twitter
    For Quick Alerts
    ALLOW NOTIFICATIONS  
    For Daily Alerts

    ಭಾರತದ ಟಾಪ್ ನಿರ್ದೇಶಕರಿಂದ ನಿರ್ಮಾಣ ಸಂಸ್ಥೆ, ಚೊಚ್ಚಲ ಚಿತ್ರ ಯಾವುದು?

    |

    ನಿರ್ದೇಶಕರು ಸಿನಿಮಾ ನಿರ್ಮಾಣ ಮಾಡುವುದು ಹೊಸತೇನಲ್ಲ. ಈಗ ಬಹುತೇಕ ಸ್ಟಾರ್ ನಿರ್ದೇಶಕರೆಲ್ಲರೂ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ದೊಡ್ಡ ದೊಡ್ಡ ಚಿತ್ರಗಳನ್ನು ನಿರ್ಮಿಸದಿದ್ದರೂ ಹೊಸಬರ ಸಿನಿಮಾ, ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಾಣ ಮಾಡಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡ್ತಿದ್ದಾರೆ.

    ನಿರ್ದೇಶಕರು, ನಿರ್ಮಾಪಕರು ನಿಧಾನವಾಗಿ ಒಟಿಟಿಗೆ ಹೊಂದಿಕೊಳ್ಳುತ್ತಿದ್ದಾರೆ. ಸ್ಟಾರ್ ನಟರ ಕಮರ್ಷಿಯಲ್ ಚಿತ್ರಗಳ ಜೊತೆ ಜೊತೆಗೆ ವೆಬ್ ಸಿರೀಸ್, ಟಿವಿ ಶೋಗಳನ್ನು, ಕಿರುಚಿತ್ರಗಳನ್ನು ತಯಾರಿಸಿ ಒಟಿಟಿಯಲ್ಲಿ ರಿಲೀಸ್ ಮಾಡುವ ಟ್ರೆಂಡ್ ಅನುಸರಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಗಳಿಸಿರುವ ನಿರ್ದೇಶಕರು ವೆಬ್ ಸಿರೀಸ್‌ಗಳ ಕಡೆ ಹೆಜ್ಜೆಯಿಟ್ಟಿರುವುದು ಸರ್ಪ್ರೈಸ್ ಎನಿಸಿದೆ.

    ಅನ್ನಿಯನ್ ಹಿಂದಿ ರಿಮೇಕ್: ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ ರವಿಚಂದ್ರನ್ಅನ್ನಿಯನ್ ಹಿಂದಿ ರಿಮೇಕ್: ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ ರವಿಚಂದ್ರನ್

    ಇದೀಗ, ಕಾಲಿವುಡ್ ಇಂಡಸ್ಟ್ರಿಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಭಾರತೀಯ ಸಿನಿಮಾ ಪ್ರಪಂಚದಲ್ಲಿ ತಮ್ಮದೇ ಶೈಲಿಯ ಸಿನಿಮಾ ಮೇಕಿಂಗ್‌ನಿಂದ ಗುರುತಿಸಿಕೊಂಡಿರುವ ಖ್ಯಾತ ನಿರ್ದೇಶಕರೆಲ್ಲ ಒಟ್ಟುಗೂಡಿ ಹೊಸ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದಾರೆ. ಈ ಸಂಸ್ಥೆಯಲ್ಲಿ ವೆಬ್ ಸಿರೀಸ್‌ಗಳನ್ನು ತಯಾರಿಸುವುದು ಪ್ರಮುಖ ಉದ್ದೇಶವಾಗಿದೆ ಎನ್ನುವ ಅಂಶ ಕುತೂಹಲ ಮೂಡಿಸಿದೆ. ಮುಂದೆ ಓದಿ...

    ಯಾರು ಆ ನಿರ್ದೇಶಕರು?

    ಯಾರು ಆ ನಿರ್ದೇಶಕರು?

    ಖ್ಯಾತ ನಿರ್ದೇಶಕ ಶಂಕರ್ ಮತ್ತು ಮಣಿರತ್ನಂ ಸೇರಿ ಹೊಸ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆಯಲ್ಲಿ ದಕ್ಷಿಣದ ಪ್ರತಿಭಾನ್ವಿತ ನಿರ್ದೇಶಕರು ಸಹ ಭಾಗಿಯಾಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ವೆಟ್ರಿಮಾರನ್, ಗೌತಮ್ ಮೆನನ್, ಲಿಂಗಸ್ವಾಮಿ, ಲೋಕೇಶ್ ಕನಕರಾಜ್, ಎಆರ್ ಮುರುಗದಾಸ್, ಮಿಸ್ಕಿನ್, ವಸಂತಬಾಲನ್, ಪೂ ಸಸಿ ಸೇರಿದಂತೆ ಹಲವರು ಕೈ ಜೋಡಿಸಿದ್ದಾರೆ.

    ಲೋಕೇಶ್ ಕನಕರಾಜ್ ಚೊಚ್ಚಲ ಸಿನಿಮಾ

    ಲೋಕೇಶ್ ಕನಕರಾಜ್ ಚೊಚ್ಚಲ ಸಿನಿಮಾ

    ಈ ಸಂಸ್ಥೆಗೆ 'ರೈನ್ ಆನ್ ಫಿಲಂಸ್' ಎಂದು ಹೆಸರಿಟ್ಟಿದ್ದು, ವೆಬ್ ಸಿರೀಸ್‌ಗಳನ್ನು ತಯಾರಿಸುವುದು ಮುಖ್ಯ ಉದ್ದೇಶವಾಗಿದೆ. ಒಟಿಟಿ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ಎಕ್ಸ್‌ಕ್ಲೂಸಿವ್ ಆಗಿ ಒಟಿಟಿಗೆ ಸಿನಿಮಾ ಮಾಡುವುದು ಯೋಜನೆ ಇದು. ದೊಡ್ಡ ನಿರ್ದೇಶಕರ ಚಿತ್ರಗಳಿಗೆ ಹೆಚ್ಚು ವೀಕ್ಷಕರು ಬರ್ತಾರೆ ಎನ್ನುವುದು ಒಟಿಟಿ ಸಂಸ್ಥೆಗಳ ಲೆಕ್ಕಾಚಾರವೂ ಹೌದು. ಹಾಗಾಗಿ, ಇಂತಹ ಯೋಜನೆಗೆ ಅವರ ಬೆಂಬಲವಾಗಿ ನಿಲ್ಲುತ್ತಾರೆ. ಈ ಹೊಸ ಯೋಜನೆಯನ್ನು ತಮಿಳು ನಿರ್ದೇಶಕರು ಜಾರಿಗೆ ತಂದಿರುವುದು ಸದ್ಯ ಸೌತ್ ಇಂಡಿಯಾದ ಪ್ರಮುಖ ವಿಷಯವಾಗಿದೆ.

    ಗಾಯದಿಂದ ಚೇತರಿಸಿಕೊಂಡ ಪ್ರಕಾಶ್ ರಾಜ್: ಮಧ್ಯಪ್ರದೇಶದ ಕಡೆ ಪ್ರಯಾಣಗಾಯದಿಂದ ಚೇತರಿಸಿಕೊಂಡ ಪ್ರಕಾಶ್ ರಾಜ್: ಮಧ್ಯಪ್ರದೇಶದ ಕಡೆ ಪ್ರಯಾಣ

    'ವಿಕ್ರಂ' ಮುಗಿಸಿ ಹೊಸ ಸಿನಿಮಾ ಶುರು

    'ವಿಕ್ರಂ' ಮುಗಿಸಿ ಹೊಸ ಸಿನಿಮಾ ಶುರು

    ಕಮಲ್ ಹಾಸನ್ ಜೊತೆ ಲೋಕೇಶ್ ಕನಕರಾಜ್ 'ವಿಕ್ರಂ' ಸಿನಿಮಾ ಮಾಡ್ತಿದ್ದಾರೆ. ವಿಜಯ್ ಸೇತುಪತಿ, ಫಾಹದ್ ಫಾಸಿಲ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಮಾಸ್ಟರ್' ನಂತರ ಈ ಪ್ರಾಜೆಕ್ಟ್ ಮಾಡುತ್ತಿದ್ದು, ಸ್ಟಾರ್ ನಟರ ಜೊತೆ ಲೋಕೇಶ್ ಉತ್ತಮ ಒಡನಾಟ ಹೊಂದಿದ್ದಾರೆ. ಹಾಗಾಗಿ, ಮಣಿರತ್ನಂ-ಶಂಕರ್ ಸಂಸ್ಥೆಯಲ್ಲಿ ಚೊಚ್ಚಲ ಸಿನಿಮಾ ಮಾಡುವ ಅವಕಾಶ ಲೋಕೇಶ್ ಕನಕರಾಜ್‌ಗೆ ನೀಡಲಾಗಿದೆ. ಸದ್ಯಕ್ಕೆ ಪ್ರಾಜೆಕ್ಟ್ ಮತ್ತು ಪ್ಲಾನಿಂಗ್ ಓಕೆ ಆಗಿದ್ದು, ಕಲಾವಿದರು, ಶೂಟಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

    ರಣ್ವೀರ್-ರಾಮ್ ಚರಣ್ ಜೊತೆ ಶಂಕರ್

    ರಣ್ವೀರ್-ರಾಮ್ ಚರಣ್ ಜೊತೆ ಶಂಕರ್

    ಭಾರತೀಯ ಮೆಗಾ ಪ್ರಾಜೆಕ್ಟ್‌ 'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿ ಮಣಿರತ್ನಂ ಬ್ಯುಸಿ ಇದ್ದಾರೆ. ತ್ರಿಷಾ, ಐಶ್ವರ್ಯ ರೈ, ವಿಕ್ರಂ, ಜಯಂ ರವಿ, ಕಾರ್ತಿ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಶಂಕರ್ ಸಹ ಎರಡು ಪ್ರಾಜೆಕ್ಟ್ ಘೋಷಿಸಿ ತಯಾರಿ ನಡೆಸಿದ್ದಾರೆ. ತೆಲುಗು ನಟ ರಾಮ್ ಚರಣ್ ತೇಜ ಜೊತೆ 15ನೇ ಚಿತ್ರ ಮತ್ತು ರಣ್ವೀರ್ ಸಿಂಗ್ ಜೊತೆ 'ಅನ್ನಿಯನ್' ಹಿಂದಿ ರಿಮೇಕ್ ಮಾಡಬೇಕಿದೆ. ತಮಿಳು ಸೂರ್ಯ ನಟಿಸುತ್ತಿರುವ 'ವಾದಿವಾಸಲ್' ಚಿತ್ರಕ್ಕೆ ವೆಟ್ರಿಮಾರನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ದರ್ಬಾರ್' ಮುಗಿದ ನಂತರ ಮುರುಗದಾಸ್ ಹೊಸ ಸಿನಿಮಾ ಘೋಷಣೆ ಮಾಡಿಲ್ಲ.

    English summary
    Mani Ratnam and Shankar join hands to start a new production house. Lokesh Kanagaraj to direct the maiden film for the banner.
    Wednesday, August 25, 2021, 14:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X