್ರಗಳು. ಏಕೆಂದರೆ ಈಗ ತಾನು ಘೋಷಿಸಿರುವ ಚಿತ್ರಗಳಲ್ಲಿ ನಾಯಕ ಅಥವಾ ನಾಯಕಿಯರಿಗೆಲ್ಲಾ ಹೊಂಬಾಳೆ ಫಿಲ್ಮ್ಸ್ ಈ ಹಿಂದೆಯೇ ಹುಟ್ಟುಹಬ್ಬದಂದು ಶುಭ ಕೋರಿತ್ತು. ಕಳೆದ ವರ್ಷ ಕೀರ್ತಿ ಸುರೇಶ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ಹೊಂಬಾಳೆ ಫಿಲ್ಮ್ಸ್ ಈಗ ಆಕೆಗೆ 'ರಘು ತಾತಾ' ಎಂಬ ಚಿತ್ರವನ್ನು ನಿರ್ಮಿಸುತ್ತಿದೆ. ಅತ್ತ ಪೃಥ್ವಿರಾಜ್ ಸುಕುಮಾರನ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ಹೊಂಬಾಳೆ ಫಿಲ್ಮ್ಸ್ ಪೃಥ್ವಿರಾಜ್ ಅಭಿನಯದ ಟೈಸನ್ ಎಂಬ ಚಿತ್ರವನ್ನು ಘೋಷಿಸಿದೆ. ಅಷ್ಟೇ ಅಲ್ಲದೇ ಕಳೆದ ವರ್ಷ ಫಹಾದ್ ಫಾಸಿಲ್ ಹುಟ್ಟುಹಬ್ಬದಂದು ಪೋಸ್ಟರ್ ಹಂಚಿಕೊಂಡು ಶುಭಕೋರಿದ್ದ ಹೊಂಬಾಳೆ ಫಿಲ್ಮ್ಸ್ ಈಗ ಫಹಾದ್ ಫಾಸಿಲ್ ನಟನೆಯ ಧೂಮಂ ಚಿತ್ರಕ್ಕೆ ಬಂಡವಾಳ ಹೂಡಿದೆ. ಹೀಗಾಗಿ ರಜನಿಕಾಂತ್ ಹುಟ್ಟುಹಬ್ಬದಂದು ಶುಭಕೋರಿರುವ ಹೊಂಬಾಳೆ ಫಿಲ್ಮ್ಸ್ ಮುಂದೊಂದು ದಿನ ರಜನಿಕಾಂತ್ ಚಿತ್ರ ಘೋಷಿಸುವುದು ಪಕ್ಕಾ ಎನ್ನಬಹುದು.

  English summary
  Hombale films likely to produce a film for Super star Rajinikanth. Read on
  Monday, December 12, 2022, 17:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X