For Quick Alerts
  ALLOW NOTIFICATIONS  
  For Daily Alerts

  'ಅಮ್ಮ'ನ ಮನೆ ಸ್ಮಾರಕವಲ್ಲ ಮದ್ರಾಸ್ ಹೈ ಕೋರ್ಟ್ ತೀರ್ಪು: ಜಯಲಲಿತಾ ಬದುಕಿದ 'ವೇದ ನಿಲಯಂ' ವಿಶೇಷತೆ ಏನು?

  |

  ನಟಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಜಯಲಲಿತಾ ಮತ್ತೆ ಸುದ್ದಿಯಲ್ಲಿದ್ದಾರೆ. ಜಯಲಲಿತಾ ವಾಸವಿದ್ದ ಪೋಯೆಸ್ ಗಾರ್ಡನ್‌ನ 'ವೇದ ನಿಯಲಂ' ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಬೇಕು ಎಂದಿದ್ದ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯಾಗಿದೆ. ಜಯಲಲಿತಾ ಅವರ ವೇದ ನಿಲಯಂ ನಿವಾಸವನ್ನು ಸ್ವಾಧೀನ ಪಡಿಸಿಕೊಂಡಿದ್ದ ಹಿಂದಿನ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಬುಧವಾರ( ನವೆಂಬರ್ 24) ರದ್ದುಗೊಳಿಸಿದೆ.

  ಜಯಲಲಿತಾ ಬದುಕಿದ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವುದು ಹಿಂದಿನ ಎಐಎಡಿಎಂಕೆ ಸರ್ಕಾರದ ನಿರ್ಧಾರವಾಗಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಜಯಲಲಿತಾ ಸೋದರ ಸಂಬಂಧಿ ಹಾಗೂ ಕಾನೂನಾತ್ಮಕ ಉತ್ತರಾಧಿಕಾರಿಗಳಾದ ದೀಪಾ ಮತ್ತು ದೀಪಕ್ ಹೈಕೋರ್ಟ್ ಮೊರೆ ಹೋಗಿದ್ದರು. ಹಿಂದಿನ ಎಐಎಡಿಎಂಕೆ ಸರ್ಕಾರ ಸ್ಮಾರಕವನ್ನಾಗಿ ಪರಿವರ್ತನೆ ಮಾಡುವ ನಿರ್ಧಾರ ಪ್ರಶ್ನಿಸಿ, ಒಬ್ಬರ ಹೆಸರಿನಲ್ಲಿ ಎರಡು ಸ್ಮಾರಕಗಳು ಅಗತ್ಯವಿಲ್ಲ. ಕಾನೂನಾತ್ಮಕವಾಗಿ ಜಯಲಲಿತಾ ಉತ್ತರಾಧಿಕಾರಿ ದೀಪಾ ಮತ್ತು ದೀಪಕ್ ಅವರಿಗೆ 3 ವಾರದೊಳಗೆ ಹಸ್ತಾಂತರಿಸಲು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಇಷ್ಟೊಂದು ಸಂಚಲನ ಸೃಷ್ಟಿಸಿರುವ ಜಯಲಲಿತಾ 'ವೇದ ನಿಲಯಂ' ವಿಶೇಷತೆ ಏನು? ಮುಂದೆ ಓದಿ.

  'ವೇದ ನಿಲಯಂ' ಜಯಲಲಿತಾ ಖರೀದಿಸಿದ ಮೊದಲ ಆಸ್ತಿ

  'ವೇದ ನಿಲಯಂ' ಜಯಲಲಿತಾ ಖರೀದಿಸಿದ ಮೊದಲ ಆಸ್ತಿ

  1965ರಲ್ಲಿ ಜಯಲಲಿತಾ ನಟಿಯಾಗಿ ಗುರುತಿಸಿಕೊಂಡಿದ್ದರು. ಅಂದಿನ ತಮಿಳಿನ ಸೂಪರ್‌ಸ್ಟಾರ್ ಜೊತೆ ಒಂದರ ಹಿಂದೊಂದು ಸಿನಿಮಾಗಳಲ್ಲಿ ಹೆಸರು ಮಾಡಿದ್ದರು. ಜಯಲಲಿತಾ ಜೊತೆ ತಾಯಿ ಸಂಧ್ಯಾ ಕೂಡ ಸಿನಿಮಾರಂಗದಲ್ಲಿ ಇದ್ದಿದ್ದರಿಂದ ಇಬ್ಬರೂ ಸೇರಿ ಅಂದಿನ ಮದ್ರಾಸಿನ ಪೊಯಿಸ್ ಗಾರ್ಡನ್‌ನಲ್ಲಿ ಮನೆಕಟ್ಟಲು ಜಾಗ ಖರೀದಿ ಮಾಡಿದ್ದರು. 1967ರಲ್ಲಿ 1.32 ಲಕ್ಷಕ್ಕೆ ಸೈಟ್ ಖರೀದಿ ಮಾಡಿದ್ದರು. ಅದೇ ಜಾಗದಲ್ಲೇ 'ವೇದ ನಿಲಯಂ' ಮನೆ ಕಟ್ಟಲು ಮುಂದಾಗಿದ್ದಾರೆ.

  ಜಯಲಲಿತಾ ನಿವಾಸಕ್ಕೆ 'ವೇದ ನಿಲಯಂ' ಹೆಸರೇಕೆ?

  ಜಯಲಲಿತಾ ನಿವಾಸಕ್ಕೆ 'ವೇದ ನಿಲಯಂ' ಹೆಸರೇಕೆ?

  ಜಯಲಲಿತಾ ಹಾಗೂ ತಾಯಿ ಸಂಧ್ಯಾ ಜಾಗ ಖರೀದಿ ಬಳಿಕ ಮನೆ ಕಟ್ಟಲು ಆರಂಭಿಸಿದ್ದರು. ಆದರೆ, 'ವೇದ ನಿಲಯಂ' ಪೂರ್ಣಗೊಳ್ಳುವ ಮೊದಲೇ ತಾಯಿ ಸಂಧ್ಯಾ ನಿಧನ ಹೊಂದಿದ್ದರು. ಹೀಗಾಗಿ ಜಯಲಲಿತಾ ಅವರ ಅಮ್ಮನ ಹೆಸರನ್ನೇ ಖರೀದಿಸಿದ ಮೊದಲ ನಿವಾಸಕ್ಕೆ ಇಟ್ಟಿದ್ದರು. ಈ ಹೆಸರಿಡಲು ಇನ್ನೊಂದು ಕಾರಣವಿದೆ. 'ವೇದ ನಿಲಯಂ' ಅನ್ನುವುದು ಸಂಧ್ಯಾ ಅವರ ಹುಟ್ಟಿದ ಹೆಸರಾಗಿತ್ತು. 1972ರಲ್ಲಿ ಜಯಲಲಿತಾ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು.

  ಒಂದೇ ಸೈಟಿನಲ್ಲಿ 2 ಬಂಗಲೆ ಕಟ್ಟಿದ್ದ 'ತಲೈವಿ'

  ಒಂದೇ ಸೈಟಿನಲ್ಲಿ 2 ಬಂಗಲೆ ಕಟ್ಟಿದ್ದ 'ತಲೈವಿ'

  'ವೇದ ನಿಲಯಂ' ಜಾಗದಲ್ಲಿ ಎರಡು ಬಂಗಲೆಗಳಿವೆ. ಈ ಜಾಗದಲ್ಲಿ ಮೊದಲು ಎರಡು ಅಂತಸ್ಥಿನ ಬಂಗಲೆ ಕಟ್ಟಲಾಗಿತ್ತು. ಗ್ರೌಂಡ್ ಫ್ಲೋರ್‌ನಲ್ಲಿ ನಾಲ್ಕು ಬೆಡ್ ರೂಮ್‌ಗಳಿತ್ತು. ಡೈನಿಂಗ್ ಹಾಲ್ ಹಾಗೂ ಅತಿಥಿ ಗೃಹ, ಎರಡು ಆಫೀಸ್ ರೂಮ್, ಎರಡು ಸ್ಟೋರ್ ರೂಮ್ ಹಾಗೂ ಒಂದು ಅಡುಗೆ ಮನೆ ಇತ್ತು. ಮೊದಲ ಅಂತಸ್ಥಿನಲ್ಲಿ ಜಯಲಲತಾ ಬೆಡ್ ರೂಮ್ ಇತ್ತು. ಅಲ್ಲಿದೆ ಮನೆಯಲ್ಲಿ ಕೆಲಸ ಮಾಡುವವರಿಗಾಗಿ ರೂಮ್‌ಗಳಿತ್ತು.

  1991ರಲ್ಲಿ ವೇದ ನಿಲಯಂ ನವೀಕರಣ

  1991ರಲ್ಲಿ ವೇದ ನಿಲಯಂ ನವೀಕರಣ

  1991ರಲ್ಲಿ ಜಯಲಲಿತಾ ಮುಖ್ಯಮಂತ್ರಿ ಆದ ಬಳಿಕ ಇದೇ 'ವೇದ ನಿಲಯಂ' ನಿವಾಸವನ್ನು ನವೀಕರಣ ಮಾಡಲಾಗಿತ್ತು. ಈ ಬಂಗಲೆಗೆ ಎರಡು ಡೋರ್ ನಂಬರ್ ಇತ್ತು. ಹೊಸ ಮನೆಗೆ ಡೋರ್ ನಂ 36 ಹಾಗೂ ಹಳೆ ಮನೆಗೆ ಡೋರ್ ನಂ 31(ಎ). 1995ರಲ್ಲಿ ಹೊಸ ಬಂಗಲೆಯನ್ನು ಇದೇ ಜಾಗದಲ್ಲಿ ಕಟ್ಟಲಾಗಿತ್ತು. ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ಜಯಲಲಿತಾ ವೇದ ನಿಲಯಂ ನಿವಾಸದಲ್ಲಿ ಸುಮಾರು 30 ವರ್ಷ ವಾಸವಿದ್ದಾರೆ. ಜಯಲಲಿತಾ ತನ್ನೊಂದಿಗೆ ಕೆಲಸ ಮಾಡುವವರನ್ನೆಲ್ಲಾ ಇದೇ ಬಂಗಲೆಯಲ್ಲಿ ಜಾಗ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಸುಮಾರು 20 ರಿಂದ 30 ರೂಮ್‌ಗಳನ್ನು ಕಟ್ಟಿಸಿದ್ದರು ಎನ್ನುವ ವರದಿ ಇದೆ.

  English summary
  AIADMK wanted former chief minister late Jayalalithaa’s house Veda Nilayam into a memorial. But the Madras High Court ordered that Poes Garden house should be handed over to her nephew, niece.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X