Just In
Don't Miss!
- Automobiles
ಭಾರತದಲ್ಲಿ ವರ್ಷಕ್ಕೊಂದು ಹೊಚ್ಚ ಹೊಸ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದೆ ಸಿಟ್ರನ್
- Sports
ಬಿಎಂಡಬ್ಲ್ಯೂ ನೂತನ ಕಾರು ಖರೀದಿಸಿದ ವೇಗಿ ಮೊಹಮ್ಮದ್ ಸಿರಾಜ್
- News
ಕೊರೊನಾ 2ನೇ ಅಲೆ: ಅಲರ್ಟ್ ಆಗಿರಬೇಕಾದ ಸಮಯದಲ್ಲಿ ಬಿಎಸ್ವೈ ಸರಕಾರದ ಎಡವಟ್ಟು
- Finance
ಷೇರು ಮಾರುಕಟ್ಟೆ ತಲ್ಲಣ; 700 ಪಾಯಿಂಟ್ ಗೂ ಹೆಚ್ಚು ಕುಸಿದ ಸೆನ್ಸೆಕ್ಸ್
- Lifestyle
ಪದೇ ಪದೇ ಬದಲಾಗುವ ನಿಮ್ಮ ಸಂಗಾತಿಯ ಭಾವನೆಗಳನ್ನು ಈ ರೀತಿ ಸರಿ ಮಾಡಿ
- Education
KIOCL Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಮಾಸ್ಟರ್' ಕಲೆಕ್ಷನ್: ಕೊರೊನಾ ನಡುವೆಯೂ ಮೊದಲ ದಿನ ದಾಖಲೆ ಬರೆದ ವಿಜಯ್
ತಮಿಳು ನಟ ವಿಜಯ್ ಅಭಿನಯದ 'ಮಾಸ್ಟರ್' ಸಿನಿಮಾ ವರ್ಲ್ಡ್ ವೈಡ್ ತೆರೆಕಂಡಿದೆ. ಕೊರೊನಾ ಆತಂಕದ ನಡುವೆಯೂ ಮಾಸ್ಟರ್ ಸಿನಿಮಾ ಅದ್ಧೂರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಕೊರೊನಾ ಭೀತಿ, 50 ಪರ್ಸೆಂಟ್ ಆಸನಕ್ಕೆ ಮಾತ್ರ ಅವಕಾಶ, ಜನ ಥಿಯೇಟರ್‌ಗೆ ಬರ್ತಾರೋ ಇಲ್ವೋ ಎಂಬ ಭಯದ ನಡುವೆಯೂ ಮಾಸ್ಟರ್ ಮೊದಲ ದಿನ ಗೆದ್ದು ಬೀಗಿದೆ.
ಒಂದು ವರ್ಷದಿಂದ ಸೈಲೆಂಟ್ ಆಗಿದ್ದ ಬಾಕ್ಸ್ ಆಫೀಸ್ ಸಂಕ್ರಾಂತಿ ಹಬ್ಬಕ್ಕೆ ಮತ್ತೆ ಸದ್ದು ಮಾಡಲು ಆರಂಭಿಸಿದೆ. ತಮಿಳುನಾಡು, ಕರ್ನಾಟಕ, ಆಂಧ್ರ-ತೆಲಂಗಾಣ, ಕೇರಳ ಸೇರಿದಂತೆ ಹಲವು ರಾಜ್ಯಗಳ ಹಾಗೂ ವಿದೇಶದ ಹಲವು ದೇಶಗಳಲ್ಲಿ ಮಾಸ್ಟರ್ ಸಿನಿಮಾ ರಿಲೀಸ್ ಆಗಿದ್ದು, ಭಾರತದಲ್ಲಿ ಮೊದಲ ದಿನ ದಾಖಲೆಯ ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಹಾಗಾದ್ರೆ, ಮೊದಲ ದಿನ ಮಾಸ್ಟರ್ ಸಿನಿಮಾ ಗಳಿಸಿದ್ದೆಷ್ಟು? ಮುಂದೆ ಓದಿ....
ನಿಯಮ ಉಲ್ಲಂಘಿಸಿ ಮಾಸ್ಟರ್ ಸಿನಿಮಾ ಪ್ರದರ್ಶಿಸಿದ ಚಿತ್ರಮಂದಿರದ ವಿರುದ್ಧ ಪ್ರಕರಣ

ಮೊದಲ ದಿನ 'ಮಾಸ್ಟರ್' ಕಲೆಕ್ಷನ್ ಎಷ್ಟು?
ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ಮೊದಲನೇ ದಿನ ಭರ್ಜರಿ ಬಿಸಿನೆಸ್ ಮಾಡಿದೆ. ಕೇವಲ 50 ಪರ್ಸೆಂಟ್ ಆಸನ ಭರ್ತಿ ನಿಯಮ ಇದ್ದರೂ ಗಳಿಕೆಯಲ್ಲಿ ದಾಖಲೆ ಬರೆದಿದೆ. ವರದಿಗಳ ಪ್ರಕಾರ, 'ಮಾಸ್ಟರ್' ಸಿನಿಮಾ ಮೊದಲ ದಿನ 40 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಕೊರೊನಾ ಆತಂಕದಲ್ಲಿ ಮೊದಲ ದಿನ ಇಷ್ಟೊಂದು ಗಳಿಕೆ ಕಂಡಿರುವುದು ನಿಜಕ್ಕೂ ಅದ್ಭುತ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
'ಮಾಸ್ಟರ್' ನಿರ್ಮಾಪಕನ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಸೂಚನೆ

ತಮಿಳಿನಾಡಿನಲ್ಲಿ 'ಮಾಸ್ಟರ್' ಅಬ್ಬರ
ತಮಿಳುನಾಡಿನಲ್ಲಿ ಮಾತ್ರ 'ಮಾಸ್ಟರ್' ಸಿನಿಮಾ 23 ರಿಂದ 27 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಇದಕ್ಕೂ ಮುಂಚೆ ವಿಜಯ್ ನಟಿಸಿದ್ದ 'ಸರ್ಕಾರ್' ಸಿನಿಮಾ (ಮೊದಲ ದಿನ) 32 ಕೋಟಿ, 'ಬಿಗಿಲ್' 26.5 ಕೋಟಿ ಹಾಗೂ 'ಮೆರ್ಸಲ್' ಸಿನಿಮಾ 23.5 ಕೋಟಿ ಗಳಿಸಿದೆ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಮಾಸ್ಟರ್ ಗಳಿಸಿದ್ದು ಎಷ್ಟು?
ಕರ್ನಾಟಕದಲ್ಲೂ 'ಮಾಸ್ಟರ್' ಚಿತ್ರಕ್ಕೆ ಭರ್ಜರಿ ರೆಸ್‌ಪಾನ್ಸ್ ಸಿಕ್ಕಿದೆ. ವರದಿಗಳ ಪ್ರಕಾರ ಕರ್ನಾಟಕದಲ್ಲಿ 'ಮಾಸ್ಟರ್' ಸಿನಿಮಾ ಮೊದಲ ದಿನ 3 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆಯಂತೆ. ಆ ಕೇರಳದಲ್ಲೂ ಮೊದಲ ದಿನ ಸುಮಾರು 3 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ.
'ಮಾಸ್ಟರ್' ಟ್ವಿಟ್ಟರ್ ವಿಮರ್ಶೆ; ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು?

ಆಂಧ್ರ-ತೆಲಂಗಾಣದಲ್ಲಿ 5 ಕೋಟಿ
ತೆಲುಗಿನಲ್ಲಿ ಬಿಡುಗಡೆಯಾಗಿದ್ದ 'ಮಾಸ್ಟರ್' ಸಿನಿಮಾ ಆಂಧ್ರ ಮತ್ತು ತೆಲಂಗಾಣದಲ್ಲಿ ಅಬ್ಬರಿಸಿದೆ. ತೆಲುಗು ರಾಜ್ಯಗಳಲ್ಲಿ ಮೊದಲ ದಿನ 'ಮಾಸ್ಟರ್' ಸಿನಿಮಾ 4.5 ಕೋಟಿಯಿಂದ 5 ಕೋಟಿವರೆಗೂ ಗಳಿಕೆ ಕಂಡಿದೆ. ರಜನಿಕಾಂತ್ ನಂತರ ತಮಿಳು ನಟನೊಬ್ಬನ ಡಬ್ಬಿಂಗ್ ಚಿತ್ರ 5 ಕೋಟಿ ಗಳಿಸಿರುವುದು ಇದೇ ಮೊದಲು ಎನ್ನಲಾಗಿದೆ.