For Quick Alerts
  ALLOW NOTIFICATIONS  
  For Daily Alerts

  ಮುತ್ತಯ್ಯ ಮುರಳೀಧರನ್ ಬಯೋಪಿಕ್ ಚಿತ್ರದ ಬಗ್ಗೆ ಅಪ್‌ಡೇಟ್

  |

  ಶ್ರೀಲಂಕಾ ಕ್ರಿಕೆಟ್ ತಂಡದ ದಿಗ್ಗಜ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಅವರ ಜೀವನಕಥೆ ತೆರೆಮೇಲೆ ಬರಲಿದೆ. ತಮಿಳು ನಟ ವಿಜಯ್ ಸೇತುಪತಿ ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಈ ಚಿತ್ರಕ್ಕೆ ಅಧಿಕೃತವಾಗಿ '800' ಎಂದು ಹೆಸರಿಡಲಾಗಿದೆ. ಈಗಾಗಲೇ ಚಿತ್ರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಇದೀಗ, ಮುರಳೀಧರನ್ ಬಯೋಪಿಕ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

  ಮುತ್ತಯ್ಯ ಮುರಳೀಧರನ್ ಬಯೋಪಿಕ್ ಫಸ್ಟ್ ಲುಕ್, ದಿಗ್ಗಜನ ಕ್ರಿಕೆಟಿಗನಾಗಿ ಸ್ಟಾರ್ ನಟ

  ಇಂದು ಸಂಜೆ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯಕ್ಕೂ ಮುನ್ನ ಸಂಜೆ 6 ಗಂಟೆಗೆ ಮುತ್ತಯ್ಯ ಮುರಳೀಧರನ್ ಬಯೋಪಿಕ್‌ನ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗುತ್ತದೆ.

  ಅಂದ್ಹಾಗೆ, ಈ ಚಿತ್ರವನ್ನು ಎಂಎಸ್ ಶ್ರೀಪತಿ ನಿರ್ದೇಶಿಸುತ್ತಿದ್ದು, ಮೂವಿ ಟ್ರೈನ್ ಮೋಷನ್ ಪಿಕ್ಚರ್ಸ್ ಮತ್ತು ಡಾರ್ ಮೋಷನ್ ಪಿಕ್ಚರ್ಸ್ ಸಂಸ್ಥೆ ಜಂಟಿಯಾಗಿ ನಿರ್ಮಿಸುತ್ತಿದೆ. ಬಿಗ್ ಬಜೆಟ್ ನಲ್ಲಿ ತಯಾರಾಗಲಿರುವ ಈ ಚಿತ್ರ ಭಾರತ, ಶ್ರೀಲಂಕಾ ಮತ್ತು ಇಂಗ್ಲೆಂಡ್ ನಲ್ಲಿ ಚಿತ್ರೀಕರಣ ಮಾಡಲು ಯೋಜನೆ ಹಾಕಿದ್ದಾರೆ.

  ಮುತ್ತಯ್ಯ ಮುರಳೀಧರನ್ ಕುರಿತು

  Ragini Dwivedi, ಬೇಲ್ ಕೊಟ್ಟಿಲ್ಲ ಅಂದ್ರೆ ಪರವಾಗಿಲ್ಲ ಈ 3 ವಸ್ತುಗಳನ್ನು ವಾಪಸ್ ಕೊಡಿ ಪ್ಲೀಸ್ |Filmibeat Kannada

  ಶ್ರೀಲಂಕಾ ಪರ ಟೆಸ್ಟ್, ಏಕದಿನ ಹಾಗೂ ಟಿ-ಟ್ವೆಂಟಿ ಆಡಿರುವ ಮುರಳೀಧರನ್ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲನೇ ಆಟಗಾರ. 133 ಟೆಸ್ಟ್ ಪಂದ್ಯಗಳನ್ನ ಆಡಿರುವ ಮುರಳೀಧರನ್ 800 ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿರುವ ವಿಶ್ವದ ಪ್ರಥಮ ಬೌಲರ್. 350 ಏಕದಿನ ಪಂದ್ಯದಲ್ಲಿ 534 ವಿಕೆಟ್ ಪಡೆದುಕೊಂಡಿದ್ದಾರೆ. 12 ಟಿ-ಟ್ವೆಂಟಿ ಪಂದ್ಯದಲ್ಲಿ 13 ವಿಕೆಟ್ ಪಡೆಯುವ ಮೂಲಕ ಒಟ್ಟು 1,247 ಅಂತಾರಾಷ್ಟ್ರಿಯ ವಿಕೆಟ್ ಪಡೆಯುವ ಮೂಲಕ ಹಲವು ದಾಖಲೆಗಳನ್ನ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

  English summary
  Vijay Sethupathi as cricketer Muthiah Muralidaran in the cricketer's biopic, Titled 800 The Film. Directed by MSSripathy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X