For Quick Alerts
  ALLOW NOTIFICATIONS  
  For Daily Alerts

  ನಯನತಾರಾ-ವಿಘ್ನೇಶ್ ಶಿವನ್ ಬ್ರೇಕಪ್ ಸುದ್ದಿ ಶುದ್ಧ ಸುಳ್ಳು ಕಣ್ರೀ.!

  |

  ನಟಿ ನಯನತಾರಾ ಮತ್ತು ಪ್ರಭುದೇವ ನಡುವಿನ ಪ್ರೀತಿ ಮದುವೆ ಹಂತದವರೆಗೂ ಬಂದಿತ್ತು. ಇನ್ನೇನು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎನ್ನುವಷ್ಟರದಲ್ಲಿ ಬ್ರೇಕಪ್ ಆಗ್ಹೋಯ್ತು. ನಯನತಾರಾ ಮನಸ್ಸು ನುಚ್ಚುನೂರಾಯಿತು. ಚಿತ್ರರಂಗವನ್ನೂ ತೊರೆಯಲು ಸಜ್ಜಾಗಿದ್ದ ನಯನತಾರಾ, ಬ್ರೇಕಪ್ ಆದ್ಮೇಲೆ ಮರಳಿ ಬಣ್ಣ ಹಚ್ಚಿದರು.

  ನಟನೆಯಲ್ಲಿ ಬಿಜಿಯಾಗಿರುವಾಗಲೇ ನಯನತಾರಾ ಮನಸ್ಸಿನಲ್ಲಿ ಮತ್ತೆ ಪ್ರೀತಿಯ ಚಿಗುರೊಡೆದಿದ್ದು ವಿಘ್ನೇಶ್ ಶಿವನ್ ನಿಂದ.

  ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ 'ನಾನುಮ್ ರೌಡಿದಾನ್' ಚಿತ್ರದಲ್ಲಿ ನಯನತಾರಾ ನಟಿಸಿದರು. ಇಲ್ಲಿಂದಲೇ ಇಬ್ಬರ ನಡುವೆ ಒಡನಾಟ ಆರಂಭವಾಗಿದ್ದು. ಮೊದ ಮೊದಲು ಉತ್ತಮ ಸ್ನೇಹಿತರಾಗಿದ್ದ ಇವರಿಬ್ಬರು, ಬಳಿಕ ಪ್ರೇಮಿಗಳಾದರು.

  ಅರೆ.. ನಟಿ ನಯನತಾರಾ ಹೀಗ್ಯಾಕೆ ಹೇಳಿದ್ರು.? ಯಾರು 'ಆ' ಮನ್ಮಥ.?ಅರೆ.. ನಟಿ ನಯನತಾರಾ ಹೀಗ್ಯಾಕೆ ಹೇಳಿದ್ರು.? ಯಾರು 'ಆ' ಮನ್ಮಥ.?

  ಪ್ರೇಮ ಪಕ್ಷಿಗಳಾದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಈಗ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಆದ್ರೆ, ಅದು ಶುದ್ಧ ಸುಳ್ಳು ಅಂತ ಪ್ರೂವ್ ಆಗಿದೆ. ಮುಂದೆ ಓದಿರಿ..

  ಎಲ್ಲೆಲ್ಲೂ ಒಟ್ಟಿಗೆ ಕಾಣಿಸುವ ಜೋಡಿ

  ಎಲ್ಲೆಲ್ಲೂ ಒಟ್ಟಿಗೆ ಕಾಣಿಸುವ ಜೋಡಿ

  ಪರಸ್ಪರ ಪ್ರೀತಿಸುತ್ತಿರುವ ನಯನತಾರಾ ಮತ್ತು ವಿಘ್ನೇಶ್ ಶಿವನ್ ಎಲ್ಲಾ ಕಡೆಯೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಫಾರಿನ್ ಟ್ರಿಪ್ ಗಳಿಗೆ ಹೋಗಿ ಬಂದಿದ್ದಾರೆ.

  ಪ್ರಿಯಕರನ ಜೊತೆ ನಯನತಾರ ಬರ್ತ್ ಡೇ ಪಾರ್ಟಿಪ್ರಿಯಕರನ ಜೊತೆ ನಯನತಾರ ಬರ್ತ್ ಡೇ ಪಾರ್ಟಿ

  ಬ್ರೇಕಪ್ ಗುಲ್ಲು.?

  ಬ್ರೇಕಪ್ ಗುಲ್ಲು.?

  ನಯನತಾರಾ ಮತ್ತು ವಿಘ್ನೇಶ್ ಶಿವನ್ ಇನ್ನೇನು ಮದುವೆ ಆಗಲಿದ್ದಾರೆ ಎನ್ನುವಾಗಲೇ, ದಿಢೀರ್ ಅಂತ ಬ್ರೇಕಪ್ ಸುದ್ದಿ ಇತ್ತೀಚೆಗಷ್ಟೇ ಕಾಡ್ಗಿಚ್ಚಿನಂತೆ ಹಬ್ಬಿತ್ತು. ನಯನತಾರಾ ಮತ್ತು ವಿಘ್ನೇಶ್ ಶಿವನ್ ಜಗಳ ಮಾಡಿಕೊಂಡಿದ್ದಾರೆ, ಇಬ್ಬರ ನಡುವಿನ ಪ್ರೀತಿ ಮುರಿದು ಬಿದ್ದಿದೆ ಅಂತ ಯಾರು ಹಬ್ಬಿಸಿದ್ರೋ, ಗೊತ್ತಿಲ್ಲ. ಒಟ್ನಲ್ಲಿ ಕಾಲಿವುಡ್ ತುಂಬಾ ನಯನತಾರಾ-ವಿಘ್ನೇಶ್ ಶಿವನ್ ಬ್ರೇಕಪ್ ನದ್ದೇ ಗುಲ್ಲು.

  ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ನಯನತಾರಾ: ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ನಯನತಾರಾ: ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

  ಗಾಸಿಪ್ ಗೆ ಬ್ರೇಕ್ ಹಾಕಿದ ಜೋಡಿ

  ಗಾಸಿಪ್ ಗೆ ಬ್ರೇಕ್ ಹಾಕಿದ ಜೋಡಿ

  ಈ ಗಾಳಿಸುದ್ದಿ ವಿಘ್ನೇಶ್ ಶಿವನ್ ಮತ್ತು ನಯನತಾರಾ ಕಿವಿಗೂ ಬಿದ್ದ ಮೇಲೆ ಇನ್ಸ್ಟಾಗ್ರಾಮ್ ನಲ್ಲಿ ಇಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಮೂಲಕ ಎಲ್ಲಾ ಗಾಸಿಪ್ ಗಳಿಗೆ ಫೋಟೋ ಮೂಲಕವೇ ಫುಲ್ ಸ್ಟಾಪ್ ಇಟ್ಟಿದ್ದಾರೆ.

  ಮಾಂಸಾಹಾರ ತ್ಯಜಿಸಿ 40 ದಿನ ಉಪವಾಸ ಕೈಗೊಂಡ ನಯನತಾರಾ: ಯಾಕೆ.?ಮಾಂಸಾಹಾರ ತ್ಯಜಿಸಿ 40 ದಿನ ಉಪವಾಸ ಕೈಗೊಂಡ ನಯನತಾರಾ: ಯಾಕೆ.?

  ವೃತ್ತಿ ಜೀವನದಲ್ಲಿ ಬಿಜಿ

  ವೃತ್ತಿ ಜೀವನದಲ್ಲಿ ಬಿಜಿ

  ಕೆಲಸದ ವಿಷಯಕ್ಕೆ ಬಂದರೆ, ಸಿನಿಮಾ ಡೈರೆಕ್ಷನ್ ನಲ್ಲಿ ವಿಘ್ನೇಶ್ ಶಿವನ್ ಬಿಜಿಯಿದ್ದರೆ, ನಯನತಾರಾ ಅಭಿನಯದ 'ದರ್ಬಾರ್' ಚಿತ್ರ ಇಂದು ತೆರೆಗೆ ಬಂದಿದೆ. 'ಮೂಕುತಿ ಅಮ್ಮನ್' ಸೇರಿದಂತೆ ನಯನತಾರಾ ಕೈಯಲ್ಲಿ ಇನ್ನೂ ಎರಡು ಚಿತ್ರಗಳಿವೆ.

  English summary
  Nayanathara and Vignesh Shivan break up news is false.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X