For Quick Alerts
  ALLOW NOTIFICATIONS  
  For Daily Alerts

  Connect Trailer: ಲಾಕ್‌ಡೌನ್ ಟೈಮಲ್ಲಿ ದೆವ್ವ ನೋಡಿ ಬೆಚ್ಚಿಬಿದ್ದ ನಯನತಾರ!

  |

  ಲೇಡಿ ಸೂಪರ್ ಸ್ಟಾರ್ ನಯನತಾರಾ ನಟನೆಯ 'ಕನೆಕ್ಟ್' ಸಿನಿಮಾ ಟ್ರೈಲರ್ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಹಾರರ್‌ ಥ್ರಿಲ್ಲರ್ ಸಿನಿಮಾ ಮೂಲಕ ಈ ಬಾರಿ ನಯನ್ ಪ್ರೇಕ್ಷಕರನ್ನು ಹೆದರಿಸಲು ಬರ್ತಿದ್ದಾರೆ. ಟ್ರೈಲರ್ ನೋಡ್ತಿದ್ರೆ ಸಿನಿಮಾ ನೋಡುಗರನ್ನು ಸೀಟಿಗೆ ತುದಿಗೆ ತಂದು ಕೂರಿಸುವಂತೆ ಕಾಣ್ತಿದೆ.

  ಒಂದ್ಕಡೆ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚುತ್ತಿರುವ ನಯನತಾರಾ ಮತ್ತೊಂದು ಕಡೆ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಇದೀಗ ಹಾರರ್ ಸಿನಿಮಾ ಚಿತ್ರದಲ್ಲಿ ಮಿಂಚಿರುವುದು ವಿಶೇಷ. ಅಶ್ವಿನ್ ಸರವಣನ್ ನಿರ್ದೇಶನದ 'ಕನೆಕ್ಟ್' ಚಿತ್ರದಲ್ಲಿ ಸತ್ಯರಾಜ್, ವಿನಯ್ ರೈ, ಅನುಪಮ್ ಕೇರ್ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ.

  'ನನ್ನ ಸೊಸೆ ಬಂಗಾರ' ಎಂದ ನಯನತಾರಾ ಅತ್ತೆ ಮೀನಾ ಕುಮಾರಿ!'ನನ್ನ ಸೊಸೆ ಬಂಗಾರ' ಎಂದ ನಯನತಾರಾ ಅತ್ತೆ ಮೀನಾ ಕುಮಾರಿ!

  ರೌಡಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಯನತಾರಾ ಪತಿ ವಿಘ್ನೇಶ್ ಶಿವನ್ 'ಕನೆಕ್ಟ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಣಿಕಂಠನ್, ಕೃಷ್ಣಮಚಾರಿ ಸಿನಿಮಾಟೋಗ್ರಫಿ ಹಾಗೂ ಪೃಥ್ವಿ ಚಂದ್ರಶೇಖರ್ ಸಂಗೀತ ಈ ಹಾರರ್‌ ಥ್ರಿಲ್ಲರ್ ಚಿತ್ರಕ್ಕಿದೆ.

  ದೆವ್ವ ನೋಡಿ ಬೆಚ್ಚಿಬಿದ್ದ ನಯನ್

  ದೆವ್ವ ನೋಡಿ ಬೆಚ್ಚಿಬಿದ್ದ ನಯನ್

  'ಕನೆಕ್ಟ್' ಸಿನಿಮಾ ಟ್ರೈಲರ್ ಭಯಹುಟ್ಟಿಸುವಂತಿದೆ. ಕಣ್ಣಿಗೆ ಕಾಣದ ದೆವ್ವ ಭಯದಿಂದ ನಯನತಾರಾ ಭಯಪಡುತ್ತಾ ನಟಿಸಿರುವುದು ಗಮನ ಸೆಳೆದಿದೆ. ಮದುವೆ ನಂತರ ನಯನತಾರಾ ಲೀಡ್ ರೋಲ್‌ನಲ್ಲಿ ನಟಿಸಿರು ಸಿನಿಮಾ ಇದು. ಡಿಸೆಂಬರ್ 22ಕ್ಕೆ ಸಿನಿಮಾ ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತೆರೆಗೆ ಬರ್ತಿದೆ.

  'ಕನೆಕ್ಟ್' ಸಿನಿಮಾ ಕಥೆಯೇನು?

  'ಕನೆಕ್ಟ್' ಸಿನಿಮಾ ಕಥೆಯೇನು?

  ಒಂದು ಸುಂದರವಾದ ಊರು. ಅಲ್ಲಿ ಒಂದು ಕುಟುಂಬ. ಯಾವುದೇ ಚಿಂತೆಯಿಲ್ಲದೇ ಸಾಗುತ್ತಿದ್ದ ಅವರ ಜೀವನದಲ್ಲಿ ಲಾಕ್‌ಡೌನ್ ಕಾರಣದಿಂದ ಸಂಕಷ್ಟ ಎದುರಾಗುತ್ತದೆ. ಡಾಕ್ಟರ್ ಆಗಿರುವ ತಂದೆ ಪ್ಯಾಂಡಮಿಕ್ ಸಮಯದಲ್ಲಿ ಆಸ್ಪತ್ರೆಯಲ್ಲಿ ಲಾಕ್ ಆಗುವಂತಾಗುತ್ತದೆ. ತಾಯಿ ವರ್ಕ್‌ಫ್ರಂ ಹೋಮ್‌ ಅಂತ ಬ್ಯುಸಿ ಆಗಿರುತ್ತಾಳೆ. ಇಂತಹ ಸಮಯದಲ್ಲಿ ಅವರ ಮಗಳು ಸ್ಪಿರಿಟ್ ಗೇಮ್ ಆಡಿ ಮನೆಮಂದಿಯೆಲ್ಲಾ ಸಮಸ್ಯೆ ಸಿಲುಕುವಂತೆ ಮಾಡುತ್ತಾಳೆ. ಮುಂದೇನಾಗುತ್ತದೆ ಎನ್ನುವುದು 'ಕನೆಕ್ಟ್' ಸಿನಿಮಾ ಕಥೆ.

  ಇಂಟರ್‌ವಲ್ ಇಲ್ದೆ ಹೆದರಿಸುವ ಚಿತ್ರ

  ಇಂಟರ್‌ವಲ್ ಇಲ್ದೆ ಹೆದರಿಸುವ ಚಿತ್ರ

  2 ನಿಮಿಷದ 'ಕನೆಕ್ಟ್' ಸಿನಿಮಾ ಟ್ರೈಲರ್ ನೋಡುಗರ ಗಮನ ಸೆಳೆದಿದೆ. 99 ನಿಮಿಷದ ರನ್ ಟೈಮ್ ಸಿನಿಮಾ ಇದು. ಇಂಟರ್‌ವಲ್ ಇಲ್ಲೇ ಇಂಗ್ಲೀಷ್ ಸಿನಿಮಾಗಳ ರೀತಿ ಒಂದೂವರೆ ಗಂಟೆ ಸಿನಿಮಾ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲು ಬರ್ತಿದೆ. ಸೈಕಾಲಜಿಸ್ಟ್ ಪಾತ್ರದಲ್ಲಿ ಅನುಪಮ್ ಕೇರ್ ನಟಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಆ ಮನೆಯಲ್ಲಿ ಸೃಷ್ಟಿಯಾದ ಸಮಸ್ಯೆ ಏನು? ಅದರಿಂದ ಕುಟುಂಬ ಹೇಗೆ ಹೊರಬರುತ್ತೆ ಎನ್ನುವುನ್ನು ತೆರೆಮೇಲೆ ನೋಡಬೇಕು.

  ಟ್ರೈಲರ್ ನೋಡಿ ಪ್ರಭಾಸ್ ಮೆಚ್ಚುಗೆ

  ಟ್ರೈಲರ್ ನೋಡಿ ಪ್ರಭಾಸ್ ಮೆಚ್ಚುಗೆ

  ಬಾಹುಬಲಿ ಪ್ರಭಾಸ್ 'ಕನೆಕ್ಟ್' ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. "ಟ್ರೈಲರ್ ಬಹಳ ಚೆನ್ನಾಗಿದೆ. ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದೀನಿ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಟ್ರೈಲರ್‌ ಲಾಂಚ್ ಮಾಡಿದೆ ಚಿತ್ರತಂಡ. 'ಕನೆಕ್ಟ್' ಝಲಕ್ ನೋಡಿದವರು ಸೂಪರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ಕೂಡ ಪ್ರೇಕ್ಷಕರ ಮನಗೆಲ್ಲುತ್ತಾ ಕಾದು ನೋಡಬೇಕು.

  English summary
  Lady Superstar Nayanthara Starrer Horror thriller Connect Movie Trailer Released. Connect Trailer launched by younge Rebelstar Prabhas. Know more.
  Friday, December 9, 2022, 16:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X