For Quick Alerts
  ALLOW NOTIFICATIONS  
  For Daily Alerts

  ಪ್ರಿಯತಮನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ನಯನತಾರಾ

  |

  ನಟಿ ನಯನತಾರಾ ಹಾಗೂ ನಿರ್ದೇಶಕ ವಿಗ್ನೇಶ್ ಪ್ರೇಮದ ಮಧುರ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಮೊನ್ನೆಯಷ್ಟೆ ಜಾಲಿ ಟ್ರಿಪ್‌ನಿಂದ ಚೆನ್ನೈಗೆ ವಾಪಾಸ್ ಬಂದಿದ್ದಾರೆ ಈ ಜೋಡಿ.

  ಕಳೆದ ನಾಲ್ಕು ವರ್ಷದಿಂದ ಪ್ರೇಮದಲ್ಲಿರುವ ಈ ಜೋಡಿ ಶೀಘ್ರದಲ್ಲಿಯೇ ವಿವಾಹವಾಗುವುದಾಗಿ ಹೇಳಿದ್ದಾರೆ. ಆದರೆ ದಿನಾಂಕ ಇನ್ನೂ ಪ್ರಕಟಿಸಿಲ್ಲ.

  'ನನ್ನ ಸಂಸಾರ ಹಾಳು ಮಾಡಿದ್ದೇ ನಯನತಾರಾ': ಕಿಡಿಕಾರಿದ ಪ್ರಭುದೇವ ಮಾಜಿ ಪತ್ನಿ'ನನ್ನ ಸಂಸಾರ ಹಾಳು ಮಾಡಿದ್ದೇ ನಯನತಾರಾ': ಕಿಡಿಕಾರಿದ ಪ್ರಭುದೇವ ಮಾಜಿ ಪತ್ನಿ

  ವಿಗ್ನೇಶ್ ಶಿವನ್ ಹುಟ್ಟುಹಬ್ಬವನ್ನು ಬಹಳ ಜೋರಾಗಿ ನಯನತಾರಾ ಆಚರಿಸಿದ್ದಾರೆ. ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ಗೋವಾದಲ್ಲಿ ಬರೋಬ್ಬರಿ 25 ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದಾರಂತೆ ನಯನತಾರಾ.

  ನಯನತಾರಾ ತಾಯಿ ಹುಟ್ಟುಹಬ್ಬ ಆಚರಣೆ

  ನಯನತಾರಾ ತಾಯಿ ಹುಟ್ಟುಹಬ್ಬ ಆಚರಣೆ

  ನಯನತಾರಾ, ವಿಗ್ನೇಶ್ ಅವರುಗಳು ಮೂರು ದಿನ ಗೋವಾದಲ್ಲಿ ತಂಗಿದ್ದರು. ಈ ಸಮಯದಲ್ಲಿ ವಿಗ್ನೇಶ್ ಶಿವನ್ ಹಾಗೂ ನಯನತಾರಾ ತಾಯಿಯ ಹುಟ್ಟುಹಬ್ಬವನ್ನು ಅಲ್ಲಿ ಆಚರಿಸಲಾಯಿತು. ಈ ಆಚರಣೆಗೆ 25 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ ನಯನತಾರಾ.

   ಗೋವಾದಲ್ಲಿ ವಿಗ್ನೇಶ್ ಹುಟ್ಟುಹಬ್ಬ ಆಚರಣೆ

  ಗೋವಾದಲ್ಲಿ ವಿಗ್ನೇಶ್ ಹುಟ್ಟುಹಬ್ಬ ಆಚರಣೆ

  ಸೆಪ್ಟೆಂಬರ್ 18 ಕ್ಕೆ ವಿಗ್ನೇಶ್ ಶಿವನ್ ಹುಟ್ಟುಹಬ್ಬವಿತ್ತು. ವಿಗ್ನೇಶ್ ಹುಟ್ಟುಹಬ್ಬವನ್ನೂ ಸಹ ಗೋವಾದಲ್ಲಿಯೇ ಆಚರಿಸಲಾಯಿತು. ಗೋವಾದಲ್ಲಿ ಅತ್ಯಂತ ಐಶಾರಾಮಿ ಹೋಟೆಲ್‌ನಲ್ಲಿ ವಿಗ್ನೇಶ್ ಹುಟ್ಟುಹಬ್ಬವನ್ನು ಬಹು ವೈಭವೋಪೇತವಾಗಿ ಆಚರಿಸಲಾಯಿತಂತೆ.

  ಸಿಂಬು ಮತ್ತು ನಯನತಾರಾ ಬ್ರೇಕಪ್‌ಗೆ ಕಾರಣವಾಗಿದ್ದು ಮುತ್ತಿನ ಫೋಟೊ!ಸಿಂಬು ಮತ್ತು ನಯನತಾರಾ ಬ್ರೇಕಪ್‌ಗೆ ಕಾರಣವಾಗಿದ್ದು ಮುತ್ತಿನ ಫೋಟೊ!

  ಗೋವಾ ಟ್ರಿಪ್ ಮುಗಿಸಿದ ವಿಗ್ನೇಶ್-ನಯನತಾರಾ

  ಗೋವಾ ಟ್ರಿಪ್ ಮುಗಿಸಿದ ವಿಗ್ನೇಶ್-ನಯನತಾರಾ

  ಗೋವಾ ಟ್ರಿಪ್ ಮುಗಿಸಿದ ಬಳಿಕ ವಿಗ್ನೇಶ್-ನಯನತಾರಾ ಜೋಡಿ ಕೇರಳಕ್ಕೆ ಹೋಗಿದ್ದರು. ಕೇರಳದಲ್ಲಿ ಸುತ್ತಾಡಿದ ಈ ಜೋಡಿ, ತಮ್ಮ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಚಿತ್ರಗಳನ್ನೂ ಸಹ ಹಂಚಿಕೊಂಡಿದ್ದಾರೆ.

  ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada
  ವಿಗ್ನೇಶ್ ನಿರ್ದೇಶಿಸುತ್ತಿರುವ ಕಾಮಿಡಿ ಥ್ರಿಲ್ಲರ್

  ವಿಗ್ನೇಶ್ ನಿರ್ದೇಶಿಸುತ್ತಿರುವ ಕಾಮಿಡಿ ಥ್ರಿಲ್ಲರ್

  ವಿಗ್ನೇಶ್ ನಿರ್ದೇಶಿಸುತ್ತಿರುವ ಕಾಮಿಡಿ ಥ್ರಿಲ್ಲರ್ ಸಿನಿಮಾ ಕಾಥುಕವಾಕುಲ್ ರೆಂಡು ಕಾದಲ್ ಸಿನಿಮಾದಲ್ಲಿ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾದ ಇನ್ನೆರಡು ಪ್ರಮುಖ ಪಾತ್ರಗಳಲ್ಲಿ ವಿಜಯ್ ಸೇತುಪತಿ ಹಾಗೂ ಸಮಂತಾ ಅಕ್ಕಿನೇನಿ ಸಹ ನಟಿಸುತ್ತಿದ್ದಾರೆ.

  ನಟಿ ನಯನತಾರಾ ಮದುವೆ ಬಗ್ಗೆ ಬಂತು ಹೊಸ ಸುದ್ದಿನಟಿ ನಯನತಾರಾ ಮದುವೆ ಬಗ್ಗೆ ಬಂತು ಹೊಸ ಸುದ್ದಿ

  English summary
  Actress Nayanatara spent 25 lakh rupees for her boyfriend Vignesh's birthday in Goa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X