For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ನಂತರ 'ಪೊನ್ನಿಯನ್ ಸೆಲ್ವೆನ್' ಚಿತ್ರೀಕರಣಕ್ಕೆ ಸಜ್ಜಾದ ಮಣಿರತ್ನಂ!

  |

  ಸ್ಟಾರ್ ನಿರ್ದೇಶಕ ಮಣಿರತ್ನಂ ಅವರ ಬಹುನಿರೀಕ್ಷಿತ ಚಿತ್ರ 'ಪೊನ್ನಿಯನ್ ಸೆಲ್ವೆನ್' ನವೆಂಬರ್ ಮಧ್ಯದಿಂದ ಮತ್ತೆ ಚಿತ್ರೀಕರಣ ಆರಂಭ ಮಾಡುತ್ತಿದೆ.

  ಲಾಕ್‌ಡೌನ್ ಹಿನ್ನೆಲೆ ಸ್ಥಗಿತಗೊಂಡಿದ್ದ ಶೂಟಿಂಗ್‌ಗೆ ಮತ್ತೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತು ಅಧಿಕೃತ ಮಾಹಿತಿ ನೀಡದಿದ್ದರೂ ಮೂಲಗಳಿಂದ ತಿಳಿದು ಬಂದಿದೆ.

  ಮಣಿರತ್ನಂ ಮುಂದಿನ ಚಿತ್ರದಲ್ಲಿ ಒಬ್ಬರಲ್ಲ, ಇಬ್ಬರಲ್ಲ 8 ಜನ ಸೂಪರ್ ಸ್ಟಾರ್ಸ್ಮಣಿರತ್ನಂ ಮುಂದಿನ ಚಿತ್ರದಲ್ಲಿ ಒಬ್ಬರಲ್ಲ, ಇಬ್ಬರಲ್ಲ 8 ಜನ ಸೂಪರ್ ಸ್ಟಾರ್ಸ್

  ಲಾಕ್‌ಡೌನ್‌ಗೂ ಮುಂಚೆ ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಮಾಡಿತ್ತು. ಕೊರೊನಾ ಸಮಸ್ಯೆ ಹೆಚ್ಚಾದ ಕಾರಣ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ವಾಪಸ್ ಆಗಿದ್ದರು. ಸದ್ಯದ ಮಾಹಿತಿ ಪ್ರಕಾರ, ಎರಡನೇ ಹಂತದ ಶೂಟಿಂಗ್ ಶ್ರೀಲಂಕಾದಲ್ಲಿ ನಡೆಯಲಿದೆ.

  ಲೈಕಾ ಪ್ರೊಡಕ್ಷನ್ ಮತ್ತು ಮದ್ರಾಸ್ ಟಾಕೀಸ್ ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿದೆ. ಎಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. 'ಪೊನ್ನಿಯನ್ ಸೆಲ್ವೆನ್' ಹೆಸರಿನ ಕಾದಂಬರಿ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದ್ದು, ಎರಡು ಭಾಗಗಳಾಗಿ ಈ ಸಿನಿಮಾ ಬಿಡುಗಡೆಯಾಗಲಿದೆ.

  ಅಂದ್ಹಾಗೆ, ಪೊನ್ನಿಯನ್ ಸೆಲ್ವೆನ್ ಚಿತ್ರದಲ್ಲಿ ಬಹುದೊಡ್ಡ ತಾರಬಳಗ ಇದೆ. ತ್ರಿಷಾ ಕೃಷ್ಣನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಐಶ್ವರ್ಯ ರೈ ಬಚ್ಚನ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಯಂ ರವಿ, ಚಿಯಾನ್ ವಿಕ್ರಮ್, ಕಾರ್ತಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಜಯರಾಂ, ಲಾಲ್, ರಿಯಾಜ್, ಮೋಹನ್ ರಾಮನ್, ವಿಜಯ್ ಕುಮಾರ್, ಐಶ್ವರ್ಯ ಲಕ್ಷ್ಮಿ ಸಹ ಇದ್ದಾರೆ.

  English summary
  Mani ratnam's multi starrer movie Ponniyin selvan shooting will resume in sri lanka in november mid.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X