twitter
    For Quick Alerts
    ALLOW NOTIFICATIONS  
    For Daily Alerts

    ರಜನೀಕಾಂತ್ ರಾಜಕೀಯ ಪಕ್ಷದ ಹೆಸರು, ಚಿಹ್ನೆ ಬಹಿರಂಗ!

    |

    ರಾಜಕೀಯ ಪ್ರವೇಶ ಮಾಡುವುದಾಗಿ ನಟ ರಜನೀಕಾಂತ್ ಈಗಾಗಲೇ ಅಧಿಕೃತವಾಗಿ ಘೋಷಿಸಿಯಾಗಿದೆ. ತಮ್ಮ ಪಕ್ಷದ ಹೆಸರು, ಚಿಹ್ನೆಯನ್ನು ಡಿಸೆಂಬರ್ 31 ರಂದು ಘೋಷಿಸುವುದಾಗಿ ರಜನೀಕಾಂತ್ ಈಗಾಗಲೇ ಹೇಳಿದ್ದಾರೆ.

    ಆದರೆ ರಜನೀಕಾಂತ್ ಘೋಷಿಸುವ ಮುನ್ನವೇ ಪಕ್ಷದ ಹೆಸರು, ಚಿಹ್ನೆ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ. ಹಲವು ತಮಿಳು ಚಾನೆಲ್‌ಗಳು ಈ ಬಗ್ಗೆ ಸುದ್ದಿಯನ್ನು ಬಿತ್ತರಿಸುತ್ತಿದ್ದು, ರಜನೀಕಾಂತ್ ಪಕ್ಷದ ಹೆಸರನ್ನು 'ಮಕ್ಕಳ್ ಸೇವೈ ಕಚ್ಚಿ' ಎಂದು ಚುನಾವಣಾ ಆಯೋಗದ ಬಳಿ ನೊಂದಾವಣಿ ಮಾಡಿಸಿದ್ದು, ಪಕ್ಷದ ಚಿಹ್ನೆ ಆಟೊ ರಿಕ್ಷಾ ಆಗಿದೆಯಂತೆ.

    ಬೆಂಗಳೂರಿನಲ್ಲಿ ಸೂಪರ್ ಸ್ಟಾರ್; ಸಹೋದರನನ್ನು ಭೇಟಿಯಾಗಿ ಆಶೀರ್ವಾದ ಪಡೆದ ರಜನಿಕಾಂತ್ಬೆಂಗಳೂರಿನಲ್ಲಿ ಸೂಪರ್ ಸ್ಟಾರ್; ಸಹೋದರನನ್ನು ಭೇಟಿಯಾಗಿ ಆಶೀರ್ವಾದ ಪಡೆದ ರಜನಿಕಾಂತ್

    'ಮಕ್ಕಳ್ ಸೇವೈ ಕಚ್ಚಿ' ಎಂದರೆ, 'ಜನರಿಗೆ ಸೇವೆ ಮಾಡುವ ಪಕ್ಷ' ಎಂದರ್ಥ. ಈ ಪಕ್ಷದ ಸಿಂಬಲ್ ಆಗಿ ಆಟೊ ರಿಕ್ಷಾ ನೀಡಲಾಗಿದೆ ಎನ್ನಲಾಗುತ್ತಿದೆ. ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಡಿಸೆಂಬರ್ 31 ರಂದು ಘೋಷಿಸಲಾಗುತ್ತದೆ.

    ಮಕ್ಕಳ್ ಮಂದ್ರಮ್ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ

    ಮಕ್ಕಳ್ ಮಂದ್ರಮ್ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ

    ರಜನೀಕಾಂತ್ ಅವರ ಸಂಘ 'ಮಕ್ಕಳ್ ಮಂದ್ರಮ್' ಸದಸ್ಯರ ಜೊತೆ ಚರ್ಚಿಸಿ ಪಕ್ಷದ ಹೆಸರು ನಿರ್ಧರಿಸಲಾಗಿದೆಯಂತೆ. ಈ ಮೊದಲು ಪಕ್ಷದ ಹೆಸರನ್ನು 'ಮಕ್ಕಳ್ ಶಕ್ತಿ ಕಳಗಂ' ಎಂದು ನೊಂದಾಯಿಸಿದ್ದರಂತೆ, ಜೊತೆಗೆ ಬಾಬಾ ಸಿಂಬಲ್ ಅನ್ನು ಗುರುತಾಗಿ ಕೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎನ್ನಲಾಗುತ್ತಿದೆ.

    ರಜನೀಕಾಂತ್ ಪ್ರವೇಶದಿಂದ ರಾಜಕೀಯ ಲೆಕ್ಕಾಚಾರ ಬದಲು?

    ರಜನೀಕಾಂತ್ ಪ್ರವೇಶದಿಂದ ರಾಜಕೀಯ ಲೆಕ್ಕಾಚಾರ ಬದಲು?

    ರಜನೀಕಾಂತ್ ರಾಜಕೀಯ ಪ್ರವೇಶದ ಸುದ್ದಿ ತಮಿಳುನಾಡು ರಾಜಕೀಯದ ಮೇಲೆ ಭಾರಿ ಪ್ರಭಾವ ಬೀರಿದೆ. ರಜನೀಕಾಂತ್ ಅವರು ಬಿಜೆಪಿಯ ಮಿತ್ರ ಪಕ್ಷ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ರಜನೀಕಾಂತ್ ರಾಜಕೀಯ ಪ್ರವೇಶದಿಂದ ಡಿಎಂಕೆಗೆ ತುಸು ಹಿನ್ನೆಡೆ ಆಗಲಿದೆ ಎನ್ನಲಾಗುತ್ತಿದೆ.

    ರಜನೀಕಾಂತ್ ರಾಜಕೀಯ ಪ್ರವೇಶ ಪಕ್ಕಾ: ಡಿಸೆಂಬರ್ 31ಕ್ಕೆ ಪಕ್ಷ ಘೋಷಣೆರಜನೀಕಾಂತ್ ರಾಜಕೀಯ ಪ್ರವೇಶ ಪಕ್ಕಾ: ಡಿಸೆಂಬರ್ 31ಕ್ಕೆ ಪಕ್ಷ ಘೋಷಣೆ

    'ಮಕ್ಕಳ್ ನಿಧಿ ಮಯಂ' ಪಕ್ಷ ಸ್ಥಾಪಿಸಿರುವ ಕಮಲ್

    'ಮಕ್ಕಳ್ ನಿಧಿ ಮಯಂ' ಪಕ್ಷ ಸ್ಥಾಪಿಸಿರುವ ಕಮಲ್

    ನಟ ಕಮಲ್‌ ಹಾಸನ್ ಸಹ ವರ್ಷದ ಹಿಂದೆ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಅವರು ತಮ್ಮ ಪಕ್ಷಕ್ಕೆ 'ಮಕ್ಕಳ್ ನಿಧಿ ಮಯಂ' ಎಂದು ಹೆಸರಿಟ್ಟಿದ್ದಾರೆ. ಈ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಈ ಪಕ್ಷ.

    Recommended Video

    Mission Impossible 7 ಸಿಬ್ಬಂದಿ ವಿರುದ್ಧ ಕೂಗಾಡಿದ Tom Cruise | Filmibeat Kannada
    2021 ರ ಮೇ ನಲ್ಲಿ ಚುನಾವಣೆ ಸಾಧ್ಯತೆ

    2021 ರ ಮೇ ನಲ್ಲಿ ಚುನಾವಣೆ ಸಾಧ್ಯತೆ

    ತಮಿಳುನಾಡು ವಿಧಾನಸಭೆ ಚುನಾವಣೆಯು 2021 ರ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಎಐಎಡಿಎಂಕೆ ಪಕ್ಷವು ಪ್ರಸ್ತುತ ಅಧಿಕಾರದಲ್ಲಿದ್ದು, ಮುಂದಿನ ಚುನಾವಣೆಯಲ್ಲಿ ಅಧಿಕಾರ ಪಲ್ಲಟ ಆಗುವ ಸಂಭವ ಇದೆ. ರಜನೀಕಾಂತ್ ಹಾಗೂ ಕಮಲ್ ಹಾಸನ್ ಅವರುಗಳು ಈ ಬಾರಿಯ ಚುನಾವಣೆಯಲ್ಲಿ ನೀಡಲಿರುವ ಪ್ರದರ್ಶನದ ಮೇಲೆ ಎಲ್ಲರ ಗಮನ ಕೇಂದ್ರಿತವಾಗಿದೆ.

    English summary
    News spreading about Rajinikanth's party. Saying that Rajinikanth's party name is 'Makkal Sevai Kachi', party symbol said to be Auto Rickshaw.
    Tuesday, December 15, 2020, 10:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X