For Quick Alerts
  ALLOW NOTIFICATIONS  
  For Daily Alerts

  ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂದು ಬಹಿರಂಗ ಪಡಿಸಿದ ನಟಿ ಕೀರ್ತಿ ಸುರೇಶ್

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕೀರ್ತಿ ಮಿಸ್ ಇಂಡಿಯಾ ಸಿನಿಮಾ ರಿಲೀಸ್ ಆದ ಸಂತಸದಲ್ಲಿದ್ದಾರೆ. ಪ್ರಮೋಷನ್ ನಲ್ಲಿ ತೊಡಗಿಕೊಂಡಿರುವ ಕೀರ್ತಿ ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಮಾತುಕತೆಗೆ ಇಳಿದಿದ್ದಾರೆ.

  #AskKeerthy ಪ್ರಶ್ನೋತ್ತರ ಸಂವಾದದಲ್ಲಿ ಕೀರ್ತಿ, ಅಭಿಮಾನಿಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅಭಿಮಾನಿಗಳು ಕೀರ್ತಿಗೆ ತರಹೇವಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಕೆಲವು ಇಂಟರೆಸ್ಟಿಂಗ್ ಆಯ್ದ ಪ್ರಶ್ನೆಗಳಿಗೆ ಕೀರ್ತಿ ಉತ್ತರ ನೀಡಿದ್ದಾರೆ. ಸದ್ಯ ಐಪಿಲ್ ನಡೆೆಯುತ್ತಿದೆ. ಕ್ರಿಕೆಟ್ ಪ್ರೀಯರು ಐಪಿಎಲ್ ಗುಂಗಿನಲ್ಲಿದ್ದಾರೆ. ಈ ಸಮಯದಲ್ಲಿ ಅಭಿಮಾನಿಯೊಬ್ಬ ನಿಮ್ಮ ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂದು ಪ್ರಶ್ನೆ ಕೇಳಿದ್ದಾರೆ.

  'ಮಹಾನಟಿ' ಕೀರ್ತಿ ಸುರೇಶ್‌ ಗೆ ಕನ್ನಡ ಈ ನಟರೊಂದಿಗೆ ನಟಿಸುವ ಆಸೆ

  ಇದಕ್ಕೆ ಕೀರ್ತಿ ಸುರೇಶ್ ಉತ್ತರ ನೀಡಿದ್ದಾರೆ. ನೆಚ್ಚಿನ ಕ್ರಿಕೆಟ್ ಆಟಗಾರ ಎಮ್ ಎಸ್ ಧೋನಿ ಎಂದು ಹೇಳಿದ್ದಾರೆ. ನಮ್ಮ 7 ಎಮ್ ಎಸ್ ಧೋನಿ ಯಾವಾಗಲು ನನ್ನ ನೆಚ್ಚಿನ ಆಟಗಾರ ಎಂದು ಕೀರ್ತಿ ಉತ್ತರಿಸಿ, ಹಾರ್ಟ್ ಇಮೋಜಿ ಹಾಕಿದ್ದಾರೆ. ಕೀರ್ತಿ ಉತ್ತರಕ್ಕೆ ದೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  Love Mocktail Couple | ಎಲ್ಲರ ಕುತೂಹಲಕ್ಕೆ ತೆರೆ ಎಳೆದ Darling Krishna, Milana | Filmibeat Kannada

  ಇದೆ ಸಂವಾದಲ್ಲಿ ಕನ್ನಡದ ಅಭಿಮಾನಿಯೊಬ್ಬ ಕನ್ನಡದಲ್ಲಿ ಯಾವ ನಟರ ಜೊತೆ ನಟಿಸಲು ಇಷ್ಟಪಡುತ್ತೀರಿ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಕೀರ್ತಿ ಸುರೇಶ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ನಟಿಸಲು ಇಷ್ಟ ಎಂದು ಉತ್ತರಿಸಿದ್ದಾರೆ. ಕೀರ್ತಿ ಸುರೇಶ್ ಉತ್ತರದ ಸ್ಕ್ರೀನ್ ಶಾಟ್ ಯಶ್ ಮತ್ತು ಪುನೀತ್ ಅಭಿಮಾನಿಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  English summary
  Actress Keerthy Suresh Favourit Cricketer is MS Dhoni. She reveals exciting Things in first interactive Session.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X