For Quick Alerts
  ALLOW NOTIFICATIONS  
  For Daily Alerts

  ವಿಘ್ನೇಶ್ ಜೊತೆಗಿನ ನಿಶ್ಚಿತಾರ್ಥದ ಗುಟ್ಟು ರಟ್ಟು ಮಾಡಿದ ನಯನತಾರ

  |

  ದಕ್ಷಿಣ ಭಾರತದ 'ಲೇಡಿ ಸೂಪರ್ ಸ್ಟಾರ್' ನಯನತಾರ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಪ್ರೀತಿಯಲ್ಲಿರುವುದು ಈಗಾಗಲೇ ತಿಳಿದಿರುವ ವಿಚಾರ. ಇವರಿಬ್ಬರು ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಪರೋಕ್ಷವಾಗಿ ಎಲ್ಲಾ ಕಡೆಯೂ 'ನಾವು ಲವರ್ಸ್' ಎಂದು ಸುಳಿವು ಕೊಟ್ಟು ಹೋಗಿದ್ದಾರೆ. ಬಹಳ ವರ್ಷಗಳಿಂದ ಇಬ್ಬರು ಲೀವ್-ಇನ್-ರಿಲೇಶನ್‌ಷಿಪ್‌ನಲ್ಲಿದ್ದಾರೆ ಎಂಬ ಸುದ್ದಿಯೂ ಚರ್ಚೆಯಲ್ಲಿದೆ.

  ನಯನತಾರ ಮತ್ತು ವಿಘ್ನೇಶ್ ಶಿವನ್ ಯಾವಾಗ ಮದ್ವೆ ಆಗ್ತಾರೆ ಎನ್ನುವುದು ಬಹುದೊಡ್ಡ ಪ್ರಶ್ನೆಯಾಗಿ ಉಳಿದುಕೊಂಡಿದೆ. ಈ ಹಿಂದೆ ಕೆಲವು ವೆಬ್‌ಸೈಟ್‌ಗಳು ವರದಿ ಮಾಡಿರುವಂತೆ, ಈ ಕೊರೊನಾ ಬಿಕ್ಕಟ್ಟು ಸಂಪೂರ್ಣವಾಗಿ ಮುಗಿದ ಮೇಲೆ ವಿವಾಹ ನಡೆಯಲಿದೆ ಎಂದು ಹೇಳಲಾಗಿದೆ.

  ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಯನತಾರಾ? ಶುಭಾಶಯ ತಿಳಿಸುತ್ತಿದ್ದಾರೆ ಅಭಿಮಾನಿಗಳುಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಯನತಾರಾ? ಶುಭಾಶಯ ತಿಳಿಸುತ್ತಿದ್ದಾರೆ ಅಭಿಮಾನಿಗಳು

  ಹಿಂದೆಯೊಮ್ಮೆ ವಿಘ್ನೇಶ್ ಬಳಿ 'ನಯನತಾರ ಜೊತೆ ನಿಮ್ಮ ಮದುವೆ ಯಾವಾಗ?' ಎಂದು ಅಭಿಮಾನಿಯೊಬ್ಬ ಪ್ರಶ್ನಿಸಿದ್ದ ಸಂದರ್ಭದಲ್ಲಿ, ''ದುಡ್ಡು ಸಂಗ್ರಹಿಸುತ್ತಿದ್ದೇನೆ, ಮದುವೆ ಬಹಳ ದೊಡ್ಡ ಮಟ್ಟದಲ್ಲಿ ಇರಲಿದೆ. ಕೊರೊನಾ ಹೋಗಲಿ, ಆಮೇಲೆ ಹೇಳ್ತಿವಿ'' ಎಂದು ಪ್ರತಿಕ್ರಿಯಿಸಿದ್ದರು. ಇನ್ನು ವಿಘ್ನೇಶ್ ಜೊತೆ ನಯನಾತಾರ ಅದಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಕುತೂಹಲವೂ ಇದೆ. ಏಕಂದ್ರೆ, ನಯನತಾರ ಕೈ ಬೆರಳಿನಲ್ಲಿರುವ ಉಂಗುರ ಈ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಆದರೆ, ಇದುವರೆಗೂ ಆ ಉಂಗುರ ಯಾವುದು? ನಿಶ್ಚಿತಾರ್ಥನಾ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಇದೀಗ, ಮೊದಲ ಬಾರಿಗೆ ನಯನತಾರ ಉಂಗುರ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

  ನಿಶ್ಚಿತಾರ್ಥ ಖಚಿತಪಡಿಸಿದ ನಯನತಾರ?

  ನಿಶ್ಚಿತಾರ್ಥ ಖಚಿತಪಡಿಸಿದ ನಯನತಾರ?

  ತಮ್ಮ ಮುಂದಿನ ಸಿನಿಮಾ 'ನೇಟ್ರಿಕಣ್' ಚಿತ್ರದ ಪ್ರಚಾರಕ್ಕಾಗಿ ವಿಜಯ್ ಟಿವಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಯನತಾರ ಉಂಗುರದ ರಹಸ್ಯ ಬಿಚ್ಚಿಟ್ಟಿದ್ದಾರೆ. ಸದ್ಯ ವಿಜಯ್ ಟಿವಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ, 'ನಿಮ್ಮ ಬೆರಳಿನಲ್ಲಿರುವ ಉಂಗುರದ ಬಗ್ಗೆ ಸಾಕಷ್ಟು ಚರ್ಚೆಗಳು ಆದ್ವು, ಅದು ಯಾವುದು ಎಂದು ತಿಳಿದಿಲ್ಲ' ಎಂದು ನಿರೂಪಕಿ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿ ನಯನತಾರ, ''ಇದು ನಿಶ್ಚಿತಾರ್ಥದ ಉಂಗುರ, ವಿಘ್ನೇಶ್ ಶಿವನ್ ಉಡುಗೊರೆಯಾಗಿ ಕೊಟ್ಟಿದ್ದು'' ಎಂದಿದ್ದಾರೆ. ಸದ್ಯ ಪ್ರೋಮೋದಲ್ಲಿ ಇಷ್ಟು ಮಾತ್ರ ತೋರಿಸಲಾಗಿದೆ. ಪೂರ್ತಿ ಸಂಚಿಕೆಯಲ್ಲಿ ಉಂಗುರದ ಪೂರ್ಣ ರಹಸ್ಯ ತಿಳಿಯಲಿದೆ.

  ವಿಘ್ನೇಶ್ ಶಿವನ್ ಹಂಚಿಕೊಂಡಿದ್ದ ಫೋಟೋ

  ವಿಘ್ನೇಶ್ ಶಿವನ್ ಹಂಚಿಕೊಂಡಿದ್ದ ಫೋಟೋ

  ಮಾರ್ಚ್ ತಿಂಗಳಲ್ಲಿ ವಿಘ್ನೇಶ್ ಶಿವನ್ ಹಂಚಿಕೊಂಡಿದ್ದ ಫೋಟೋದಲ್ಲಿ ನಯನತಾರ ಉಂಗುರ ಗಮನ ಸೆಳೆದಿತ್ತು. ಈ ಫೋಟೋ ನೋಡಿದ ನೆಟ್ಟಿಗರು ಇಬ್ಬರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಿದರು. ಈ ಕುತೂಹಲಕ್ಕೆ ವಿಜಯ್ ಟಿವಿ ಕಾರ್ಯಕ್ರಮ ಉತ್ತರ ನೀಡಲಿದ್ದು, ಆಗಸ್ಟ್ 15 ರಂದು ಬೆಳಗ್ಗೆ 10.30ಕ್ಕೆ ಈ ಶೋ ಪ್ರಸಾರವಾಗಲಿದೆ.

  ನಯನ ಜೊತೆ ಕಿಸ್ ಮಾಡುವ ಫೋಟೋ ತೋರಿಸಿ: ವಿಘ್ನೇಶ್ ಕೊಟ್ಟ ಉತ್ತರವೇನು?ನಯನ ಜೊತೆ ಕಿಸ್ ಮಾಡುವ ಫೋಟೋ ತೋರಿಸಿ: ವಿಘ್ನೇಶ್ ಕೊಟ್ಟ ಉತ್ತರವೇನು?

  2015ರಿಂದ ಲವ್ವಲ್ಲಿರುವ ಜೋಡಿ

  2015ರಿಂದ ಲವ್ವಲ್ಲಿರುವ ಜೋಡಿ

  2012ರಲ್ಲಿ 'ಪೋಡಾ ಪೋಡಿ' ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ವಿಘ್ನೇಶ್ ಶಿವನ್, 2015ರಲ್ಲಿ 'ನಾನು ರೌಡಿಧಾನ್' ಚಿತ್ರದ ಮೂಲಕ ಹೆಚ್ಚು ಗಮನ ಸೆಳೆದರು. ಈ ಸಿನಿಮಾ ಮಾಡುವ ಸಂದರ್ಭದಲ್ಲಿಯೇ ನಟಿ ನಯನತಾರ ಜೊತೆ ಪ್ರೀತಿಯಲ್ಲಿ ಬಿದ್ದರು. ಆಗಿಂದಲೇ ನಯನತಾರ ಮತ್ತು ವಿಘ್ನೇಶ್ ಪರಿಚಯ ಪ್ರೀತಿಗೆ ತಿರುಗಿತು. ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಒಟ್ಟಿಗೆ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

  ಹಲವು ಚಿತ್ರಗಳಲ್ಲಿ ನಯನತಾರ ಬ್ಯುಸಿ

  ಹಲವು ಚಿತ್ರಗಳಲ್ಲಿ ನಯನತಾರ ಬ್ಯುಸಿ

  ವಿಘ್ನೇಶ್ ಶಿವನ್ ನಿರ್ಮಾಣದ 'ನೇಟ್ರಿಕಣ್' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಚಿತ್ರದಲ್ಲಿ ನಯನತಾರಾ ನಟಿಸಿದ್ದಾರೆ. ವಿಜಯ್ ಸೇತುಪತಿ ಹಾಗೂ ಸಮಂತಾ ಜೊತೆ ಮಾಡುತ್ತಿರುವ ಚಿತ್ರ ಶೂಟಿಂಗ್ ಹಂತದಲ್ಲಿದೆ. ಇದರ ಜೊತೆಗೆ ತೆಲುಗಿನಲ್ಲಿ 'ಆರಡುಗಲಾ ಬುಲೆಟ್' ಎನ್ನುವ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಶಾರೂಖ್ ಖಾನ್ ಹಾಗೂ ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ ಹೊಸ ಚಿತ್ರದಲ್ಲಿಯೂ ನಯನತಾರ ನಾಯಕಿ ಎನ್ನುವ ವಿಚಾರ ಚರ್ಚೆಯಾಗುತ್ತಿದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.

  English summary
  South india Lady superstar Nayanthara Confirms in Tv show About Her Engagement With Vignesh shivan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X