ಕೊರೊನಾ ಲಸಿಕೆ ಬಗ್ಗೆ ತಪ್ಪು ಮಾಹಿತಿ ಹಬ್ಬಿಸಿದ ನಟನಿಗೆ 2 ಲಕ್ಷ ರೂ.ದಂಡ

ಕೊರೊನಾ ಲಸಿಕೆ ಬಗ್ಗೆ ತಪ್ಪು ಮಾಹಿತಿ ನೀಡಿದ ತಮಿಳು ನಟ ಮನ್ಸೂರ್ ಅಲಿ ಖಾನ್ ಅವರಿಗೆ ಮದ್ರಾಸ್ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ. ತಮಿಳುನಾಡಿನಲ್ಲಿ ಮ್ಯಾಕ್ಸಿನ್ ಅಭಿಯಾನದ ಬಗ್ಗೆ ಮತ್ತು ವ್ಯಾಕ್ಸಿನ್ ಪಡೆದ ಮರುದಿನವೇ ಹೃದಯಾಘಾತದಿಂದ ನಿಧನ ಹೊಂದಿದ ನಟ ವಿವೇಕ್ ಸಾವಿಗೆ ಲಿಂಕ್ ಮಾಡಿದ್ದ ಮನ್ಸೂರ್ ಅಲಿ ಖಾನ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿತ್ತು.

ವಿವೇಕ್ ಸಾವಿನ ಬಳಿಕ ಮನ್ಸೂರ್ ಅಲಿ ಖಾನ್, ಸರ್ಕಾರ ಜನರನ್ನು ಕೊಲೆ ಮಾಡುತ್ತಿದೆ, ವ್ಯಾಕ್ಸಿನ್ ನೀಡುವ ಮೊದಲು ವಿವೇಕ್ ಚೆನ್ನಾಗಿದ್ದರು. ಆದರೆ ಲಸಿಕೆ ನೀಡಿ ಸಾಯಿಸಲಾಗಿದೆ ಎಂದು ಹೇಳಿದ್ದರು. ಬಳಿಕ ಆರೋಗ್ಯ ಇಲಾಖೆ ಮನ್ಸೂರ್ ಖಾನ್ ವಿರುದ್ಧ ದೂರು ದಾಖಲಿಸಿದ್ದರು.

ಮನ್ಸೂರ್ ಅಲಿ ಖಾನ್ ವಿರುದ್ಧ ವಡಪಳನಿ ಪೋಲೀಸ್ ಸ್ಟೇಷನ್ ನಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದು, 2 ಲಕ್ಷ ರೂ.ಗಳನ್ನು ತಮಿಳುನಾಡು ಆರೋಗ್ಯ ಇಲಾಖೆಗೆ ದಂಡದ ರೂಪದಲ್ಲಿ ನೀಡಬೇಕೆಂದು ಸೂಚಿಸಿದೆ.

Madras HC orders Actor Mansoor Ali Khan to pay 2 lakh fine for vaccine misinformation

ವಿವೇಕ್ ಸಾವಿನಿಂದ ಭಾವನಾತ್ಮಕವಾಗಿ ಹೇಳಿದೆ. ಯಾರನ್ನು ನೋಯಿಸುವ ಉದ್ದೇಶ ಇರಲಿಲ್ಲ ಎಂದು ಮನ್ಸೂರ್ ಅಲಿ ಖಾನ್ ಕೋರ್ಟ್ ನಲ್ಲಿ ಹೇಳಿದ್ದಾರೆ.

More from Filmibeat

English summary
Madras HC orders Actor Mansoor Ali Khan to pay 2 lakh fine for spreading covid vaccine misinformation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X