For Quick Alerts
  ALLOW NOTIFICATIONS  
  For Daily Alerts

  'ಸೂರರೈ ಪೊಟ್ರು' ಸಿನಿಮಾದಲ್ಲಿ ಕನ್ನಡಿಗರ ಹೆಮ್ಮೆಯ ಕುವೆಂಪು

  |

  ನಟ ಸೂರ್ಯಾ ಅಭಿನಯದ 'ಸೂರರೈ ಪೊಟ್ರು' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ.

  ಸಿನಿಮಾ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿ ಬರುತ್ತಿವೆ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧರಿಸಿದ ಸಿನಿಮಾ ಇದಾಗಿದ್ದು, ಸಿನಿಮಾವನ್ನು ಸುಧಾ ಕೊಂಗರ ನಿರ್ದೇಶಿಸಿದ್ದಾರೆ.

  ಸಿನಿಮಾವು ಕನ್ನಡಿಗ ಗೋಪಿನಾಥ್ ಅವರ ಜೀವನ ಆಧರಿಸಿದ್ದಾದರೂ ಸೂರರೈ ಪೊಟ್ರು ಸಿನಿಮಾವು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಕನ್ನಡದಲ್ಲಿ ಬಿಡುಗಡೆ ಆಗಿರುವ ವರ್ಷನ್‌ನಲ್ಲಿ ಕರ್ನಾಟಕದ ಹೆಮ್ಮೆಯ ಸಾಹಿತಿ ಕುವೆಂಪು ಅವರ ಚಿತ್ರವನ್ನು ಸಿನಿಮಾದ ದೃಶ್ಯವೊಂದರಲ್ಲಿ ಬಳಸಲಾಗಿದೆ.

  ಸಿನಿಮಾದ ದೃಶ್ಯವೊಂದರಲ್ಲಿ ಕುವೆಂಪು ಚಿತ್ರ

  ಸಿನಿಮಾದ ದೃಶ್ಯವೊಂದರಲ್ಲಿ ಕುವೆಂಪು ಚಿತ್ರ

  ಹೌದು, ಸಿನಿಮಾದಲ್ಲಿ ನಾಯಕ ನಟ ಮಾರನ್ ಹಾಗೂ ನಾಯಕಿ ಪೊನ್ನಿ ಮದುವೆ ಆಗುವ ದೃಶ್ಯವಿದೆ. ಸಿನಿಮಾದಲ್ಲಿ ಅವರು ಮಂತ್ರ ಮಾಂಗಲ್ಯ ಮಾದರಿಯಲ್ಲಿ ವಿವಾಹವಾಗುವಂತೆ ತೋರಿಸಲಾಗುತ್ತದೆ. ಗಂಡು-ಹೆಣ್ಣೆ ನಿಂತಿರುವ ಸ್ಟೇಜ್‌ಮೇಲೆ ಕುವೆಂಪು ಅವರ ಚಿತ್ರ ಇರುತ್ತದೆ.

  ಕುವೆಂಪು ಪ್ರಾರಂಭಿಸಿದ 'ಮಂತ್ರ ಮಾಂಗಲ್ಯ'

  ಕುವೆಂಪು ಪ್ರಾರಂಭಿಸಿದ 'ಮಂತ್ರ ಮಾಂಗಲ್ಯ'

  ಕುವೆಂಪು ಅವರು ತಮ್ಮ ಪುತ್ರ ಪೂರ್ಣಚಂದ್ರ ತೇಜಸ್ವಿ ವಿವಾಹವನ್ನು ಮಂತ್ರ ಮಾಂಗಲ್ಯ ಮಾದರಿಯಲ್ಲಿ ಮಾಡಿದರು. ಆ ನಂತರ ಮಂತ್ರ ಮಾಂಗಲ್ಯ ಬಹಳ ಜನಪ್ರಿಯವಾಯಿತು. ಯಾವುದೇ ಆಡಂಭರವಿಲ್ಲದೆ, ಶಾಸ್ತ್ರ-ಆಚರಣೆಗಳ ಹೊರೆಯಿಲ್ಲದೆ, ಸರಳವಾಗಿ ಮದುವೆ ಆಗುವ ಪದ್ಧತಿಯದು.

  ಪೆರಿಯಾರ್ ಚಿತ್ರ ಬಳಸಲಾಗಿದೆ

  ಪೆರಿಯಾರ್ ಚಿತ್ರ ಬಳಸಲಾಗಿದೆ

  ಕುವೆಂಪು ಅವರ ಚಿತ್ರ ಕಾಣುವುದು ಸೂರರೈ ಪೊಟ್ರು ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ಮಾತ್ರ. ತಮಿಳು ಅವತರಣಿಕೆಯಲ್ಲಿ ತಮಿಳಿನ ಖ್ಯಾತ ಸಾಮಾಜಿಕ ಹೋರಾಟಗಾರ ಪೆರಿಯಾರ್ ಅವರ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಪೆರಿಯಾರ್ ಆತ್ಮಗೌರವ ಚಳವಳಿಯನ್ನು ಆರಂಭಿಸಿದ್ದರು.

  ಸೈಬರ್ ರಾಣೆ ಮೆಟ್ಟಿಲೇರಿದ Vinod Raj | Filmibeat Kannada
  ಕತೆಯಲ್ಲಿ ಬದಲಾವಣೆ

  ಕತೆಯಲ್ಲಿ ಬದಲಾವಣೆ

  ಸೂರರೈ ಪೊಟ್ರು ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ಸಿನಿಮಾದ ನಾಯಕ ಗೋರೂರು ಗ್ರಾಮದವನಾಗಿದ್ದರೆ, ತಮಿಳಿನಲ್ಲಿ ಮಧುರೈ ಸಮೀಪದ ಹಳ್ಳಿಯವನಾಗಿರುತ್ತಾನೆ. ಹೀಗೆ ಭಾಷೆಗಳ ಅನ್ವಯ ಕತೆಯ ಮಾಹಿತಿಯನ್ನು ಬದಲಾವಣೆ ಮಾಡಲಾಗಿದೆ. ಒಟ್ಟಾರೆಯಾಗಿ ಸಿನಿಮಾ ಚೆನ್ನಾಗಿದೆ.

  English summary
  Kannada litrature legend Kuvempu's photo is in Soorari Potru movie. Also his social movment 'Mantra Mangalya' also in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X