For Quick Alerts
  ALLOW NOTIFICATIONS  
  For Daily Alerts

  ರಜನೀಕಾಂತ್ ಸಿನಿಮಾಕ್ಕೆ ದಿಗ್ಗಜರ ಸಮಾಗಮ, ಶಿವಣ್ಣನ ಬಿಳಿಕ ಮಲಯಾಳಂ ಸ್ಟಾರ್ ನಟ

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಟಾರ್ ನಟ ರಜನೀಕಾಂತ್‌ರ ತಮಿಳು ಸಿನಿಮಾ 'ಜೈಲರ್' ಅದ್ಧೂರಿಯಾಗಿ ನಿರ್ಮಾಣವಾಗುತ್ತಿದ್ದು, ಸೂಪರ್ ಸ್ಟಾರ್ ರಜನೀ ಇದ್ದಾಗಿಯೂ ಇನ್ನೂ ಕೆಲವು ಸ್ಟಾರ್ ನಟರನ್ನು ಸಿನಿಮಾಕ್ಕಾಗಿ ಕರೆತರಲಾಗಿದೆ.

  'ಜೈಲರ್' ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹಳೆಯ ಸುದ್ದಿಯೇ ಆಗಿದೆ. ಹೊಸ ಸುದ್ದಿಯೆಂದರೆ ಈ ಸಿನಿಮಾದಲ್ಲಿ ಶಿವಣ್ಣ ಮಾತ್ರವೇ ಅಲ್ಲದೆ ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮೋಹನ್‌ಲಾಲ್ ಸಹ ನಟಿಸುತ್ತಿದ್ದಾರೆ.

  ಹೌದು, 'ಜೈಲರ್' ಸಿನಿಮಾದಲ್ಲಿ ಈಗಾಗಲೇ ಶಿವರಾಜ್ ಕುಮಾರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಶೂಟಿಂಗ್ ಸಹ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ಇದೀಗ ಅದೇ ಸಿನಿಮಾಕ್ಕೆ ಮಲಯಾಳಂ ಸ್ಟಾರ್ ನಟನನ್ನು ತಂದಿದ್ದು, ಅವರ ಪಾತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ಆರಂಭವಾಗಿದೆಯಂತೆ.

  ಮೋಹನ್‌ಲಾಲ್‌ಗೆ ತಮಿಳು ಸಿನಿಮಾ ಹೊಸದೇನೂ ಅಲ್ಲ. ಮಣಿರತ್ನಂ ನಿರ್ದೇಶನದ 'ಇರುವರ್', ನಾಯಕನಾಗಿ ನಟಿಸಿದ 'ಪಾಪ್‌ಕಾರ್ನ್', ಕಮಲ್ ಹಾಸನ್ ಜೊತೆಗೆ 'ಉನ್ನೈಪೋಲ್ ಒರುವನ್', ಸ್ಟಾರ್ ನಟ ವಿಜಯ್ ಜೊತೆಗೆ 'ಜಿಲ್ಲಾ', ಸೂರ್ ನಟಿಸಿದ್ದ 'ಕಪ್ಪನ್' ತಮಿಳು ಸಿನಿಮಾಗಳಲ್ಲಿ ಮೋಹನ್‌ಲಾಲ್ ನಟಿಸಿದ್ದಾರೆ. ಆದರೆ ರಜನೀಕಾಂತ್ ಜೊತೆಗೆ ನಟಿಸುತ್ತಿರುವುದು ಇದೆ ಮೊದಲು.

  ರಜನೀಕಾಂತ್ ಹಾಗೂ ಮೋಹನ್‌ಲಾಲ್ ಇಬ್ಬರ ಅಭಿಮಾನಿಗಳು ಸಹ ಈ ಸುದ್ದಿಯಿಂದ ಥ್ರಿಲ್ ಆಗಿದ್ದಾರೆ. ಇದೊಂದು ಐಕಾನಿಕ್ ಸನ್ನಿವೇಶ ಆಗಲಿದೆ ಎಂದು ಕೆಲವು ಅಭಿಮಾನಿಗಳು ಹೇಳಿದ್ದರೆ, ಅನಿರುದ್ಧ್ ಹಿನ್ನೆಲೆ ಸಂಗೀತದಲ್ಲಿ ಮೋಹನ್‌ಲಾಲ್ ಹಾಗೂ ರಜನೀಕಾಂತ್ ಸ್ಲೋ ಮೋಷನ್‌ನಲ್ಲಿ ನಡೆದು ಬರುವುದನ್ನು ನೋಡುವುದೇ ಅಂದ ಎಂದಿದ್ದಾರೆ.

  Malayalam Star Actor Mohanlal Acting In Rajinikanths Jailer Movie

  ರಜನೀಕಾಂತ್‌ರ 'ಜೈಲರ್' ಸಿನಿಮಾದಲ್ಲಿ ಬಂಧಿಖಾನೆಯ ಜೈಲರ್ ಪಾತ್ರದಲ್ಲಿ ರಜನೀಕಾಂತ್ ನಟಿಸಿದ್ದಾರೆ. ಸಿನಿಮಾಕ್ಕೆ ತಮನ್ನಾ ಭಾಟಿಯಾ ನಾಯಕಿ. ಸಿನಿಮಾದಲ್ಲಿ ಶಿವಣ್ಣ, ಮೋಹನ್‌ಲಾಲ್ ಜೊತೆಗೆ ನಟಿ ರಮ್ಯಾಕೃಷ್ಣ ಸಹ ಇದ್ದಾರೆ. ತೆಲುಗಿನ ಸ್ಟಾರ್ ನಟರೊಬ್ಬರು ಸಹ ಈ ಸಿನಿಮಾದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

  ಇನ್ನು ರಜನೀಕಾಂತ್ 'ಜೈಲರ್' ಸಿನಿಮಾದ ಬಳಿಕ 'ಲಾಲ್ ಸಲಾಂ' ಸಿನಿಮಾಕ್ಕೆ ಬಣ್ಣ ಹಚ್ಚಲಿದ್ದಾರೆ. ಆದರೆ ಈ ಸಿನಿಮಾದಲ್ಲಿ ರಜನೀ ಅವರದ್ದು ಪೂರ್ಣ ಪ್ರಮಾಣದ ನಾಯಕನ ಪಾತ್ರವಲ್ಲ ಬದಲಿಗೆ ಮುಖ್ಯ ಅತಿಥಿ ಪಾತ್ರವಷ್ಟೆ. ಸಿನಿಮಾವನ್ನು ರಜನೀಕಾಂತ್‌ರ ಪುತ್ರಿ ಐಶ್ವರ್ಯಾ ನಿರ್ದೇಶನ ಮಾಡಲಿದ್ದಾರೆ. ಏಳು ವರ್ಷಗಳ ಬಳಿಕ ಸಿನಿಮಾ ನಿರ್ದೇಶನಕ್ಕೆ ಐಶ್ವರ್ಯಾ ಕೈ ಹಾಕಿದ್ದಾರೆ. ಈ ಸಿನಿಮಾವು ಕಮ್ಯುನಿಸಂ ಹಾಗೂ ಕ್ರಿಕೆಟ್‌ ಕುರಿತಾದ ಕತೆಯನ್ನು ಹೊಂದಿರಲಿದೆಯಂತೆ.

  English summary
  Malayalam star actor Mohanlal acting in Rajinikanth's Jailer movie. Kannada star Shiva Rajkumar is already acting in the same movie.
  Monday, January 9, 2023, 10:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X