For Quick Alerts
  ALLOW NOTIFICATIONS  
  For Daily Alerts

  ಪೊಲೀಸರ ಸಮನ್ಸ್‌ಗೆ ಕೇರ್ ಮಾಡ್ತಿಲ್ಲ, ಶೂಟಿಂಗ್‌ಗೆ ಹಾಜರಾದ ಕಂಗನಾ

  |

  ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಮೂರನೇ ಬಾರಿ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದ್ವೇಷ ಹರಡಿಸುವ ಟ್ವೀಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನವೆಂಬರ್ 23ರೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ನೀಡಲಾಗಿದೆ.

  ಈ ಹಿಂದೆ ಎರಡು ಸಲ ನೋಟಿಸ್ ನೀಡಿದ್ದರೂ ಕಂಗನಾ ರಣಾವತ್ ಆಗಲಿ, ಆಕೆಯ ಸಹೋದರಿಯಾಗಲಿ ಪೊಲೀಸ್ ಠಾಣೆಗೆ ಹೋಗಿಲ್ಲ. ಈಗ ಮೂರನೇ ಬಾರಿ ಸಮನ್ಸ್ ನೀಡಲಾಗಿದೆ.

  ಕಂಗನಾಗೆ ಮೂರನೇ ಬಾರಿ ಸಮನ್ಸ್ ನೀಡಿದ ಮುಂಬೈ ಪೊಲೀಸರುಕಂಗನಾಗೆ ಮೂರನೇ ಬಾರಿ ಸಮನ್ಸ್ ನೀಡಿದ ಮುಂಬೈ ಪೊಲೀಸರು

  ಮುಂಬೈ ಪೊಲೀಸರ ಸಮನ್ಸ್ ಕುರಿತು ತಲೆಕೆಡಿಸಿಕೊಳ್ಳದ ಕಂಗನಾ ರಣಾವತ್ ಮಾತ್ರ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇಷ್ಟು ದಿನ ಹಿಮಾಚಲ ಪ್ರದೇಶದಲ್ಲಿ ಮದುವೆಯಲ್ಲಿದ್ದ ಕಂಗನಾ, ಈಗ ಜಯಲಲಿತಾ ಬಯೋಪಿಕ್ ಚಿತ್ರದ ಶೂಟಿಂಗ್‌ಗೆ ಹಾರಜರಾಗಿದ್ದಾರೆ.

  ಚಿತ್ರದ ನಿರ್ಮಾಪಕ ಶೈಲೇಶ್ ಆರ್ ಈ ಕುರಿತು ವೆಬ್‌ಸೈಟ್‌ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ''ಕಂಗನಾ ರಣಾವತ್ ಇಂದಿನಿಂದ ತಲೈವಿ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಡಿಸೆಂಬರ್ 10ನೇ ತಾರೀಖಿನವರೆಗೂ ಶೂಟಿಂಗ್ ನಡೆಯಲಿದೆ'' ಎಂದು ತಿಳಿಸಿದ್ದಾರೆ.

  ಎಲ್ ವಿಜಯ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಅರವಿಂದ್ ಸ್ವಾಮಿ ದಿವಂಗತ ನಟ ಎಂಜಿಆರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಂಗನಾ ರಣಾವತ್ ತಮಿಳುನಾಡು ಮಾಜಿಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಪ್ರಕಾಶ್ ರಾಜ್ ಅವರು ಕರುಣಾನಿಧಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

  ತಮಿಳು ಸ್ಟಾರ್ ಡೈರೆಕ್ಟರ್ ಸಿನಿಮಾ ಮೂಲಕ ಮತ್ತೆ ಒಂದಾದ ಶಿವಣ್ಣ, ಡಾಲಿ | Filmibeat Kannada

  ವಕೀಲರೊಬ್ಬರು ಕಂಗನಾ ರಣೌತ್ ಹಾಗೂ ರಂಗೋಲಿ ಅವರ ಟ್ವೀಟ್‌ಗಳು ದ್ವೇಷಗಳನ್ನು ಹರಡುತ್ತಿರುವ ಬಗ್ಗೆ, ಉದ್ರೇಕಕಾರಿ ಟ್ವೀಟ್‌ಗಳನ್ನು ಮಾಡುತ್ತಿರುವ ಬಗ್ಗೆ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು, ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಈ ಹಿನ್ನೆಲೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

  English summary
  Bollywood actress Kangana Ranaut joins set of Thalaivi from today. other hand mumbai police had summons to actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X