For Quick Alerts
  ALLOW NOTIFICATIONS  
  For Daily Alerts

  ಕತ್ರೀನಾ ಕೈಫ್ ಹುಟ್ಟುಹಬ್ಬ: ದಳಪತಿ ವಿಜಯ್ ಜೊತೆ ಮೊದಲ ಜಾಹಿರಾತಿನಲ್ಲಿ ಮಿಂಚಿದ್ದ ವಿಡಿಯೋ ವೈರಲ್

  |

  ಬಾಲಿವುಡ್ ನಟಿ ಕತ್ರೀನಾ ಕೈಫ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಕತ್ರೀನಾ 37 ವಸಂತಕ್ಕೆ ಕಾಲಿಟ್ಟಿದ್ದಾರೆ. ಕತ್ರೀನಾಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಶುಭಹಾರೈಸಿತ್ತಿದ್ದಾರೆ. ಲಾಕ್ ಡೌನ್ ಪರಿಣಾಮ ಕತ್ರೀನಾ ಹುಟ್ಟುಹಬ್ಬವನ್ನು ಮನೆಯಲ್ಲಿಯೆ ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ.

  ಸುಮಾರು 17 ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರೀಯರಾಗಿರುವ ಕತ್ರೀನಾ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದಾರೆ. 2003ರಲ್ಲಿ ಬೂಮ್ ಸಿನಿಮಾದ ಮೂಲಕ ಕತ್ರೀನಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಯಶಸ್ವಿ ನಾಯಕಿಯಾಗಿ ಹೊರಹೊಮ್ಮಿರುವ ಕತ್ರೀನಾ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾದಲ್ಲಿ ಖ್ಯಾತಿಗಳಿಸುವ ಮೊದಲ ಕತ್ರೀನಾ ಜಾಹಿರಾತಿನಲ್ಲಿ ಗುರುತಿಸಿಕೊಂಡಿದ್ದರು. ವಿಶೇಷ ಅಂದರೆ ದಳಪತಿ ವಿಜಯ್ ಜೊತೆ ಮೊದಲ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಓದಿ...

  ವಿಜಯ್ ಸಿನಿಮಾದಲ್ಲಿ ನಟಿಸಿ ತಪ್ಪು ಮಾಡಿದೆ ಎಂದ ನಟಿ ಅಕ್ಷರಾ ಗೌಡವಿಜಯ್ ಸಿನಿಮಾದಲ್ಲಿ ನಟಿಸಿ ತಪ್ಪು ಮಾಡಿದೆ ಎಂದ ನಟಿ ಅಕ್ಷರಾ ಗೌಡ

  ವಿಜಯ್ ಜೊತೆ ಮೊದಲ ಜಾಹಿರಾತು

  ವಿಜಯ್ ಜೊತೆ ಮೊದಲ ಜಾಹಿರಾತು

  ಕತ್ರೀನಾ ನಟಿಯಾಗಿ ಬಾಲವುಡ್ ಗೆ ಎಂಟ್ರಿ ಕೊಡುವ ಮೊದಲು ರೂಪರ್ಶಿಯಾಗಿದ್ದರು. ಜೊತೆಗೆ ಜಾಹಿರಾತು ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು. ಕತ್ರೀನಾ ಕೈಫ್ ಮೊದಲ ಜಾಹಿರಾತಿನಲ್ಲಿ ದಕ್ಷಿಣ ಭಾರತದ ಖ್ಯಾತ ನಟನ ಜೊತೆ ಕಾಣಿಸಿಕೊಂಡಿದ್ದರು. ಹೌದು, ದಳಪತಿ ವಿಜಯ್ ಜೊತೆ ಮೊದಲ ಜಾಹಿರಾತಿನಲ್ಲಿ ಕತ್ರೀನಾ ಮಿಂಚಿದ್ದರು. ಈ ಜಾಹಿರಾತು ಕತ್ರೀನಾ ಕೈಫ್ ಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದ್ದಲ್ಲೆ ಬಾಲಿವುಡ್ ನಲ್ಲಿ ಬೇಡಿಕೆಯೂ ಹೆಚ್ಚಾಯಿತು.

  ವಿಜಯ್ ಜೊತೆ ಬ್ಯಾಲೆ ನೃತ್ಯ ಮಾಡಿರುವ ಕತ್ರೀನಾ

  ವಿಜಯ್ ಜೊತೆ ಬ್ಯಾಲೆ ನೃತ್ಯ ಮಾಡಿರುವ ಕತ್ರೀನಾ

  ದಳಪತಿ ವಿಜಯ್ ಮತ್ತು ಕತ್ರೀನಾ ನಟಿಸಿರುವ ಜಾಹಿರಾತು ಈಗ ವೈರಲ್ ಆಗಿದೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಕತ್ರೀನಾ ಮೊದಲು ಜಾಹಿರಾತಿನ ವಿಡಿಯೋವನ್ನು ಅಬಿಮಾನಿಗಳು ಹರಿಬಿಟ್ಟಿದ್ದಾರೆ. ಬ್ಯಾಲೆ ನೃತ್ಯಗಾರ್ತಿಯಾಗಿ ಕತ್ರೀನಾ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಕನಸಿನಲ್ಲಿ ಕತ್ರೀನಾ ಜೊತೆ ನೃತ್ಯ ಮಾಡುವ ದೃಶ್ಯ ಇದಾಗಿದೆ.

  ದಳಪತಿ ವಿಜಯ್ 100 ಕೋಟಿ ಸಂಭಾವನೆಗೆ ಕತ್ತರಿ?ದಳಪತಿ ವಿಜಯ್ 100 ಕೋಟಿ ಸಂಭಾವನೆಗೆ ಕತ್ತರಿ?

  ವಿಜಯ್ ಬಗ್ಗೆ ಕತ್ರೀನಾ ಹೇಳಿದ್ದೇನು?

  ವಿಜಯ್ ಬಗ್ಗೆ ಕತ್ರೀನಾ ಹೇಳಿದ್ದೇನು?

  ಸಂದರ್ಶವೊಂದರಲ್ಲಿ ನಟಿ ಕತ್ರೀನಾ, ವಿಜಯ್ ಬಗ್ಗೆ ಮಾತನಾಡಿದ್ದಾರೆ. ವಿಜಯ್ ಜೊತೆ ಕೆಲಸ ಮಾಡಿದ ಅನುಭವನ್ನು ಹಂಚಿಕೊಂಡಿದ್ದಾರೆ. ರಿಯಲ್ ಲೈಫ್ ನಲ್ಲಿ ವಿಜಯ್ ಎಷ್ಟು ಸರಳ ವ್ಯಕ್ತಿ ಎನ್ನುವುದನ್ನು ಹೇಳಿದ್ದಾರೆ. "ಊಟಿಯಲ್ಲಿ ಶೂಟಿಂಗ್ ಚಿತ್ರೀಕರಣ ಮಾಡಲಾಗುತ್ತಿತ್ತು. ನಾವೆಲ್ಲರು ಕೆಳಗೆ ಕುಳಿತ್ತಿದ್ದೆವು. ನಾನು ತುಂಬಾ ಕೋಲ್ಡ್ ಆಗಿದ್ದೆ. ನಾನು ಫೋನ್ ನಲ್ಲಿ ಮಾತನಾಡುತ್ತಿದ್ದೆ. ನಾನು ನನ್ನ ಪಾದದ ಬಳಿ ಮುಂದೆ ನೋಡಿದೆ. ಯಾರೊ ನಿಂತಿರಬೇಕೆಂದು ಭಾವಿಸಿ ಸುಮ್ಮನಾದೆ"

  ವಿಜಯ್ ತುಂಬಾ ಸರಳವ್ಯಕ್ತಿ

  ವಿಜಯ್ ತುಂಬಾ ಸರಳವ್ಯಕ್ತಿ

  "ನಂತರ ನಾನು ತಲೆ ಮೇಲಕ್ಕೆ ಎತ್ತಿ ನೋಡಿದಾಗ ನನ್ನೊಂದಿಗೆ ಜಾಹಿರಾತಿನಲ್ಲಿದ್ದ ವ್ಯಕ್ತಿ. ದಕ್ಷಿಣ ಭಾರತದ ಸೂಪರ್ ಸ್ಟಾರ್ ಹೆಸರು ವಿಜಯ್. ತುಂಬಾ ಒಳ್ಳೆಯ ವ್ಯಕ್ತಿ. ನನಗೆ ಬಾಯ್ ಹೇಳಿ ಹೋಗಲು ನಿಂತಿದ್ದರು. ನಾನು ಫೋನಿನಲ್ಲಿ ಮಾತನಾಡುತ್ತಿದ್ದರಿಂದ ನನನ್ನು ಕರೆಯದೆ ಸುಮ್ಮನೆ ಕಾಯುತ್ತಿದ್ದರು" ಎಂದು ವಿಜಯ್ ಬಗ್ಗೆ ಹೇಳಿದ್ದಾರೆ.

  ದಕ್ಷಿಣ ಭಾರತೀಯ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಕತ್ರೀನಾ

  ದಕ್ಷಿಣ ಭಾರತೀಯ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಕತ್ರೀನಾ

  ಕತ್ರೀನಾ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿಯೂ ಮಿಂಚಿದ್ದಾರೆ. ವೆಂಕಟೇಶ್ ದಗ್ಗುಭಾಟಿ ಜೊತೆ ಕತ್ರೀನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹೆಚ್ಚು ಸಂಭಾವನೆ ಪಡೆಯುವ ಮೂಲಕ ಕತ್ರೀನಾ ಅಂದು ಸುದ್ದಿಯಾಗಿದ್ದರು. ಎರಡು ತೆಲುಗು ಸಿನಿಮಾ ಮತ್ತು ಒಂದು ಮಲಯಾಳಂ ಸಿನಿಮಾದಲ್ಲಿಯೂ ಕತ್ರೀನಾ ಕಾಣಿಸಿಕೊಂಡಿದ್ದಾರೆ. ಇದೀಗ ಪ್ರಭಾಸ್ ಸಿನಿಮಾ ಮೂಲಕ ಮತ್ತೆ ತೆಲುಗು ಚಿತ್ರರಂಗಕ್ಕೆ ಕರೆ ತರುವ ಪ್ಲಾನ್ ಮಾಡಲಾಗಿತ್ತಿದೆ. ಆದರೆ ಕತ್ರೀನಾ ಬರ್ತಾರಾ ಎನ್ನುವುದು ಕಾದುನೋಡಬೇಕು.

  English summary
  Actress Katrina Kaif first television commercial with Tamil actor Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X