Just In
Don't Miss!
- Sports
ಐಪಿಎಲ್ 2021ರಿಂದ ರಾಜಸ್ಥಾನ್ ರಾಯಲ್ಸ್ನ ಬೆನ್ ಸ್ಟೋಕ್ಸ್ ಹೊರಕ್ಕೆ!
- Automobiles
ಗ್ಲಾಸಿ ಆರೇಂಜ್ ವ್ಯಾರ್ಪ್ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್ಯುವಿ
- News
ಲಾಕ್ಡೌನ್ ಇಲ್ಲ, ಹದಿನೈದು ದಿನ ಶಿಸ್ತಿನ ಕರ್ಫ್ಯೂ: ಸಿಎಂ ಉದ್ಧವ್ ಠಾಕ್ರೆ
- Finance
2021 ಸ್ಕೋಡಾ ಕೊಡಿಯಾಕ್ ಅಧಿಕೃತವಾಗಿ ಬಿಡುಗಡೆ: ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ಖುಷ್ಬು: ಯಾವ ಕ್ಷೇತ್ರದಿಂದ ಸ್ಪರ್ಧೆ, ಎದುರಾಳಿ ಯಾರು?
ತಮಿಳುನಾಡು ವಿಧಾನಸಭೆ ಚುನಾವಣೆ ರಂಗೇರಿದ್ದು, ಪಕ್ಷಗಳು ಅಧಿಕೃತ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡುತ್ತಿವೆ.
ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಶ್ರಮಿಸುತ್ತಿರುವ ಬಿಜೆಪಿ ಕೆಲವು ಜನಪ್ರಿಯ ಮುಖಗಳನ್ನು ತನ್ನತ್ತ ಸೆಳೆದುಕೊಂಡಿದ್ದು, ಅವರ ವರ್ಚಿಸ್ಸಿನ ಮೇಲೆ ಪಕ್ಷವನ್ನು ಬೆಳೆಸುವ ತಂತ್ರಕ್ಕೆ ಮೊರೆ ಹೋಗಿದೆ.
ರಾಜಕೀಯದಿಂದ ಹಿಂದೆ ಸರಿದ ರಜನಿ: 'ನಿಮ್ಮ ನಿರ್ಧಾರದ ಪರ ನಿಲ್ಲುವೆ' ಎಂದ ಖುಷ್ಬೂ
ಇದೀಗ ಬಿಜೆಪಿಯು ತಮಿಳುನಾಡು ಚುನಾವಣೆಗೆ ಸ್ಪರ್ಧಿಸುವ ತನ್ನ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು. ನಟಿ, ರಾಜಕಾರಣಿ ಖುಷ್ಬು ಅವರು ಮೊದಲ ಪಟ್ಟಿಯಲ್ಲೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕಳೆದ ವರ್ಷ ಕಾಂಗ್ರೆಸ್ ತ್ಯಜಿಸಿದ್ದ ಖುಷ್ಬು ಬಿಜೆಪಿ ಸೇರಿಕೊಂಡಿದ್ದರು. ಇದೀಗ ವಿಧಾನಸಭೆ ಚುನಾವಣೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಪಡೆದಿರುವ ಖುಷ್ಬು ಚೆನ್ನೈನ ತೌಸಂಡ್ಸ್ ಲೈಟ್ಸ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಖುಷ್ಬು ಸುಂದರ್ ಎದುರು ಡಿಎಂಕೆ ಅಭ್ಯರ್ಥಿಯಾಗಿ ಡಾ.ಎಳಿಲನ್ ಸ್ಪರ್ಧಿಸಿದ್ದಾರೆ.
ಖುಷ್ಬು ಅವರು ತಮ್ಮ ರಾಜಕೀಯ ಪಯಣ ಆರಂಭಿಸಿದ್ದು ಡಿಎಂಕೆ ಪಕ್ಷದಿಂದ. 2014 ರಲ್ಲಿ ಅವರು ಕಾಂಗ್ರೆಸ್ ಸೇರಿಕೊಂಡರು ಕೊನೆಗೆ 2020 ರ ಅಕ್ಟೋಬರ್ ತಿಂಗಳಲ್ಲಿ ಬಿಜೆಪಿ ಸೇರಿಕೊಂಡು ಇದೀಗ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಖುಷ್ಬು ಸ್ಪರ್ಧಿಸುತ್ತಿರುವ ತೌಸಂಡ್ಸ್ ಲೈಟ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆ ಹೆಚ್ಚು ಪ್ರಭಲವಾಗಿದೆ. ಮದ್ರಾಸ್ ರಾಜ್ಯವಾಗಿದ್ದಾಗಿನಿಂದಲೂ ಈ ಕ್ಷೇತ್ರದಲ್ಲಿ ಈವೆಗೆ ನಡೆದಿರುವ 15 ವಿಧಾನಸಭೆ ಚುನಾವಣೆಗಳಲ್ಲಿ ಏಳು ಬಾರಿ ಡಿಎಂಕೆ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ನಾಲ್ಕು ಬಾರಿ ಎಐಎಡಿಎಂಕೆ ಅಭ್ಯರ್ಥಿಗಳು. ಒಂದು ಬಾರಿ ಪಕ್ಷೇತ್ರ ಹಾಗೂ ಒಂದು ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಮಾರ್ಚ್ 19 ನಾಮಪತ್ರ ಸಲ್ಲಿಕೆ ಅಂತ್ಯವಾಗಲಿದೆ. ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.