For Quick Alerts
  ALLOW NOTIFICATIONS  
  For Daily Alerts

  ಟೈಮ್ಸ್ ಸ್ಕ್ವೇರ್ ಬಿಲ್‌ ಬೋರ್ಡ್‌ನಲ್ಲಿ ಇಳಯರಾಜ!

  |

  ಭಾರತೀಯ ಖ್ಯಾತ ಸಂಗೀತ ಮಾಂತ್ರಿಕ ಇಳಯರಾಜ ಇತ್ತೀಚೆಗೆ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಬಿಲ್‌ಬೋರ್ಡ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. 'ಸ್ಪಾಟಿಫೈ' ಎನ್ನುವ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲ್ಯಾಟ್‌ಫಾರ್ಮ್‌ ಪ್ರಚಾರದ ಭಾಗವಾಗಿ ಇಳಯರಾಜ ಅವರು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಬಿಲ್‌ಬೋರ್ಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

  'ಸ್ಪಾಟಿಫೈ' ಹೆಸರಾಂತ ಸಂಗೀತ ಸಂಯೋಜಕರ ಸಹಯೋಗದೊಂದಿದೆ ಆಗಿರುವ ಒಂದು ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್. 'ಸ್ಪಾಟಿಫೈ' ಜಾಹೀರಾತಿನ ಪ್ರಚಾರದ ವೇಳೆ ಇಳಯರಾಜ ಅವರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

  ಇದೇ ಬಗ್ಗೆ ನವೆಂಬರ್ 19 ರಂದು ಅವರ ಫೇಸ್‌ಬುಕ್‌ನಲ್ಲಿ ಪ್ರಕಟ ಮಾಡಲಾಗಿತ್ತು. "ಅತ್ಯಂತ ಮಂಗಳಕರ ದಿನದಂದು, ನ್ಯೂಯಾರ್ಕ್‌ನ ಬಿಲ್‌ಬೋರ್ಡ್ ಆಫ್ ಟೈಮ್ ಸ್ಕ್ವೇರ್‌ನಲ್ಲಿ "ರಾಜಾ ಆಫ್ ಮ್ಯೂಸಿಕ್" ಎಂದು ಬರೆದುಕೊಳ್ಳಲಾಗಿತ್ತು. ನ್ಯೂಯಾರ್ಕ್‌ನ ಬಿಲ್‌ಬೋರ್ಡ್ ಆಫ್ ಟೈಮ್ಸ್ ಸ್ಕ್ವೇರ್‌ನಲ್ಲಿಯೂ "ರಾಜಾ ಆಫ್ ಮ್ಯೂಸಿಕ್" ಎನ್ನುವ ಸಾಲು ಮೂಡಿತ್ತು.

  ಇಳಯರಾಜ ಅವರು ನ್ಯೂಯಾರ್ಕ್‌ನ ಬಿಲ್‌ಬೋರ್ಡ್ ಆಫ್ ಟೈಮ್ಸ್ ಸ್ಕ್ವೇರ್‌ನಲ್ಲಿ ಕಾಣಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಹಾಗಾಗಿ ಕುಟುಂಬಸ್ಥರು ಮತ್ತು ಚಿತ್ರರಂಗದ ಮಂದಿ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

  ಇಳಯರಾಜ ಅವರ ಸೋದರ ಸೊಸೆ ವಸ್ತ್ರ ವಿನ್ಯಾಸಕಿ ವಾಸುಕಿ ಭಾಸ್ಕರ್ ಮತ್ತು ನಿರ್ದೇಶಕ ವೆಂಕಟ್ ಪ್ರಭು ಸೇರಿದಂತೆ ಉದ್ಯಮದ ಹಲವಾರು ಗಣ್ಯರು ಇಳಯರಾಜ ಅವರನ್ನು ಅಭಿನಂದಿಸಿದ್ದಾರೆ.

  Ilaiyaraaja On Times Square Billboard For First Time

  ಬಿಲ್‌ಬೋರ್ಡ್ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಾಸುಕಿ ಭಾಸ್ಕರ್ ಅವರು "ನಮ್ಮ ಕುಟುಂಬದಲ್ಲಿ ಇದು ಮೊದಲನೆಯದು. ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿರುವ ಬಿಲ್‌ಬೋರ್ಡ್‌ನಲ್ಲಿ ರಾಜಪ್ಪ" ಎಂದು ಟ್ವೀಟ್ ಮಾಡಿದ್ದಾರೆ.

  ಮತ್ತೊಂದು ಟ್ವೀಟ್‌ನಲ್ಲಿ "ಅವರು ನಮ್ಮೆಲ್ಲರಿಗಿಂತ ಯಾವಾಗಲೂ ಮುಂದಿದ್ದಾರೆ... ಕುಟುಂಬದಲ್ಲಿ ಒಟ್ಟಾಗಿರುತ್ತಾರೆ. ರಾಜಪ್ಪ ಅವರನ್ನು ಅಲ್ಲಿ ನೋಡಲು ಸಂತೋಷವಾಯಿತು. ಟೈಮ್ಸ್ ಸ್ಕ್ವೇರ್ ಬಿಲ್‌ಬೋರ್ಡ್‌ನಲ್ಲಿ ಇಳಯರಾಜ" ಎಂದು ಬರೆದುಕೊಂಡಿದ್ದಾರೆ ವಾಸುಕಿ ಭಾಸ್ಕರ್.

  ಇಳಯರಾಜ ಅವರು ಸಂಗೀತ ನಿರ್ದೇಶನ ಮಾಡಿರುವ ವಿದುತಲೈ, ತುಪ್ಪರಿವಾಲನ್ 2, ಮಾಯೋನ್, ಕಡೈಸಿ ವಿವಾಸಾಯಿ, ಮಾಮಾನಿತನ್ ಮತ್ತು ಶಿವರಂಜಿನಿಯುಂ ಇನ್ನುಂ ಸಿಲಾ ಪೆಂಗಲುಂ ಸೇರಿದಂತೆ ಹಲವು ಸಿನಿಮಾಗಳು ಬರಬೇಕಿವೆ.

  English summary
  Ilaiyaraaja On New York Times Square Billboard For First Time,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X