For Quick Alerts
  ALLOW NOTIFICATIONS  
  For Daily Alerts

  ಲವ್ ಬ್ರೇಕ್ ಅಪ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ನಯನತಾರಾ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ನಯನತಾರಾ. ತಮಿಳು ಮತ್ತು ತೆಲುಗು ಸಿನಿರಂಗದ ಬಹುಬೇಡಿಕೆಯ ನಟಿ ನಯನತಾರಾ ಸಿನಿಮಾರಂಗದಲ್ಲಿ 17 ವರ್ಷಗಳನ್ನು ಪೂರೈಸಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿ ನಯನತಾರಾ. ಲೇಡಿ ಸೂಪರ್ ಸ್ಟಾರ್ ಅಂತನೆ ಖ್ಯಾತಿಗಳಿಸಿರುವ ಈ ಸುಂದರಿ ಸಿನಿಮಾಗಳ ಜೊತೆಗೆ ವಿವಾದಗಳ ಮೂಲಕವೂ ಅಷ್ಟೆ ಸದ್ದು ಮಾಡಿದ್ದಾರೆ.

  ದರ್ಬಾರ್ ಟಿಕೆಟ್ ರೇಟ್ ತಮಿಳುನಾಡಿಗಿಂತ ಕರ್ನಾಟಕದಲ್ಲೇ ಜಾಸ್ತಿ | DARBAR | RAJNI KANTH | FILMIBEAT KANNADA

  ಬ್ರೇಕ್ ಅಪ್, ಲಿಂಕ್ ಅಪ್ ವಿಚಾರಗಳಲ್ಲಿ ಸದಾ ಸುದ್ದಿಯಲ್ಲಿರುವ ನಯನತಾರಾ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಬ್ರೇಕ್ ಅಪ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸದ್ಯ ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಯನಾ ಹೆಸರು ಕೇಳಿ ಬರುತ್ತಿದ್ದು, ಇಬ್ಬರು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯು ಇದೆ. ಈ ನಡುವೆ ನಯನತಾರಾ ಪ್ರೀತಿಸಿ ಮೋಸ ಮಾಡಿದ ಮಾಜಿ ಪ್ರಿಯತಮನ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

  'ನಯನತಾರಾ' ಹೆಸರಿಟ್ಟಿದ್ದು ಯಾರು....ಇಬ್ಬರಲ್ಲಿ ಯಾರಿಗೆ ಈ ಕ್ರೆಡಿಟ್?'ನಯನತಾರಾ' ಹೆಸರಿಟ್ಟಿದ್ದು ಯಾರು....ಇಬ್ಬರಲ್ಲಿ ಯಾರಿಗೆ ಈ ಕ್ರೆಡಿಟ್?

  ನಟ ಸಿಂಬು ಜೊತೆ ನಯನತಾರಾ ಅಫೇರ್ ವದಂತಿ

  ನಟ ಸಿಂಬು ಜೊತೆ ನಯನತಾರಾ ಅಫೇರ್ ವದಂತಿ

  ನಯನತಾರಾ ಸಿನಿಮಾರಂಗದಲ್ಲಿ ಖ್ಯಾತಿಗಳಿಸುತ್ತಿದ್ದಂತೆ ಅವರ ಖಾಸಗಿ ಜೀವನದ ವಿಚಾರವು ಅಷ್ಟೆ ಸುದ್ದಿಯಾಗುತ್ತಿತ್ತು. ನಟಿ ನಯನತಾರಾ ಮತ್ತು ತಮಿಳು ನಟ ಸಿಂಬು ನಡುವಿನ ಸ್ನೇಹ ಸಂಬಂಧ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇಬ್ಬರ ನಡುವಿನ ಅನ್ಯೋನ್ಯತೆ ಕಂಡು ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎಂದು ಹೇಳುತ್ತಿದ್ದರು. ಇಬ್ಬರೂ ತುಂಬ ಕ್ಲೋಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇನ್ನೇನು ಇಬ್ಬರು ಹಸೆಮಣೆ ಏರುತ್ತಾರೆ ಎನ್ನುವಷ್ಟೊತ್ತಿಗೆ ಇಬ್ಬರ ಸ್ನೇಹ ಸಂಬಂಧ ಮುರಿದುಬಿತ್ತು.

  ಪ್ರಭು ದೇವ ಜೊತೆ ಮದುವೆ ವದಂತಿ

  ಪ್ರಭು ದೇವ ಜೊತೆ ಮದುವೆ ವದಂತಿ

  ನಟ, ನಿರ್ದೇಶಕ ಮತ್ತು ಡ್ಯಾನ್ಸಿಂಗ್ ಕಿಂಗ್ ಪ್ರಭು ದೇವ ಜೊತೆ ನಯನತಾರಾ ಹೆಸರು ಜೋರಾಗಿ ಕೇಳಿಬಂದಿತ್ತು. ಇದೇ ಸಮಯದಲ್ಲಿ ಪ್ರಭು ದೇವ ಸಹ ಮೊದಲ ಹೆಂಡತಿಗೆ ಡೈವೋರ್ಸ್ ನೀಡಿದ್ದರು. ಇಬ್ಬರ ಪ್ರೇಮ್ ಕಹಾನಿ ಜಗಜ್ಜಾಹೀರಾಗುತ್ತಿದ್ದಂತೆ ಹಸೆಮಣೆ ಏರಲು ನಿರ್ಧರಿಸಿದ್ದರು.

  ಅರೆ.. ನಟಿ ನಯನತಾರಾ ಹೀಗ್ಯಾಕೆ ಹೇಳಿದ್ರು.? ಯಾರು 'ಆ' ಮನ್ಮಥ.?ಅರೆ.. ನಟಿ ನಯನತಾರಾ ಹೀಗ್ಯಾಕೆ ಹೇಳಿದ್ರು.? ಯಾರು 'ಆ' ಮನ್ಮಥ.?

  ಸಿನಿಮಾರಂಗದಿಂದ ದೂರ ಸರಿದಿದ್ದರು ನಯನತಾರಾ

  ಸಿನಿಮಾರಂಗದಿಂದ ದೂರ ಸರಿದಿದ್ದರು ನಯನತಾರಾ

  ಹಸೆಮಣೆ ಏರುವ ಸಲುವಾಗಿ ನಯನತಾರಾ ಸಿನಿಮಾರಂಗದಿಂದನೆ ದೂರ ಸರಿದಿದ್ದರು. ಅಲ್ಲದೆ ಪ್ರಭುದೇವ ಕೈ ಹಿಡಿಯುವ ಸಲುವಾಗಿ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರು ಎನ್ನುವ ಸುದ್ದಿಯೂ ಇದೆ. ಇನ್ನೇನು ಇಬ್ಬರು ಮದುವೆ ಆಗಲಿದ್ದಾರೆ ಎನ್ನುವಷ್ಟೊತ್ತಿಗೆ ದೂರ ದೂರ ಆದರು. ಸುಮಾರು ನಾಲ್ಕು ವರ್ಷದ ಪ್ರೀತಿಯನ್ನು ಕಡಿದುಕೊಂಡು ನಯನತಾರಾ ಮತ್ತೆ ಸಿನಿಮಾರಂಗಕ್ಕೆ ಮರಳಿದರು.

  ಬ್ರೇಕ್ ಅಪ್ ಬಗ್ಗೆ ನಯನತಾರಾ ಹೇಳಿದ್ದೇನು?

  ಬ್ರೇಕ್ ಅಪ್ ಬಗ್ಗೆ ನಯನತಾರಾ ಹೇಳಿದ್ದೇನು?

  ಇತ್ತೀಚಿಗೆ ಸಂದರ್ಶವೊಂದರಲ್ಲಿ ಮಾತನಾಡಿದ ನಯನತಾರಾ ಮಾಜಿ ಪ್ರೇಮಿ ಮೋಸ ಮಾಡಿದ ಬಗ್ಗೆ ಬಹಿರಂಗ ಪಡಿಸಿದ್ದಾರೆ. "ನಂಬಿಕೆ ಇಲ್ಲದ ಕಡೆ ಪ್ರೀತಿ ಇರುವುದಿಲ್ಲ. ನಂಬಿಕೆ ಇಲ್ಲದವರ ಜೊತೆ ಇರುವುದಕ್ಕಿಂತ, ಒಬ್ಬರೇ ಇರುವುದು ಉತ್ತಮ ಎಂದು ತಿಳಿದಾಗ ಸಂಬಂಧವನ್ನು ಕಡಿದುಕೊಂಡು ದೂರವಾದೆ" ಎಂದು ಹೇಳಿದ್ದಾರೆ . ಆದರೆ ಯಾರ ಬಗ್ಗೆ ಮಾತನಾಡಿದ್ದಾರೆ ಎನ್ನುವುದು ಬಹಿರಂಗ ಪಡಿಸಿಲ್ಲ. ಪ್ರಭುದೇವ ಬಗ್ಗೆ ಹೇಳಿರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

  ಕಠಿಣ ಸಮಯದಲ್ಲಿ ನನ್ನ ಜೊತೆ ಇದ್ದವರು ಅಭಿಮಾನಿಗಳು

  ಕಠಿಣ ಸಮಯದಲ್ಲಿ ನನ್ನ ಜೊತೆ ಇದ್ದವರು ಅಭಿಮಾನಿಗಳು

  "ನನ್ನ ಲವ್ ಬ್ರೇಕ್ ಹಾಗೂ ತೀರ ಕಠಿಣ ಸಮಯದಲ್ಲಿ ನನ್ನ ಜೊತೆ ಇದ್ದವರು ಅಭಿಮಾನಿಗಳು. ಅವರಿಗಾಗಿ ನಾನು ಮತ್ತೆ ಚಿತ್ರರಂಗಕ್ಕೆ ಬಂದೆ. ಮತ್ತೆ ಸಿನಿಮಾ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ. ಇತ್ತೀಚಿಗಷ್ಟೆ ನಯನಾ ದರ್ಬಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  ವಿಘ್ನೇಶ್ ಜೊತೆ ಮದುವೆ?

  ವಿಘ್ನೇಶ್ ಜೊತೆ ಮದುವೆ?

  ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಸದ್ಯ ನಯನಾ ಹೆಸರು ಕೇಳಿ ಬರುತ್ತಿದೆ. ಇಬ್ಬರ ಸ್ನೇಹ-ಸಂಬಂಧ ನೋಡಿದರೆ ಹಸೆಮಣೆ ಏರುವುದು ಪಕ್ಕಾ ಎನ್ನುತ್ತಿವೆ ಮೂಲಗಳು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಈ ವರ್ಷದ ಕೊನೆಯಲ್ಲಿ ಇಬ್ಬರು ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Actress Nayanatara opens up about her love break up.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X