For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್: ಬಸ್ ಏರಿ ಹೊರಟ ಸಮಂತಾ ಮತ್ತು ನಯನತಾರಾ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿಯರಾದ ಸಮಂತಾ ಅಕ್ಕಿನೇನಿ ಮತ್ತು ನಯನತಾರಾ ಇಬ್ಬರು ಸಖತ್ ಸುದ್ದಿಯಲ್ಲಿದ್ದಾರೆ. ನಯನತಾರಾ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ವಿಚಾರವಾಗಿ ಸದ್ದು ಮಾಡುತ್ತಿದ್ದರು. ಆದರೀಗ ಸಮಂತಾ ಜೊತೆ ಬಸ್‌ನಲ್ಲಿ ಪ್ರಯಾಣ ಮಾಡುವ ಮೂಲಕ ನಯನತಾರಾ ಸುದ್ದಿಯಾಗಿದ್ದಾರೆ.

  ಬಸ್ ಮೆಟ್ಟಿಲುಗಳ ಮೇಲೆ ನಿಂತು ಸಮಂತಾ ಮತ್ತು ನಾಯನತಾರಾ ಇಬ್ಬರೂ ಪ್ರಯಾಣ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರೂ ಸ್ಟಾರ್ ನಟಿಯರು ಬಿಳಿ ಬಣ್ಣದ ಸೀರೆಯಲ್ಲಿ ಬಸ್ ಏರಿ ಹೊರಟಿರುವುದನ್ನು ನೋಡಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ಇಬ್ಬರೂ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಇಬ್ಬರೂ ಬಸ್‌ನಲ್ಲಿ ಓಡಾಡುವ ಮೂಲಕ ಜಾಲಿ ಮಾಡುತ್ತಿದ್ದಾರಾ ಅಂತ ಯೋಚಿಸಬೇಡಿ. ಇಬ್ಬರೂ ಹೀಗೆ ಬಸ್ ಏರಿ ಹೊರಟಿರುವುದು ಸಿನಿಮಾದಲ್ಲಿ. ಇದು ತಮಿಳು ಸಿನಿಮಾ ಚಿತ್ರೀಕರಣ ದೃಶ್ಯವಾಗಿದೆ.

  ನಯನತಾರಾ ಬಾಯ್ ಫ್ರೆಂಡ್ ವಿಘ್ನೆಶ್ ಶಿವನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ನಯನತಾರಾ ಮತ್ತು ಸಮಂತಾ ಇಬ್ಬರೂ ನಟಿಸುತ್ತಿದ್ದಾರೆ. ಇಬ್ಬರನ್ನೂ ಒಂದೇ ಸಿನಿಮಾದಲ್ಲಿ ಕರೆತಂದಿದ್ದಾರೆ ನಿರ್ದೇಶಕ ವಿಘ್ನೆಶ್ ಶಿವನ್. ಈ ಸಿನಿಮಾ ಚಿತ್ರೀಕರಣ ಸದ್ಯ ಗೋವಾದಲ್ಲಿ ನಡೆಯುತ್ತಿದೆ. ಗೋವಾದಲ್ಲಿ ಸಮಂತಾ ಮತ್ತು ನಯನತಾರಾ ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವ ದೃಶ್ಯದ ವಿಡಿಯೋ ಲೀಕ್ ಆಗಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


  ಅಂದಹಾಗೆ ಚಿತ್ರದಲ್ಲಿ ವಿಜಯ್ ಸೇತುಪತಿ ಕೂಡ ಇದ್ದಾರೆ. ಫುಟ್ ಬೋರ್ಡ್ ನಲ್ಲಿ ನಿಂತು ಮೂವರು ಪ್ರಯಾಣ ಮಾಡುತ್ತಿದ್ದಾರೆ. ಈ ದೃಶ್ಯ ನೋಡಿದವರು ಕಮಲ್ ಹಾಸನ್ ನಟನೆಯ 1988ರ ಸತ್ಯ ಚಿತ್ರದ ಜನಪ್ರಿಯ ಹಾಡಾದ ವಲಾಯೊಸೈ ಹಾಡನ್ನು ಮರುಸೃಷ್ಟಿ ಮಾಡಿದ ಹಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾಗೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  ಇತ್ತೀಚಿಗಷ್ಟೆ ನಯನತಾರಾ, ವಿಘ್ನೇಶ್ ಶಿವನ್ ಮತ್ತು ಸಿನಿಮಾತಂಡ ಸಮಂತಾಗೆ ಪ್ರಶಸ್ತಿ ಬಂದ ಸಂಭ್ರಮವನ್ನು ಆಚರಿಸಿದ್ದರು. ದಿ ಫ್ಯಾಮಿಲಿ ಮ್ಯಾನ್-2 ವೆಬ್ ಸೀರಿಸ್‌ನಲ್ಲಿ ಉತ್ತಮ ನಟನೆಗೆ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ ಬೋರ್ನ್ ಚಿತ್ರೋತ್ಸವದಲ್ಲಿ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದರು. ಈ ಸಂಭ್ರಮವನ್ನು ಸೆಟ್‌ನಲ್ಲಿ ಆಚರಣೆ ಮಾಡುವ ಮೂಲಕ ಸಮಂತಾಗೆ ಸರ್ಪ್ರೈಸ್ ನೀಡಲಾಗಿತ್ತು. ಈ ಫೋಟೋಗಳನ್ನು ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು.

  ಅಂದಹಾಗೆ ಸಮಂತಾ ಇತ್ತೀಚಿಗಷ್ಟೆ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ನಯನತಾರಾ ಬಾಲಿವುಡ್ ಎಂಟ್ರಿಯ ಬಗ್ಗೆ ಸುದ್ದಿ ಹರಿದಾಡುತ್ತಿದ್ದು, ಶಾರುಖ್ ಖಾನ್ ಜೊತೆ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  English summary
  Actress Nayanthara and Samantha Akkineni traveling on footboard of bus, video goes viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X