Just In
Don't Miss!
- News
ಬಜೆಟ್ 2021; ಹೊಸ ಬುಲೆಟ್ ರೈಲು ಮಾರ್ಗಗಳ ಘೋಷಣೆ?
- Automobiles
ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 5 ಬೈಕುಗಳಿವು
- Finance
ಬಜೆಟ್ 2021: ಎಚ್ ಡಿಎಫ್ ಸಿ ಸೆಕ್ಯೂರೀಟಿಸ್ ನಿಂದ ಐದು ಖರೀದಿ ಆಯ್ಕೆ
- Lifestyle
ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮದುವೆ ನಂತರ ಹೊಸ ಪ್ರಾಜೆಕ್ಟ್‌ಗೆ ಸಹಿ ಮಾಡಿದ ಕಾಜಲ್ ಅಗರ್‌ವಾಲ್
ಬಹುಭಾಷೆ ನಟಿ ಕಾಜಲ್‌ಅಗರ್‌ವಾಲ್ ಮುಂಬೈ ಮೂಲದ ಉದ್ಯಮಿ ಗೌತಮ್ ಜೊತೆ ಅಕ್ಟೋಬರ್ ತಿಂಗಳಿನಲ್ಲಿ ವಿವಾಹವಾದರು. ಮದುವೆ ಕಾರಣದಿಂದ ಬ್ರೇಕ್ ತೆಗೆದುಕೊಂಡಿದ್ದ ಕಾಜಲ್ ನಂತರ ಮಾಲ್ಡೀವ್ಸ್‌ನಲ್ಲಿ ಹನಿಮೂನ್ ಎಂಜಾಯ್ ಮಾಡಿದ್ದರು.
ಮದುವೆ ಮೂಡ್‌ನಿಂದ ಹೊರಬಂದ ಕಾಜಲ್ ಈಗ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ತಮಿಳಿನಲ್ಲಿ ಹಾರರ್ ಚಿತ್ರಕ್ಕೆ ಸಹಿ ಮಾಡುವ ಮೂಲಕ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದ್ದಾರೆ.
ಕಲ್ಯಾಣ್ ಆಕ್ಷನ್ ಕಟ್ ಹೇಳಲಿರುವ 'ಗೋಸ್ಟಿ' ಚಿತ್ರದಲ್ಲಿ ಕಾಜಲ್ ನಟಿಸುತ್ತಿದ್ದು, ವೃತ್ತ ಜೀವನದಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ.
'ಆಚಾರ್ಯ'ಗಾಗಿ ಹನಿಮೂನ್ ಮುಗಿಸಿ ಭಾರತಕ್ಕೆ ಬಂದ ನಟಿ ಕಾಜಲ್ ಅಗರ್‌ವಾಲ್
ಮದುವೆ ಬಳಿಕ ಕಾಜಲ್ ಸಹಿ ಮಾಡಿದ ಮೊದಲ ಸಿನಿಮಾ ಇದು. ಮಹಿಳಾ ಪ್ರಧಾನ ಕಥೆ ಹೊಂದಿರುವ ಈ ಚಿತ್ರ ಹಾರರ್ ಥ್ರಿಲ್ಲಿಂಗ್ ಆಗಿದೆ. ಮೂಲಗಳಿಂದ ಈ ಪ್ರಾಜೆಕ್ಟ್ ಪಕ್ಕಾ ಆಗಿದ್ದು, ಇದುವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಅಂದ್ಹಾಗೆ, ಈ ಚಿತ್ರದಲ್ಲಿ ಸುಮಾರು 23 ಅಥವಾ 23 ಜನ ಪೋಷಕ ಹಾಗೂ ಹಾಸ್ಯ ಕಲಾವಿದರು ಇರಲಿದ್ದಾರಂತೆ. ಯೋಗಿ ಬಾಬು, ಊರ್ವಶಿ, ಟೋನಿ, ಮೊಟ್ಟೈ ರಾಜೇಂದ್ರನ್, ದೇವದರ್ಶನಿ, ಶ್ರೀಮಾನ್ ಸೇರಿದಂತೆ ಹಲವರು ಪ್ರಮುಖ ಕಲಾವಿದರು ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸ್ಟಾರ್ ನಟಿಯರೆಲ್ಲಾ ಮಾಲ್ಡೀವ್ಸ್ಗೆ ಹೋಗುತ್ತಿರುವುದರ ಹಿಂದಿನ ಕಾರಣ ಇಲ್ಲಿದೆ
ಈ ಚಿತ್ರವನ್ನು ಹೊರತುಪಡಿಸಿ ಇನ್ನು ನಾಲ್ಕೈದು ಸಿನಿಮಾಗಳಲ್ಲಿ ಕಾಜಲ್ ನಟಿಸುತ್ತಿದ್ದಾರೆ. ಕಮಲ್ ಹಾಸನ್ ನಟನೆಯ ಇಂಡಿಯನ್ 2, ಚಿರಂಜೀವಿ ನಟನೆಯ ಆಚಾರ್ಯ, ಹೇ ಸಿನಾಮಿಕಾ, ಪ್ಯಾರಿಸ್ ಪ್ಯಾರಿಸ್, ಮೋಸಗಾಳ್ಳು ಹಾಗೂ ಮುಂಬೈ ಸಗಾ ಚಿತ್ರಗಳಲ್ಲಿ ಕಾಜಲ್ ಅಭಿನಯ ಇದೆ.