Don't Miss!
- News
Bengaluru Airport: ಫೆ.15 ರಿಂದ ಟರ್ಮಿನಲ್2 ನಲ್ಲಿ ಏರ್ ಏಷ್ಯಾ ಸಂಸ್ಥೆಯಿಂದ ವಿಮಾನ ಕಾರ್ಯಾಚರಣೆ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮದುವೆಯಾದ ಮರು ದಿನವೇ ವಿವಾದಕ್ಕೆ ಸಿಲುಕಿದ ನಯನತಾರಾ ಮಾಡಿದ್ದಾರು ಏನು?
ಜೂನ್ 09ರಂದು ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಮಿಳುನಾಡಿನ ಮಹಾಬಲಿಪುರಂನಲ್ಲಿ ಐಶಾರಾಮಿ ಹೊಟೇಲ್‌ನಲ್ಲಿ ಈ ಜೋಡಿ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದೆ. ಇದೇ ಸಂಭ್ರಮದಲ್ಲಿ ನವ ಜೋಡಿ ತಿರುಪತಿ ದೇವಸ್ಥಾನಕ್ಕೂ ಭೇಟಿ ನೀಡಿತ್ತು.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಾರನೇ ದಿನವೇ ( ಜೂನ್ 10) ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದರು. ಕೌಟುಂಬಿಕ ಜೀವನದ ಆರಂಭದಲ್ಲಿ ದೇವರ ಆಶೀರ್ವಾದ ಪಡೆಯಲು ನಯನತಾರಾ ಹಾಗೂ ವಿಘ್ನೇಶ್ ತಿರುಪತಿಗೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದರು. ಆದರೆ ಇದೇ ವೇಳೆ ನಯನತಾರಾ ವಿವಾದಕ್ಕೆ ಸಿಲುಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ನಟಿಯ ವಿರುದ್ಧ ಆಕ್ರೋಶವೆದ್ದಿದೆ.
ಅಧಿಕೃತವಾಗಿ
ಮದುವೆಯಾದ
ನಯನತಾರಾ:
ವಿವಾಹಕ್ಕೆ
ಬಂದ
ವಿಜಯ್
ವಿಡಿಯೋ
ವೈರಲ್!

ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಓಡಾಟ
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆಯ ಸಂಭ್ರಮದಲ್ಲಿದೆ. ವಿವಾಹದ ಮರು ದಿನವೇ ತಿರುಪತಿ-ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನ ಪಡೆಯಲು ಬಂದಿದ್ದ ನಯನತಾರಾ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ತಿಮ್ಮಪ್ಪನ ದರ್ಶನ ಪಡೆಯುವ ಆತುರದಲ್ಲಿ ನಯನತಾರಾ ಚಪ್ಪಲಿ ಧರಿಸಿ ಓಡಾಡಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಲೇಡಿ
ಸೂಪರ್‌ಸ್ಟಾರ್
ನಯನತಾರಾ
ವೃತ್ತಿ
ಬದುಕಿನ
ಕೆಲ
ಕರಾಳ
ಸತ್ಯಗಳು

ನಯನತಾರಾ ಮೇಲೆ ಆಕ್ರೋಶವೇಕೆ?
ತಿರುಪತಿ-ತಿಮ್ಮಪ್ಪನ ದೇವಸ್ಥಾನದಲ್ಲಿ ಕೈ ಕೈ ಹಿಡಿದು ನವ ಜೋಡಿ ಓಡಾಡಿತ್ತು. ಆ ವೇಳೆ ವಿಘ್ನೇಶ್ ಶಿವನ್ ಬರಿಗಾಲಿನಲ್ಲಿ ಓಡಾಡಿದ್ದರು. ಅತ್ತ ನಯನತಾರಾ ಮಾತ್ರ ಚಪ್ಪಲಿ ಧರಿಸಿ ಶ್ರೀವಾರಿಯ ರಸ್ತೆಗಳಲ್ಲಿ ನಡೆದಾಡಿದ್ದಾರೆ. ಇದೇ ವೇಳೆ ಅವರನ್ನು ಹಿಂಬಾಲಿಸುತ್ತಿದ್ದವರೂ ಕೂಡ ಚಪ್ಪಲಿ ಹಾಗೂ ಶೂ ಧರಿಸಿಯೇ ಓಡಾಡಿದ್ದಾರೆ. ಇದು ಅಲ್ಲಿನ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದು, ವಿವಾದಕ್ಕೆ ಕಾರಣವಾಗಿತ್ತು.

ದೇವಸ್ಥಾನದ ಅಧಿಕಾರಿಗಳು ಏನಂತಾರೆ?
ನಯನತಾರಾ ಚಪ್ಪಲಲಿ ಧರಿಸಿ ದೇವಸ್ಥಾನದ ಸುತ್ತಮುತ್ತ ಓಡಾಡುತ್ತಿದ್ದ ವಿಡಿಯೋ ವೈರಲ್ ಆಗಿ, ವಿವಾದಕ್ಕೀಡಾಗುತ್ತಿದೆ. ಆ ಬಳಿಕ ತಿರುಪತಿ ದೇವಸ್ಥಾನದ ಅಧಿಕಾರಿಗಳು ಕ್ಲಾರಿಟಿ ನೀಡಿದ್ದು, ನಯನತಾರಾ ಚಪ್ಪಲಿ ತೊಟ್ಟು ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳಿದ್ದಾರೆ ಎಂದು ಇಂಡಿಯಾ ಗ್ಲಿಟ್ಜ್ ವರದಿ ಮಾಡಿದೆ.
ಹೊಸ
ಬಿಸಿನೆಸ್ಗೆ
ಕೈಯಿಟ್ಟ
ನಯನತಾರಾ:
100
ಕೋಟಿ
ಹೂಡಿಕೆ!

ದರ್ಶನ ಪಡೆದ ಬಳಿಕ ತೆರಳಿದ ಜೋಡಿ
ಶುಕ್ರವಾರ (ಜೂನ್ 10) ಬೆಳಗ್ಗೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ವೆಂಕಟೇಶ್ವರನ ದರ್ಶನ ಪಡೆದಿದೆ. ಈ ವೇಳೆ ವಿಘ್ನೇಶ್ ರೇಷ್ಮೆ ಪಂಚೆ ಶರ್ಟ್ ಧರಿಸಿದ್ದರೆ, ನಯನತಾರಾ ಹಳದಿ ಬಣ್ಣದ ಸೀರೆಯುಟ್ಟಿದ್ದರು. ದೇವರ ದರ್ಶನ ಪಡೆಯುತ್ತಿದ್ದಂತೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ತಿರುಪತಿಯಂದ ನಿರ್ಗಮಿಸಿದ್ದಾರೆ.