For Quick Alerts
  ALLOW NOTIFICATIONS  
  For Daily Alerts

  ತಮಿಳು ಸಿನಿಮಾಕ್ಕಾಗಿ ಗನ್ ಹಿಡಿದ ಸ್ವಿಂಗ್ ಮಾಸ್ಟರ್ ಇರ್ಫಾನ್ ಪಠಾಣ್

  |

  ಕ್ರಿಕೆಟ್ ಹಾಗೂ ಬಾಲಿವುಡ್ ಭಾರತದ ಹಣವಂತ ಉದ್ಯಮಗಳು. ಎರಡೂ ಸಹ ಪರಸ್ಪರ ಆಳವಾದ ಸಂಬಂಧವನ್ನು ಹೊಂದಿವೆ.

  ಕ್ರಿಕೆಟ್ ಆಟಗಾರರು ಸಿನಿಮಾ ನಟಿಯರನ್ನು ಮದುವೆಯಾಗುವುದು, ಸಿನಿಮಾ ನಟರ ಮಕ್ಕಳು ಕ್ರಿಕೆಟರ್‌ಗಳಾಗುವುದು ಟೈಗರ್ ಪಟೌಡಿ ಕಾಲದಿಂದಲೂ ನಡೆದುಕೊಂಡು ಬಂದಿದೆ.

  ಕೆಲವು ಕ್ರಿಕೆಟರ್‌ಗಳ ಜೀವನ ಸಿನಿಮಾಗಳಾಗಿವೆ, ಹಿಟ್ ಸಹ ಆಗಿವೆ. ಹಲವು ಕ್ರಿಕೆಟರ್‌ಗಳು ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಆದರೆ ಬಹುತೇಕರು ಫೇಲ್ ಆಗಿದ್ದಾರೆ. ಆದರೆ ಈಗ ಮತ್ತೊಬ್ಬ ಕ್ರಿಕೆಟಿಗ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

  ತಮಿಳು ಸಿನಿಮಾರಂಗಕ್ಕೆ ಇರ್ಫಾನ್ ಎಂಟ್ರಿ

  ತಮಿಳು ಸಿನಿಮಾರಂಗಕ್ಕೆ ಇರ್ಫಾನ್ ಎಂಟ್ರಿ

  ಭಾರತ ತಂಡದಲ್ಲಿ ಆಡಿದ್ದ ಪ್ರಖ್ಯಾತ ಬೌಲರ್ ಇರ್ಫಾನ್ ಪಠಾಣ್ ಇದೀಗ ಸಿನಿಮಾ ನಟ ಆಗಿದ್ದಾರೆ. ಅದೂ ಹೀರೋ ಆಗಿ ತಮಿಳು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಇರ್ಫಾನ್ ಪಠಾಣ್. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗಿದೆ.

  ಗನ್ ಹಿಡಿದು ನಿಂತಿರುವ ಇರ್ಫಾನ್ ಪಠಾಣ್

  ಗನ್ ಹಿಡಿದು ನಿಂತಿರುವ ಇರ್ಫಾನ್ ಪಠಾಣ್

  ಬಾಲ್ ಹಿಡಿದು ಸ್ವಿಂಗ್ ಮಾಡುತ್ತಿದ್ದ ಸ್ವಿಂಗ್ ಮಾಸ್ಟರ್ ಇರ್ಫಾನ್ ಪಠಾಣ್, ಸಿನಿಮಾಕ್ಕಾಗಿ ಗನ್ ಹಿಡಿದಿದ್ದಾರೆ. ಇರ್ಫಾನ್ ಗನ್ ಹಿಡಿದು ಕಪ್ಪು ಬಟ್ಟೆ ಧರಿಸಿ ನಿಂತಿರುವ ಪೋಸ್ಟರ್ ಬಿಡುಗಡೆ ಆಗಿದ್ದು, ಸಿನಿಮಾವು ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದೆ ಎಂಬುದನ್ನು ಸಾರಿ ಹೇಳುತ್ತಿದೆ.

  ಫ್ರೆಂಚ್ ಇಂಟರ್‌ಪೋಲ್ ಅಧಿಕಾರಿ ಪಾತ್ರದಲ್ಲಿ ಇರ್ಫಾನ್

  ಫ್ರೆಂಚ್ ಇಂಟರ್‌ಪೋಲ್ ಅಧಿಕಾರಿ ಪಾತ್ರದಲ್ಲಿ ಇರ್ಫಾನ್

  ಸಿನಿಮಾದ ಹೆಸರು ಕೋಬ್ರಾ ಎಂದಿದ್ದು, ಇರ್ಫಾನ್ ಪಠಾಣ್ ಅಸ್ಲಮ್ ಇಲ್ಮಾಜ್ ಎಂಬ ಫ್ರೆಂಚ್ ಇಂಟರ್‌ಪೋಲ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಇರ್ಫಾನ್ ಪಠಾಣ್ ಹುಟ್ಟುಹಬ್ಬವಿದ್ದು, ಇದೇ ಸಂದರ್ಭದಲ್ಲಿ ಇರ್ಫಾನ್ ಅವರ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

  ವಿಕ್ರಂ-ಶ್ರೀನಿಧಿ ಶೆಟ್ಟಿ ನಟನೆ

  ವಿಕ್ರಂ-ಶ್ರೀನಿಧಿ ಶೆಟ್ಟಿ ನಟನೆ

  ಕೋಬ್ರಾ ಸಿನಿಮಾದಲ್ಲಿ ಮುಖ್ಯ ನಾಯಕ ನಟನಾಗಿ ವಿಕ್ರಂ ಅಭಿನಯಿಸಿದ್ದಾರೆ. ಕೆಜಿಎಫ್ ನಾಯಕ ನಟಿ ಶ್ರೀನಿಧಿ ಶೆಟ್ಟಿ ಸಿನಿಮಾದ ನಾಯಕಿಯಾಗಿದ್ದಾರೆ. ಮತ್ತೊಬ್ಬ ಖ್ಯಾತ ನಟಿ ಮಿಯಾ ಇದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಎ.ಆರ್.ರೆಹಮಾನ್ ನೀಡಿದ್ದಾರೆ. ಸಿನಿಮಾದ ನಿರ್ದೇಶನ ಅಜಯ್ ಜ್ಞಾನಮುತ್ತು ಮಾಡಿದ್ದಾರೆ.

  English summary
  Cricketer Irfan Pathan acting in Tamil movie Cobra. Movie poster released today on Irfan's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X