For Quick Alerts
  ALLOW NOTIFICATIONS  
  For Daily Alerts

  'ತಲೈವಿ'ಗಾಗಿ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ ಕಂಗನಾ: ಗಮನ ಸೆಳೆಯುತ್ತಿದೆ ಹೊಸ ಲುಕ್

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡು, ಪೊಲೀಸ್ ಸ್ಟೇಷನ್, ಕೋರ್ಟ್ ಅಂತ ಅಲೆಯುತ್ತಿದ್ದರೂ ಸಿನಿಮಾವನ್ನು ನಿರ್ಲಕ್ಷ್ಯ ಮಾಡಿಲ್ಲ. ವಿವಾದಗಳ ಜೊತೆಗೆ ಕಂಗನಾ ಸಿನಿಮಾಗಳಲ್ಲೂ ನಿರತರಾಗಿದ್ದಾರೆ.

  ಸಿನಿಮಾಗಾಗಿ ಕಂಗನಾ ಸಾಕಷ್ಟು ತಯಾರಿ ನಡೆಸುತ್ತಾರೆ. ತನ್ನ ಪಾತ್ರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ತಲೈವಿ ಸಿನಿಮಾ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಾಧಾರಿತ ತಲೈವಿ ಸಿನಿಮಾದಲ್ಲಿ ಕಂಗನಾ ನಟಿಸಿದ್ದಾರೆ.

  ರಿಪ್ಡ್‌ ಜೀನ್ಸ್ ಚರ್ಚೆ: ಯುವಕರು ಭಿಕ್ಷುಕರಂತೆ ಕಾಣುತ್ತಿದ್ದಾರೆ ಎಂದ ಕಂಗನಾ

  ಈ ಸಿನಿಮಾಗಾಗಿ ಕಂಗನಾ ನಡೆಸುವ ತಯಾರಿ, ಪಾತ್ರಕ್ಕಾಗಿ ಅವರ ಬದಲಾವಣೆ ಕಂಡು ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ಇತ್ತೀಚಿಗೆ ತಲೈವಿ ಸಿನಿಮಾದ ಒಂದಿಷ್ಟು ಪೋಸ್ಟರ್‌ಗಳನ್ನು ಕಂಗನಾ ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ಗಳಲ್ಲಿ ಕಂಗನಾ ಸಿಕ್ಕಾಪಟ್ಟೆ ದಪ್ಪ ಕಾಣಿಸುತ್ತಿದ್ದಾರೆ.

  ತಲೈವಿಗಾಗಿ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ ಕಂಗನಾ

  ತಲೈವಿಗಾಗಿ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ ಕಂಗನಾ

  ಜಯಲಲಿತಾ ಅವರ ಹಾಗೆ ಕಾಣಿಸಬೇಕೆಂದು ತೆಳ್ಳಗೆ ಬಳಕುವ ಬಳ್ಳಿಯ ಹಾಗಿದ್ದ ಕಂಗನಾ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಜಯಲಲಿತಾ ಹಾಗೆ ಕಾಣಿಸುವ ಕಂಗನಾ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಜಯಲಲಿತಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಮೊದಲು ನಟಿಯಾಗಿ ಖ್ಯಾತಿಗಳಿಸಿದ್ದರು. ನಟಿಯಾಗಿದ್ದ ಜಯಲಲಿತಾ ಲುಕ್ ಅನ್ನು ಕಂಗನಾ ಹಂಚಿಕೊಂಡಿದ್ದಾರೆ.

  ಕಂಗನಾ ಫೋಟೋಗಳಿಗೆ ಅಭಿಮಾನಿಗಳು ಫಿದಾ

  ಕಂಗನಾ ಫೋಟೋಗಳಿಗೆ ಅಭಿಮಾನಿಗಳು ಫಿದಾ

  ನಟಿ ಮತ್ತು ರಾಜಕೀಯ ಎರಡರಲ್ಲೂ ಖ್ಯಾತಿ ಗಳಿಸಿದ್ದ ಜಯಲಲಿತಾ ಅವರ ಎರಡು ಜೀವನವನ್ನು ತಲೈವಿ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಎರಡು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲು ಕಂಗನಾ ದೇಹದ ತೂಕವನ್ನು ಹೆಚ್ಟು ಕಡಿಮೆ ಮಾಡಿಕೊಂಡಿದ್ದಾರೆ. ಕಂಗನಾ ಹಂಚಿಕೊಂಡಿರುವ ಫೋಟೋಗಲ್ಲಿ ಬದಲಾವಣೆ ಕಾಣುತ್ತಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಕಂಗನಾ ರನೌತ್ ವಿರುದ್ಧ ಮತ್ತೊಂದು ದೂರು ದಾಖಲು

  ಫೋಟೋ ಹಂಚಿಕೊಂಡು ಕಂಗನಾ ಹೇಳಿದ್ದೇನು?

  ಫೋಟೋ ಹಂಚಿಕೊಂಡು ಕಂಗನಾ ಹೇಳಿದ್ದೇನು?

  ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, 'ತಲೈವಿ ಟ್ರೈಲರ್ ಲಾಂಚ್‌ಗೆ ಒಂದು ದಿನ ಮಾತ್ರ ಬಾಕಿ ಇದೆ. ಈ ಬಯೋಪಿಕ್ ಚಿತ್ರೀಕರಣ ಸಮಯದಲ್ಲಿ ನಾನು 20 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತು ಕೆಲವೇ ತಿಂಗಳಲ್ಲಿ ತೂಕ ಕಡಿಮೆ ಮಾಡುವುದು ದೊಡ್ಡ ಸವಾಲಾಗಿತ್ತು. ಕೆಲವೇ ಗಂಟೆಗಳಲ್ಲಿ ಜಯ ಪಾತ್ರ ನಿಮ್ಮದಾಗಲಿದೆ' ಎಂದು ಹೇಳಿದ್ದಾರೆ.

  ಯುವರತ್ನ ಟ್ರೈಲರ್ ನೋಡಿ ಫಿದಾ ಆದ್ರು ಅಧೀರ ಸಂಜಯ್ ದತ್ | Filmibeat Kannada
  ಮಾರ್ಚ್ 23ಕ್ಕೆ ತಲೈವಿ ಟ್ರೈಲರ್

  ಮಾರ್ಚ್ 23ಕ್ಕೆ ತಲೈವಿ ಟ್ರೈಲರ್

  ಬಹುನಿರೀಕ್ಷೆಯ ತಲೈವಿ ಟ್ರೈಲರ್ ಮಾರ್ಚ್ 23ಕ್ಕೆ ಬಿಡುಗಡೆಯಾಗುತ್ತಿದೆ. ತಮಿಳುನಾಡಿನ ರಾಜಕೀಯದಲ್ಲಿ ಜಯಲಲಿತಾ ಅವರು ಪ್ರಭಾವಿ ಮಹಿಳೆಯಾಗಿದ್ದರು. ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ಜೀವನ ತೆರೆಮೇಲೆ ಬರುತ್ತಿದೆ ಅಂದ್ಮೇಲೆ ಅಭಿಮಾನಿಗಳ ಕುತೂಹಲ ಮತ್ತು ನಿರೀಕ್ಷೆ ಸಹಜವಾಗಿ ಜಾಸ್ತಿಯಾಗಿರುತ್ತೆ. ತಲೈವಿಯಾಗಿ ಕಂಗನಾ ಹೇಗೆ ನಟಿಸಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  ತಲೈವಿ ಸಿನಿಮಾ ತಮಿಳು ಮಾತ್ರಲ್ಲದೆ ತೆಲುಗಿನಲ್ಲೂ ತೆರೆಗೆ ಬರುತ್ತಿದೆ. ಬಹುನಿರೀಕ್ಷೆಯ ಬಯೋಪಿಕ್‌ಗೆ ತಮಿಳು ನಿರ್ದೇಶಕ ಎ.ಎಲ್ ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Bollywood Actress Kangana Ranaut shares weight transformation pictures from Thalaivi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X