Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಮಲಾ ಪೌಲ್ ನಿಶ್ಚಿತಾರ್ಥ ವಿವಾದ: ನಟಿ ಪರ ಆದೇಶ ನೀಡಿದ ಮದ್ರಾಸ್ ಕೋರ್ಟ್
ಹಳೆಯ ಬಾಯ್‌ಫ್ರೆಂಡ್ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರಿದ್ದ ನಟಿ ಅಮಲಾ ಪೌಲ್‌ಗೆ ನ್ಯಾಯಾಲಯದಲ್ಲಿ ಮುನ್ನಡೆ ಸಿಕ್ಕಿದೆ. ಅನುಮತಿ ಇಲ್ಲದೇ ನನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಹಾಗೂ ನನ್ನನ್ನು ಮದುವೆ ಆಗಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ ಅಮಲಾ ಪೌಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅಮಲಾ ಪೌಲ್ ಅವರ ಖಾಸಗಿ ಚಿತ್ರಗಳನ್ನು ಪೋಸ್ಟ್ ಮಾಡುವುದಕ್ಕೆ ತಡೆಹಿಡಿದಿದೆ. ಹಾಗೂ ಡಿಸೆಂಬರ್ 22ರೊಳಗೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಬೇಕು ಎಂದು ಭವಿಂದರ್ ಸಿಂಗ್‌ಗೆ ಕೋರ್ಟ್ ಸೂಚಿಸಿದೆ. ಮುಂದೆ ಓದಿ....

ಮಾನನಷ್ಟ ಮೊಕದ್ದಮೆಗೆ ಅನುಮತಿ
ಈ ಹಿಂದೆ ಮದ್ರಾಸ್ ಹೈಕೋರ್ಟ್‌ನಲ್ಲಿ ಭವಿಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಅನುಮತಿಯನ್ನು ಅಮಲಾ ಪೌಲ್ ಕೋರಿದ್ದರು. ಅಂತೆಯೇ ನ್ಯಾಯಮೂರ್ತಿ ಸತೀಶ್ ಕುಮಾರ್, ಭವಿಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಅನುಮತಿ ನೀಡಿದ್ದರು.
ಹಳೆ
ಬಾಯ್‌ಫ್ರೆಂಡ್
ವಿರುದ್ಧ
ಕೋರ್ಟ್
ಮೆಟ್ಟಿಲೇರಿದ
ನಟಿ
ಅಮಲಾ
ಪೌಲ್

ಗೌಪ್ಯ ನಿಶ್ಚಿತಾರ್ಥ ಆಗಿತ್ತು
2019ರ ಮಾರ್ಚ್ ತಿಂಗಳಲ್ಲಿ ಅಮಲಾ ಪೌಲ್ ಹಾಗೂ ಭವಿಂದರ್ ಮದುವೆ ಆಗಿರುವ ಚಿತ್ರಗಳು ಹರಿದಾಡಿದ್ದವು. ಇಬ್ಬರೂ, ಗೌಪ್ಯ ಸಮಾರಂಭವೊಂದರಲ್ಲಿ ಮದುವೆ ಆಗಿದ್ದಾರೆ ಎನ್ನಲಾಗಿತ್ತು. ಭವಿಂದರ್ ಈ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ದುರುದ್ದೇಶದಿಂದ ಅಪಪ್ರಚಾರ ಮಾಡಲಾಗಿದೆ
ಅಮಲಾ ಪೌಲ್ ಈ ನಿಶ್ಚಿತಾರ್ಥ ಮತ್ತು ಮದುವೆಯನ್ನು ನಿರಾಕರಿಸಿದ್ದರು. ಆ ಚಿತ್ರಗಳನ್ನು ವೃತ್ತಿಯ ಉದ್ದೇಶದಿಂದ ತೆಗೆಯಲಾಗಿತ್ತು, ಆದರೆ ಭವಿಂದರ್ ಆ ಚಿತ್ರಗಳನ್ನು ದುರುದ್ದೇಶಪೂರ್ವಕವಾಗಿ ಹಂಚಿಕೊಂಡಿದ್ದಾರೆ. ಇಬ್ಬರೂ ಮದುವೆ ಆಗಿರುವುದಾಗಿ ಸುಳ್ಳು ಎಂದು ಅಮಲಾ ಪೌಲ್ ತಿಳಿಸಿದ್ದರು.
ಆ
ನಟಿಯನ್ನು
ಮದುವೆಯಾಗಿ
ನನ್ನ
ಮಗನ
ಬಾಳು
ಹಾಳಾಯಿತು:
ನಿರ್ಮಾಪಕನ
ಅಳಲು
Recommended Video

ವಿಜಯ್ ಜೊತೆ ಡಿವೋರ್ಸ್
ಅಂದ್ಹಾಗೆ, ನಿರ್ದೇಶಕ ಎಲ್ ವಿಜಯ್ ಜೊತೆ ಅಮಲಾ ಪೌಲ್ 2014ರಲ್ಲಿ ವಿವಾಹವಾಗಿದ್ದರು. ಆದ್ರೆ, ಮೂರು ವರ್ಷದ ಬಳಿಕ 2017ರಲ್ಲಿ ಪರಸ್ಪರ ಒಪ್ಪಿಗೆ ಮೆರೆಗೆ ವಿಚ್ಛೇದನ ಪಡೆದುಕೊಂಡಿದ್ದರು.