twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಿಗನ ಜೀವನ ಆಧರಿಸಿದ ಹಿಂದಿ ಸಿನಿಮಾಕ್ಕೆ ನ್ಯಾಯಾಲಯ ತಡೆ

    |

    ಕಳೆದ ವರ್ಷ ನವೆಂಬರ್‌ನಲ್ಲಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಭಾರಿ ಮೆಚ್ಚುಗೆ ಪಡೆದುಕೊಂಡ ಸೂರ್ಯಾ ನಟಿಸಿದ್ದ 'ಸೂರರೈ ಪೊಟ್ರು' ಸಿನಿಮಾವು ಹಿಂದಿಗೆ ರೀಮೇಕ್ ಆಗುವ ಸುದ್ದಿ ಈ ಹಿಂದೆಯೇ ಬಂದಿತ್ತು. ಆದರೆ ಈ ಸಿನಿಮಾಕ್ಕೆ ಈಗ ಅಡೆ-ತಡೆ ಎದುರಾಗಿದೆ.

    ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ 'ಸೂರರೈ ಪೊಟ್ರು' ಸಿನಿಮಾವನ್ನು ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನ ಮಾಡಿದ್ದರು. ಸಿನಿಮಾಕ್ಕೆ ಜನ ಮೆಚ್ಚುಗೆ ದೊರೆತಿದ್ದಲ್ಲದೆ ವಿಮರ್ಶಕರಿಂದಲೂ ಬಹಳ ಶ್ಲಾಘನೆ ವ್ಯಕ್ತವಾಗಿತ್ತು. ಸಿನಿಮಾವನ್ನು ನಟ ಸೂರ್ಯ ಪಾಲುದಾರರ ಜೊತೆ ಸೇರಿ ನಿರ್ಮಾಣ ಮಾಡಿದ್ದರು.

    'ಸೂರರೈ ಪೊಟ್ರು' ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲು ಈಗಾಗಲೇ ಒಪ್ಪಂದವಾಗಿತ್ತು. ಅಲ್ಲಿಯೂ ಸಿನಿಮಾವನ್ನು ಸುಧಾ ಕೊಂಗರ ಅವರೇ ನಿರ್ದೇಶನ ಮಾಡುವವರಿದ್ದರು. ಮುಖ್ಯ ಪಾತ್ರಗಳ ಆಯ್ಕೆ ಸಹ ಆಗಿ ಹೋಗಿತ್ತು. ಆದರೆ ಈ ನಡುವೆ 'ಸೂರರೈ ಪೊಟ್ರು' ಸಿನಿಮಾ ನಿರ್ಮಾಣದಲ್ಲಿ ಸೂರ್ಯ ಸಹ ಪಾಲುದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ.

    ಸೂರ್ಯ ಒಡೆತನದ 2ಡಿ ಪ್ರೊಡಕ್ಷನ್ ಹೌಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಒಡೆತನದ ಸಿಖ್ಯ ಎಂಟರ್ಟೈನ್‌ಮೆಂಟ್ ಸಂಸ್ಥೆಯು ಒಟ್ಟಾಗಿ 'ಸೂರರೈ ಪೊಟ್ರು' ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಆದರೆ ಈಗ 'ಸೂರರೈ ಪೊಟ್ರು' ಸಿನಿಮಾ ಹಿಂದಿ ರೀಮೇಕ್‌ಗೆ ತಡೆ ನೀಡುವಂತೆ ಆಗ್ರಹಿಸಿ ಸಿಖ್ಯ ಪ್ರೊಡಕ್ಷನ್ ಹೌಸ್ ನ್ಯಾಯಾಲಯದ ಮೆಟ್ಟಿಲೇರಿದೆ. ಹಾಗಾಗಿ ಸಿನಿಮಾದ ಹಿಂದಿ ರೀಮೇಕ್ ಸದ್ಯಕ್ಕೆ ನಿಂತಿದೆ.

    ಒಪ್ಪಿಗೆ ಪಡೆಯದೆ ರೀಮೇಕ್ ಹಕ್ಕು ಮಾರಿದ್ದಾರೆ: ಆರೋಪ

    ಒಪ್ಪಿಗೆ ಪಡೆಯದೆ ರೀಮೇಕ್ ಹಕ್ಕು ಮಾರಿದ್ದಾರೆ: ಆರೋಪ

    ಸಹ ಪಾಲುದಾರರ ಬಳಿ ಮಾತನಾಡದೆ, ನಮ್ಮ ಒಪ್ಪಿಗೆ ಪಡೆಯದೆ ಸೂರ್ಯ ಒಬ್ಬರೇ ನಿರ್ಣಯ ತೆಗೆದುಕೊಂಡು 'ಸೂರರೈ ಪೊಟ್ರು' ಸಿನಿಮಾದ ಹಕ್ಕನ್ನು ಹಿಂದಿಗೆ ಮಾರಿದ್ದಾರೆ. ಸೂರ್ಯಗೆ ಇದ್ದಷ್ಟೆ ಹಕ್ಕು ಸಿನಿಮಾದ ಮೇಲೆ ನಮಗೂ ಇದ್ದು ಸೂರ್ಯ ಮಾರಿರುವ ರೀಮೇಕ್ ಹಕ್ಕು ಮಾರಾಟವನ್ನು ಅನುರ್ಜಿತಗೊಳಿಸಬೇಕು ಎಂದು ಸಿಖ್ಯ ನ್ಯಾಯಾಲಯಕ್ಕೆ ಮನವಿ ಮಾಡಿದೆ.

    ಹಿಂದಿ ರೀಮೇಕ್‌ಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ

    ಹಿಂದಿ ರೀಮೇಕ್‌ಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ

    ಪ್ರಕರಣದ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್ 'ಸೂರರೈ ಪೊಟ್ರು' ಸಿನಿಮಾದ ಹಿಂದಿ ರೀಮೇಕ್‌ಗೆ ತಡೆ ನೀಡಿದೆ. ಜೊತೆಗೆ ಸೂರ್ಯ ಹಾಗೂ ಗುಣಿತ್ ಮೊಂಗ ಅವರುಗಳು ಒಟ್ಟಾಗಿ ಕೂತು ಮಾತನಾಡಿ ಪ್ರಕರಣವನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ. ಸೂರ್ಯ ಹಾಗೂ ಗುಣೀತ್ ಸಿನಿಮಾದ ಬಗ್ಗೆ ಮಾತನಾಡಿ ಪ್ರಕರಣವನ್ನು ಬಗೆಹರಿಸಿದಲ್ಲಿ ಮಾತ್ರವೇ 'ಸೂರರೈ ಪೊಟ್ರು' ಸಿನಿಮಾ ಹಿಂದಿಗೆ ರೀಮೇಕ್ ಆಗಲಿದೆ.

    ಕನ್ನಡಿಗ ಕ್ಯಾಪ್ಟನ್ ಗೋಪಿನಾಥನ್ ಜೀವನ ಆಧರಿಸಿದ ಸಿನಿಮಾ

    ಕನ್ನಡಿಗ ಕ್ಯಾಪ್ಟನ್ ಗೋಪಿನಾಥನ್ ಜೀವನ ಆಧರಿಸಿದ ಸಿನಿಮಾ

    'ಸೂರರೈ ಪೊಟ್ರು' ಸಿನಿಮಾವು ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ ಸಿನಿಮಾ ಆಗಿದೆ. ಕ್ಯಾಪ್ಟನ್ ಗೋಪಿನಾಥ್ ಹೇಗೆ ಭಾರತದ ಅತ್ಯಂತ ಕಡಿಮೆ ಬೆಲೆಯ ಡೆಕ್ಕನ್ ಏರ್‌ಕ್ರಾಫ್ಟ್ ಸ್ಥಾಪಿಸಿದರು. ಆ ಸಂಸ್ಥೆ ಸ್ಥಾಪನೆಗೆ ಅವರಿಗಾದ ಶ್ರಮ, ಗುರಿ ಸಾಧಿಸಿದ ರೀತಿ ಇತರೆ ವಿಷಯಗಳ ಮೇಲೆ 'ಸೂರರೈ ಪೊಟ್ರು' ಬೆಳಕು ಚೆಲ್ಲಿದೆ. ಸಿನಿಮಾವು ಕ್ಯಾಪ್ಟಿನ್ ಗೋಪಿನಾಥ್ ಜೀವನದ ಯಥಾವತ್ ಪ್ರತಿಫಲನ ಅಲ್ಲದೇ ಇದ್ದರೂ ಕ್ಯಾಪ್ಟನ್ ಗೋಪಿನಾಥ್ ಜೀವನದಿಂದ ಸ್ಪೂರ್ತಿ ಪಡೆದು ನಿರ್ಮಿಸಲಾದ ಸಿನಿಮಾ ಇದಾಗಿದೆ.

    ವಿದ್ಯುತ್ ಜಮಾಲ್ ನಾಯಕನಾಗಿ ನಟಿಸಲಿದ್ದಾರೆ

    ವಿದ್ಯುತ್ ಜಮಾಲ್ ನಾಯಕನಾಗಿ ನಟಿಸಲಿದ್ದಾರೆ

    'ಸೂರರೈ ಪೊಟ್ರು' ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ನಾಯಕ ನಟನ ಪಾತ್ರವನ್ನು ವಿದ್ಯುತ್ ಜಮಾಲ್ ನಿರ್ವಹಿಸಲಿದ್ದಾರೆ. ವಿದ್ಯುತ್ ಜಮಾಲ್ ಈ ಹಿಂದೆ ಸೂರ್ಯ ಜೊತೆ ತಮಿಳು ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಸುಧಾ ಕೊಂಗರ ಅವರೇ ನಿರ್ದೇಶನ ಮಾಡಲಿದ್ದಾರೆ. ಇನ್ನುಳಿದ ಪಾತ್ರಗಳ ಆಯ್ಕೆ ನಡೆಯಬೇಕಿದೆ. ಈ ನಡುವೆ ಸಿನಿಮಾಕ್ಕೆ ನ್ಯಾಯಾಲಯವು ತಡೆ ನೀಡಿದೆ. 'ಸೂರರೈ ಪೊಟ್ರು' ಸಿನಿಮಾದ ಹಿಂದಿ ರೀಮೇಕ್ ಹಕ್ಕನ್ನು ಅಬುಂದಟಿಯಾ ಎಂಟರ್ಟೈನ್‌ಮೆಂಟ್ ಸಂಸ್ಥೆ ಒಳ್ಳೆಯ ಬೆಲೆಗೆ ಖರೀದಿಸಿದೆ. 'ಸೂರರೈ ಪೊಟ್ರು' ಸಿನಿಮಾವು ನವೆಂಬರ್ 12 ರಂದು ಅಮೆಜಾನ್ ಪ್ರೈಂನಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಒಟ್ಟಿಗೆ ಬಿಡಗುಡೆ ಆಗಿತ್ತು.

    English summary
    Madras High court stays Soorarai Potru Tamil movie's Hindi remake. Soorarai Potru movie is based on Karnataka's Captain Gopinath.
    Friday, August 6, 2021, 15:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X