Don't Miss!
- News
ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿ: ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ
- Sports
Ind Vs Aus Test: ಟೆಸ್ಟ್ ಸರಣಿಗೆ ತಯಾರಿ: ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ಕೆಎಲ್ ರಾಹುಲ್
- Automobiles
ಡೀಲರ್ ಬಳಿ ತಲುಪಿದ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ S-CNG
- Technology
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- Finance
Economic Survey 2023 : ಭಾರತದ ಬೆಳವಣಿಗೆಗೆ ಐಎಂಎಫ್ ಭರವಸೆ, ಜಾಗತಿಕ ದರ ಇಳಿಸಿದ ಸಂಸ್ಥೆ
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತನ್ನ ಮೇಕಪ್ ಬಗ್ಗೆ ಮಾತನಾಡಿದ್ದ ನಟಿಗೆ ಸ್ಟ್ರಾಂಗ್ ಕೌಂಟರ್ ಕೊಟ್ಟ ನಯನತಾರಾ: ವಿಡಿಯೋ ವೈರಲ್
ಲೇಡಿ ಸೂಪರ್ ಸ್ಟಾರ್ ನಯನತಾರ ನಟನೆಯ 'ಕನೆಕ್ಟ್' ಸಿನಿಮಾ ಬಿಡುಗಡೆಯಾಗಿದೆ. ಬಹಳ ದಿನಗಳ ನಂತರ ಈ ಚಿತ್ರದ ಪ್ರಚಾರಕ್ಕಾಗಿ ನಯನ್ ಸಂದರ್ಶನ ನೀಡಿದ್ದರು. ಆ ಸಂದರ್ಶನದಲ್ಲಿ ತಮ್ಮ ಮೇಕಪ್ ಬಗ್ಗೆ ಮಾತನಾಡಿದ್ದ ನಟಿಗೆ ತಿರುಗೇಟು ನೀಡಿದ್ದಾರೆ. ಆದರೆ ಆಕೆ ಯಾರು ಎಂದು ನಯನ್ ಹೇಳಲಿಲ್ಲ. ಅದು ಯಾರು ಎಂದು ಅಭಿಮಾನಿಗಳು ಹುಡುಕಿದ್ದಾರೆ.
ಆರಂಭದ ದಿನಗಳಲ್ಲಿ ನನ್ನ ಲುಕ್ಸ್ ಬೇರೆ ತರ ಇರುತ್ತಿತ್ತು. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ಮೇಲೆ ಒಂದಷ್ಟು ತಿಳಿದಿಕೊಂಡ ಮೇಲೆ ಬದಲಿಸಿಕೊಂಡಿದ್ದೇನೆ. ನಾವು ಹೇಗೆ ಇದ್ದರೂ ವಿಮರ್ಶೆ ಮಾಡುವವರು ಇದ್ದೇ ಇರುತ್ತಾರೆ. ಇತ್ತೀಚೆಗೆ ಯಾರೋ ಒಬ್ಬರು ನನ್ನ ಫೋಟೊವೊಂದನ್ನು ಶೇರ್ ಮಾಡಿ ಲುಕ್ ಚೆನ್ನಾಗಿಲ್ಲ ಎನ್ನುವಂತೆ ಬರೆದುಕೊಂಡಿದ್ದರು. ಆ ಪಾತ್ರಕ್ಕೆ ಆ ಸನ್ನಿವೇಶಕ್ಕೆ ತಕ್ಕಂತೆ ಕಾಣಿಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಮೇಕಪ್ ಇರುತ್ತದೆ. ಎಲ್ಲದರಲ್ಲೂ ಬಹಳ ಸುಂದರವಾಗಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಮಾತು ಮುಂದುವರೆಸಿದ ನಯನತಾರಾ "ಕೆಲ ದಿನಗಳ ಹಿಂದೆ ನಟಿಯೊಬ್ಬರು (ಅವರ ಹೆಸರು ಹೇಳುವುದು ಬೇಡ) ನನ್ನ ಸಿನಿಮಾ ದೃಶ್ಯವೊಂದರ ಬಗ್ಗೆ ಮಾತನಾಡಿದ್ದರು. ಆಕೆ ನನ್ನ ಹೆಸರು ಹೇಳದೇ ಆಸ್ಪತ್ರೆ ಸನ್ನಿವೇಶದಲ್ಲಿ ನಾನು ಆಕೆಯನ್ನು ನೋಡಿದ್ದೆ. ಬಹಳ ನಾಜೂಕಾಗಿ ಕೂದಲು ಬಾಚಿಕೊಂಡು ಬಹಳ ನೀಟ್ ಆಗಿ ಕಾಣಿಸಿಕೊಂಡಿದ್ದರು ಎಂದಿದ್ದರು. ಅಯ್ಯೋ ಆಸ್ಪತ್ರೆಯಲ್ಲಿ ಯಾರು ನಮ್ಮ ಕೂದಲು ಸರಿ ಮಾಡುವುದಿಲ್ಲವಾ? ಕೂದಲು ಕೆದರಿಕೊಂಡು ಇರಲು ಸಾಧ್ಯವೇ?" ಎಂದಿದ್ದಾರೆ.
ರಿಯಲಿಸ್ಟಿಕ್ ಸಿನಿಮಾ ಎಂದಾಗ ನಾವು ಅದಕ್ಕೆ ತಕ್ಕಂತೆ ಇರಬೇಕಾಗುತ್ತದೆ. ಪ್ರತಿಯೊಂದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕು. ಯಾಮಾರಿದರೆ ತಪ್ಪಾಗುತ್ತೆ. ಆದರೆ ಕಮರ್ಷಿಯಲ್ ಸಿನಿಮಾಗಳಲ್ಲಿ ಆ ರೀತಿ ಅಲ್ಲ. ಈಗ ಹೇಳಿದ ಸನ್ನಿವೇಶ ಕೂಡ ಅಂಥದ್ದೇ ಕಮರ್ಷಿಯಲ್ ಸಿನಿಮಾದ್ದು. ನಿರ್ದೇಶಕರು ಏನು ಹೇಳಿದ್ದಾರೋ ಅದನ್ನು ನಾನು ಮಾಡಿದ್ದೇನೆ ಅಷ್ಟೇ ಎಂದು ನಯನತಾರಾ ವಿವರಿಸಿದ್ದಾರೆ.
ಮದುವೆ
ನಂತರ
ಆ
ನಿಯಮ
ಮುರಿದ
ನಯನತಾರ:
ಇದ್ಯಾವ
ನ್ಯಾಯ
ಎಂದ
ನೆಟ್ಟಿಗರು
ಅಷ್ಟಕ್ಕೂ ನಯನತಾರಾ ಮೇಕಪ್, ಲುಕ್ ಬಗ್ಗೆ ಈ ಹಿಂದೆ ಮಾತನಾಡಿದ್ದ ನಟಿ ಯಾರು ಎನ್ನುವುದು ಈಗ ಗೊತ್ತಾಗಿದೆ. 'ಮಾಸ್ಟರ್' ಚಿತ್ರದಲ್ಲಿ ನಟಿಸಿದ್ದ ಮಾಳವಿಕಾ ಮೋಹನನ್ ಈ ರೀತಿ ಕಾಮೆಂಟ್ ಮಾಡಿದ್ದರು. ಆ ಚಿತ್ರದ ಪ್ರಚಾರದ ವೇಳೆ ಸಂದರ್ಶನದಲ್ಲಿ ಈ ರೀತಿ ಹೇಳಿದ್ದರು. ಅದಕ್ಕೆ ಈಗ ನಯನತಾರಾ ಸ್ಟ್ರಾಂಗ್ ಕೌಂಟರ್ ಕೊಟ್ಟಿದ್ದಾರೆ. ಅಂದ ಹಾಗೆ ಮಲಯಾಳಿ ಚೆಲುವೆ ಮಾಳವಿಕಾ ಕನ್ನಡದ 'ನಾನು ಮತ್ತು ವರಲಕ್ಷ್ಮಿ' ಚಿತ್ರದಲ್ಲೂ ನಟಿಸಿದ್ದರು. ನೋಡಲು ಸುಂದರವಾಗಿ ಇದ್ದರೂ ಗ್ಲಾಮರಸ್ ರೋಲ್‌ಗಳಿಗೆ ಸೈ ಎಂದರೂ ಈಕೆಗೆ ಒಳ್ಳೆ ಬ್ರೇಕ್ ಮಾತ್ರ ಸಿಗುತ್ತಿಲ್ಲ.