For Quick Alerts
  ALLOW NOTIFICATIONS  
  For Daily Alerts

  ಧನುಶ್ 43ನೇ ಚಿತ್ರಕ್ಕೆ ಮಾಳವಿಕಾ ಮೋಹನ್ ನಾಯಕಿ

  |

  ಕಾಲಿವುಡ್ ಸ್ಟಾರ್ ಧನುಶ್ ನಟನೆಯ 43ನೇ ಚಿತ್ರಕ್ಕೆ 'ಮಾಸ್ಟರ್' ನಟಿ ಮಾಳವಿಕಾ ಮೋಹನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನರೇನ್ ಕಾರ್ತಿಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸದ್ಯಕ್ಕೆ D43 ಎಂದು ಹೇಳಲಾಗುತ್ತಿದೆ.

  ಸತ್ಯ ಜ್ಯೋತಿ ಫಿಲಂಸ್ ಈ ಚಿತ್ರ ನಿರ್ಮಿಸುತ್ತಿದ್ದು, ಮಾಳವಿಕಾ ಮೋಹನ್ ನಾಯಕಿ ಎಂದು ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಟ್ವೀಟ್ ಮಾಡಿದೆ. ''ಮಾಳವಿಕಾ ಮೋಹನ್ ಅವರನ್ನು ಡಿ43 ಚಿತ್ರಕ್ಕೆ ಬರಮಾಡಿಕೊಳ್ಳಲು ಸಂತಸವಾಗುತ್ತಿದೆ'' ಎಂದು ಟ್ವೀಟ್ ಮಾಡಿದ್ದಾರೆ.

  ಧನುಶ್ ಜೊತೆ ನಟಿಸಲು ಒಲ್ಲೆ ಎಂದಿದ್ದರೇ ನಟಿ ಸಾಯಿ ಪಲ್ಲವಿ!?ಧನುಶ್ ಜೊತೆ ನಟಿಸಲು ಒಲ್ಲೆ ಎಂದಿದ್ದರೇ ನಟಿ ಸಾಯಿ ಪಲ್ಲವಿ!?

  ಧನುಶ್ ಜೊತೆ ಇದೇ ಮೊದಲ ಸಲ ಮಾಳವಿಕಾ ಮೋಹನ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ, ಈ ಜೋಡಿ ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಾಗಿದೆ.

  ಸದ್ಯದ ಮಾಹಿತಿ ಪ್ರಕಾರ, 2021ರಲ್ಲಿ ಈ ಚಿತ್ರ ಸೆಟ್ಟೇರಲಿದ್ದು, ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಎಂದು ಹೇಳಲಾಗುತ್ತಿದೆ. ಸದ್ಯ ಕಲಾವಿದರ ಆಯ್ಕೆ ಸೇರಿದಂತೆ ಪ್ರೀ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

  ಅಂದ್ಹಾಗೆ, ಡಿ43 ಚಿತ್ರಕ್ಕೆ ಮಲಯಾಳಂ ಸಂಭಾಷಣೆಕಾರರಾದ ಶರ್ಫು ಮತ್ತು ಸುಹಾಸ್ ಸ್ಕ್ರಿಪ್ಟ್ ಮಾಡುತ್ತಿದ್ದಾರೆ.

  SUPERSTAR SURYA Kannada Short Film Teaser | Rakshit | Praveen | Nikhil | Filmibeat Kannada

  ಇನ್ನು ಮಾಳವಿಕಾ ಮೋಹನ್ ತಮಿಳು ನಟ ವಿಜಯ್ ನಟನೆಯ 'ಮಾಸ್ಟರ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಲೋಕೇಶ್ ಕನಕರಾಜ್ ಈ ಚಿತ್ರ ನಿರ್ದೇಶಿಸಿದ್ದಾರೆ.

  English summary
  Master actress Malavika Mohanan playing female lead In Dhanush 43rd movie, directed by Naren Karthick.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X