For Quick Alerts
  ALLOW NOTIFICATIONS  
  For Daily Alerts

  "ಐಶ್ ನೋಡಿ ನನಗೆ ಹೊಟ್ಟೆಉರಿ" ಎಂದು ಬಹಿರಂಗವಾಗಿಯೇ ಹೇಳಿದ ನಟಿ ಮೀನಾ: ಕಾರಣ ಏನು?

  |

  ಬಹುಭಾಷಾ ನಟಿ ಮೀನಾ ಇವತ್ತಿಗೂ ಪೋಷಕ ನಟಿಯಾಗಿ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಂದ ಈ ಚೆನ್ನೈ ಚೆಲುವೆ ಸೌತ್ ಸೂಪರ್ ಸ್ಟಾರ್‌ಗಳ ಜೊತೆ ನಾಯಕಿಯಾಗಿ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಇತ್ತೀಚೆಗೆ ಮೀನಾ ಅವರ ಪತಿ ವಿದ್ಯಾಸಾಗರ್ ಅನಾರೋಗ್ಯದಿಂದ ನಿಧನರಾಗಿದ್ದರು. ಪತಿಯ ಅಗಲಿಕೆ ನೋವಿನಿಂದ ನಿಧಾನವಾಗಿ ಆಕೆ ಹೊರ ಬರುತ್ತಿದ್ದಾರೆ. ಸದ್ಯ ಮೀನಾ ಮಾಡಿರುವ ಪೋಸ್ಟ್‌ವೊಂದು ಸಖತ್ ವೈರಲ್ ಆಗಿದೆ.

  ಪತಿಯ ಅಗಲಿಕೆಯ ನಂತರ ನಟಿ ಮೀನಾ ಒಂದು ಮಹತ್ವದ ನಿರ್ಧಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ(ಆಗಸ್ಟ್ 13) ನಟಿ ಮೀನಾ ತಮ್ಮ ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದರು. "ಅನಾರೋಗ್ಯದಿಂದ ಕಷ್ಟಪಡುತ್ತಿರುವವರಿಗೆ, ಅವಶ್ಯಕತೆ ಇರುವವರಿಗೆ ಅಂಗಾಂಗ ದಾನ ಮಾಡುವುದರಿಂದ ಅವರ ಕುಟುಂಬದಲ್ಲಾಗುವ ಬದಲಾವಣೆಯನ್ನು ನಾನು ಕಣ್ಣಾರೆ ನೋಡಿದ್ದೇನೆ. ತಮ್ಮ ಪತಿಗೆ ಅಂಗಾಂಗ ದಾನಿಗಳು ಸಿಕ್ಕಿದ್ದರೆ ನನ್ನ ಜೀವನ ಮತ್ತೊಂದು ರೀತಿ ಇರುತ್ತಿತ್ತು" ಎಂದು ಪೋಸ್ಟ್ ಮಾಡಿದ್ದರು.

  ನಟಿ ಮೀನಾ ಪತಿಯ ಸಾವಿಗೆ ಕಾರಣ ಇದೇನೆ: ಇನ್ಯಾರಿಗೂ ಈ ರೀತಿ ಆಗಬಾರದು!ನಟಿ ಮೀನಾ ಪತಿಯ ಸಾವಿಗೆ ಕಾರಣ ಇದೇನೆ: ಇನ್ಯಾರಿಗೂ ಈ ರೀತಿ ಆಗಬಾರದು!

  ಸದ್ಯ ಮೀನಾ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಕುರಿತು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅದರಲ್ಲೂ ಐಶ್ವರ್ಯ ರೈ ಮಾಡಿರುವ ರಾಣಿ ನಂದಿನಿ ಪಾತ್ರವನ್ನು ನಾನು ಮಾಡಬೇಕಿತ್ತು. ಅದು ನನ್ನ ಡ್ರೀಮ್ ರೋಲ್, ಈ ಪಾತ್ರ ಮಾಡುವ ಅವಕಾಶ ಗಿಟ್ಟಿಸಿಕೊಂಡ ಐಶ್ವರ್ಯ ರೈನ ನೋಡಿ ಹೊಟ್ಟೆಕಿಚ್ಚು ಆಗುತ್ತಿದೆ. ಮೊದಲ ಬಾರಿಗೆ ನನ್ನ ಜೀವನದಲ್ಲಿ ಒಬ್ಬರನ್ನು ನೋಡಿ ಅಸೂಯೆ ಆಗುತ್ತಿದೆ. 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ನಟಿಸಿರುವ ಎಲ್ಲರಿಗೂ ಅಭಿನಂದನೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  I am Jealous of Aishwarya Rai actress meena Post Viral

  ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿ ಮಣಿರತ್ನಂ ಸಿನಿಮಾ ತೆರೆಗೆ ತಂದಿದ್ದಾರೆ. ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ತ್ರಿಶಾ, ಐಶ್ವರ್ಯ ರೈ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದ ತಾರಾಗಣದಲ್ಲಿ ನಟಿಸಿದ್ದಾರೆ. ಮೀನಾ ಕೂಡ ಈ ಕಾದಂಬರಿ ಓದಿಕೊಂಡಿದ್ದಾರೆ. ಹಾಗಾಗಿಯೇ ನಂದಿನಿ ಪಾತ್ರ ಮಾಡುವ ಆಸೆ ಇಟ್ಟುಕೊಂಡಿದ್ದರು. ಇನ್ನು 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಎರಡೇ ದಿನಕ್ಕೆ 100 ಕೋಟಿ ರೂ. ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ.

  English summary
  Actress Meena Sagar revealed in an Instagram post that it was her dream to play Nandini, which is being performed by Aishwarya Rai in the Mani Ratnam film, Ponniyin Selvan.
  Sunday, October 2, 2022, 17:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X