For Quick Alerts
  ALLOW NOTIFICATIONS  
  For Daily Alerts

  'ಇಂಡಿಯನ್-2' ಸೆಟ್ ನಲ್ಲಾದ ದುರಂತದಿಂದ ಶಾಕ್: ಮನೆಯಿಂದ ಹೊರಗೆ ಬರುತ್ತಿಲ್ಲ ಕಾಜಲ್.!

  |

  ಎಸ್.ಶಂಕರ್ ನಿರ್ದೇಶನದ ಕಮಲ್ ಹಾಸನ್, ಕಾಜಲ್ ಅಗರ್ವಾಲ್ ಅಭಿನಯದ 'ಇಂಡಿಯನ್-2' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಸಂಭವಿಸಿದ ದುರಂತದಲ್ಲಿ ಮೂರು ಮಂದಿ ಮೃತಪಟ್ಟಿದ್ದರು. ಸೆಟ್ ನಲ್ಲಿ ಕ್ರೇನ್ ಕುಸಿದು ಬಿದ್ದ ಪರಿಣಾಮ, ಮೂವರು ಸಹಾಯಕ ನಿರ್ದೇಶಕರು ಸಾವನ್ನಪ್ಪಿದ್ದರು.

  ಈ ದುರ್ಘಟನೆ ನಡೆದಾಗ ನಟಿ ಕಾಜಲ್ ಅಗರ್ವಾಲ್ ಕೂಡ ಸೆಟ್ ನಲ್ಲೇ ಇದ್ದರು. ಕೂದಲೆಳೆ ಅಂತರದಲ್ಲಿ ಕಾಜಲ್ ಅಗರ್ವಾಲ್ ಪ್ರಾಣಾಪಾಯದಿಂದ ಪಾರಾಗಿದ್ದರು. ದುರಂತದಿಂದಾಗಿ ಶಾಕ್ ಗೆ ಒಳಗಾಗಿರುವ ನಟಿ ಕಾಜಲ್ ಅಗರ್ವಾಲ್ ಮನೆಯಿಂದ ಹೊರಗೆ ಬರುತ್ತಿಲ್ಲವಂತೆ.

  'ಇಂಡಿಯನ್ 2' ಸೆಟ್ ನಲ್ಲಿ ಭೀಕರ ಅಪಘಾತ: 3 ಸಹಾಯಕ ನಿರ್ದೇಶಕರು ಮರಣ'ಇಂಡಿಯನ್ 2' ಸೆಟ್ ನಲ್ಲಿ ಭೀಕರ ಅಪಘಾತ: 3 ಸಹಾಯಕ ನಿರ್ದೇಶಕರು ಮರಣ

  ಶಾಕ್ ನಿಂದ ಹೊರಬರಲು ಕಾಜಲ್ ಅಗರ್ವಾಲ್ ಗೆ ಸ್ವಲ್ಪ ಸಮಯ ಬೇಕಾಗಿದೆ. ಹೀಗಾಗಿ, ದಿಗ್ಭ್ರಮೆಗೆ ಒಳಗಾಗಿರುವ ಕಾಜಲ್ ಅಗರ್ವಾಲ್ ಇನ್ನೆರಡು ವಾರ ಶೂಟಿಂಗ್ ಗೆ ಬರಲ್ಲ ಅಂತ 'ಇಂಡಿಯನ್-2' ಚಿತ್ರತಂಡಕ್ಕೆ ತಿಳಿಸಿದ್ದಾರೆ.

  'ಇಂಡಿಯನ್-2' ದುರಂತ: ಮೃತರ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ನೀಡಿದ ಕಮಲ್ ಹಾಸನ್'ಇಂಡಿಯನ್-2' ದುರಂತ: ಮೃತರ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ನೀಡಿದ ಕಮಲ್ ಹಾಸನ್

  ಅಲ್ಲದೇ, ಯಾವ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಮನಸ್ಸು ಕೂಡ ಕಾಜಲ್ ಅಗರ್ವಾಲ್ ಗೆ ಇಲ್ಲ. ಆದ್ದರಿಂದ, ಮನೆಯಿಂದಾಚೆ ಕಾಜಲ್ ಅಗರ್ವಾಲ್ ಕಾಲಿಡುತ್ತಿಲ್ಲ.

  English summary
  Kajal Agarwal is in shock because of Indian 2 incident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X