For Quick Alerts
  ALLOW NOTIFICATIONS  
  For Daily Alerts

  ಇಳಯದಳಪತಿ ವಿಜಯ್ ಸಂಭಾವನೆ ರಿವೀಲ್ ಮಾಡಿದ ನಟಿ ಖುಷ್ಬೂ

  |

  ತಮಿಳಿನ ಖ್ಯಾತ ನಟ ಇಳಯದಳಪತಿ ವಿಜಯ್ ಮಲೆ ಮೇಲೆ ಮತ್ತೆ ಐಟಿ ದಾಳಿ ನಡೆದಿದೆ. ಚೆನ್ನೈನ ಪನೈನೂರ್ ನಲ್ಲಿರುವ ವಿಜಯ್ ನಿವಾಸದಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಫೆಬ್ರವರಿಯಲ್ಲಿ ವಿಜಯ್ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ಇಲಾಖೆ ದಾಳಿ ನಡೆಸಿದೆ.

  ನಟ ವಿಜಯ್ ಕೋಟಿ ಕೋಟಿ ಸಂಭಾವನೆ ಪಡೆಯುವ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ ಐಟಿ ಅಧಿಕಾರಿಗಳು ವಿಜಯ್ ಮನೆ ಮೇಲೆ ಪದೇಪದೇ ದಾಳಿ ನಡೆಸುತ್ತಿದ್ದಾರೆ. ವಿಜಯ್ ಅಭಿನಯ ಬಿಗಿಲ್ ಸಿನಿಮಾಗೆ ಅತೀ ಹೆಚ್ಚು ಸಂಭಾವನೆ ಪಡೆದಿದ್ದರು. ಸದ್ಯ ಮಾಸ್ಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಿಗಿಲ್ ಗಿಂತ 50 ರಷ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ರಾಜಾ ರವಿವರ್ಮ ಪ್ರಸಿದ್ಧ ಕಲಾಕೃತಿಗಳಿಗೆ ಜೀವ ತುಂಬಿದ ತೆಲುಗು ನಟಿಯರುರಾಜಾ ರವಿವರ್ಮ ಪ್ರಸಿದ್ಧ ಕಲಾಕೃತಿಗಳಿಗೆ ಜೀವ ತುಂಬಿದ ತೆಲುಗು ನಟಿಯರು

  ವಿಜಯ್ ಸಂಭಾವನೆ ರಿವೀಲ್ ಮಾಡಿದ ಖುಷ್ಬೂ

  ಈ ಬಗ್ಗೆ ಹಿರಿಯ ನಟಿ ಖುಷ್ಬೂ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯ್ ಸಂಭಾವನೆ ವಿಚಾರವನ್ನು ಖುಷ್ಬೂ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ತನಿಖಾ ಇಲಾಖೆ ನಟ ವಿಜಯ್ ಸಂಭಾವನೆ ವಿವರಣೆಯನ್ನು ಬಹಿರಂಗ ಪಡಿಸಿದೆ. ವಿಜಯ್ ಬಿಗಿಲ್ ಸಿನಿಮಾಗೆ 50 ಕೋಟಿ ಸಂಬಾವನೆ ಪಡೆದಿದ್ದಾರೆ. ಮಾಸ್ಟರ್ ಸಿನಿಮಾಗೆ 80 ಕೋಟಿ ಸಂಭಾವನೆ ಪಡೆದಿದ್ದಾರೆ. ಜೊತೆಗೆ ಸರಿಯಾದ ತೆರಿಗೆ ಕಟ್ಟಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

  ಖುಷ್ಬೂ ಮತ್ತು ವಿಜಯ್ ಇಬ್ಬರು ಉತ್ತಮ ಸ್ನೇಹಿತರು

  ಖುಷ್ಬೂ ಮತ್ತು ವಿಜಯ್ ಇಬ್ಬರು ಉತ್ತಮ ಸ್ನೇಹಿತರು

  ಖುಷ್ಬೂ ಮತ್ತು ವಿಜಯ್ ಇಬ್ಬರ ನಡುವೆ ಉತ್ತಮವಾದ ಬಾಂಧವ್ಯವಿದೆ. ಆಗಾಗ ವಿಜಯ್ ಬಗ್ಗೆ ಹೇಳುತ್ತಿರುತ್ತಾರೆ. ಸಾಕಷ್ಟು ಸಂದರ್ಶನಗಳಲ್ಲಿ ಖುಷ್ಬೂ ವಿಜಯ್ ಅವರನ್ನು ಹೊಗಳಿದ್ದಾರೆ.

  ವಿಜಯ್ 'ಮಾಸ್ಟರ್' ಆಡಿಯೋ ಬಿಡುಗಡೆಗೆ ದಿನಾಂಕ ನಿಗದಿವಿಜಯ್ 'ಮಾಸ್ಟರ್' ಆಡಿಯೋ ಬಿಡುಗಡೆಗೆ ದಿನಾಂಕ ನಿಗದಿ

  ಮಾರ್ಚ್ 15ಕ್ಕೆ ಚಿತ್ರದ ಆಡಿಯೋ

  ಮಾರ್ಚ್ 15ಕ್ಕೆ ಚಿತ್ರದ ಆಡಿಯೋ

  ವಿಜಯ್ ಅಭಿನಯದ ಮಾಸ್ಟರ್ ಸಿನಿಮಾದ ಆಡಿಯೋ ರಿಲೀಸ್ ಗೆ ದಿನಾಂಕ ನಿಗದಿಯಾಗಿದ್ದು, ಬಹು ನಿರೀಕ್ಷೆಯ ಚಿತ್ರದ ಆಡಿಯೋ ಇದೆ ತಿಂಗಳು ಮಾರ್ಚ್ 15ಕ್ಕೆ ಬಿಡುಗಡೆಯಾಗುತ್ತಿದೆ. ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಚಿತ್ರದ ಹಾಡುಗಳು ರಿಲೀಸ್ ಆಗುತ್ತಿದ್ದಂತೆ, ಹಾಡುಗಳು ಹೇಗಿರಲಿವೆ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

  Breaking: ತಮಿಳು ನಟ ವಿಜಯ್ ದಳಪತಿ ನಿವಾಸದ ಮೇಲೆ ಮತ್ತೆ ಐಟಿ ದಾಳಿBreaking: ತಮಿಳು ನಟ ವಿಜಯ್ ದಳಪತಿ ನಿವಾಸದ ಮೇಲೆ ಮತ್ತೆ ಐಟಿ ದಾಳಿ

  ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಸಾಧ್ಯತೆ

  ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಸಾಧ್ಯತೆ

  ಈಗಾಗಲೆ ಸಿನಿಮಾದಿಂದ ಒಂದು ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ವಿಭಿನ್ನವಾಗಿರುವ ಈ ಹಾಡು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಪೋಸ್ಟರ್ ಮೂಲಕವೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಚಿತ್ರದಲ್ಲಿ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Senior Actress Kushboo revealed Actor Vijay Salary in social media. After IT raid on Vijay house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X