ನಟಿ ನಯನತಾರಾ ಮದುವೆ ಬಗ್ಗೆ ಬಂತು ಹೊಸ ಸುದ್ದಿ
ನಟಿ ನಯನತಾರಾ ಸಿಂಬು ಮತ್ತು ಪ್ರಭುದೇವ್ ಜತೆಗಿನ ಸಂಬಂಧ ಮುರಿದುಕೊಂಡ ಬಳಿಕ ನಿರ್ದೇಶಕ ವಿಘ್ನೇಶ್ ಶಿವನ್ ಜತೆಗೆ ಡೇಟಿಂಗ್ ನಡೆಸುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಇಬ್ಬರೂ ಮದುವೆಯಾಗಿ ಸಂಸಾರ ನಡೆಸುತ್ತಾರೆ ಎಂಬ ಸುದ್ದಿ ಹಲವು ಸಮಯದಿಂದ ಹರಿದಾಡುತ್ತಿದೆ.
Recommended Video
ಇತ್ತೀಚೆಗೆ ನಿರ್ದೇಶಕ ವಿಘ್ನೇಶ್ ಶಿವನ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಫೋಟೊವೊಂದು ಸಕತ್ ವೈರಲ್ ಆಗಿತ್ತು. ಮಗುವೊಂದನ್ನು ಎತ್ತಿಕೊಂಡಿರುವ ನಯನತಾರಾ ಫೋಟೊ ಹಾಕಿದ್ದ ಅವರು, 'ನನ್ನ ಭವಿಷ್ಯದ ಮಕ್ಕಳ ತಾಯಿ' ಎಂದು ಅಮ್ಮಂದಿರ ದಿನದ ಸಂದರ್ಭದಲ್ಲಿ ಬರೆದುಕೊಂಡಿದ್ದರು. ಇದರಿಂದ ಇಬ್ಬರ ಮದುವೆ ಸನಿಹದಲ್ಲಿದೆ ಎಂಬ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿತ್ತು. ಇದೀಗ ನಯನತಾರಾ ಅಭಿಮಾನಿಗಳ ನಿರೀಕ್ಷೆ ನಿಜವಾಗುವ ಸಮಯ ಬಂದಿದೆ. ಮುಂದೆ ಓದಿ...

ದೇವಸ್ಥಾನದಲ್ಲಿ ಮದುವೆ
ತಮಿಳು ನಾಡಿನ ದೇವಾಲಯದಲ್ಲಿ ನಡೆಯಲಿರುವ ತೀರಾ ಖಾಸಗಿ ಹಾಗೂ ಸರಳ ಸಮಾರಂಭದಲ್ಲಿ ತಮ್ಮ ದೀರ್ಘ ಕಾಲದ ಗೆಳೆಯ ವಿಘ್ನೇಶ್ ಶಿವನ್ ಜತೆಗೆ ನಯನತಾರಾ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂದು ವರದಿಯಾಗಿದೆ.

ಅಭಿಮಾನಿಗಳಿಂದ ಶುಭಾಶಯ
ಈ ಬಗ್ಗೆ ನಯನತಾರಾ ಅಥವಾ ವಿಘ್ನೇಶ್ ಶಿವನ್ ಅವರ ಕಡೆಯಿಂದ ಅಧಿಕೃತ ಹೇಳಿಕೆ ಬಾರದೆ ಇದ್ದರೂ, ಅವರಿಗೆ ಆಪ್ತರಾಗಿರುವ ಕೆಲವು ಮೂಲಗಳಿಂದ ಮಾಹಿತಿ ಹೊರಬಂದಿದೆ ಎನ್ನಲಾಗಿದೆ. ಈ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಿದಾಡುತ್ತಿದ್ದು, ಅಭಿಮಾನಿಗಳು ಈಗಾಗಲೇ ಇಬ್ಬರಿಗೂ ಶುಭಾಶಯಗಳನ್ನು ರವಾನಿಸುತ್ತಿದ್ದಾರೆ.

ಸಿನಿಮಾ ಸೆಟ್‌ನಲ್ಲಿ ಮೂಡಿದ ಪ್ರೀತಿ
'ನಾನುಮ್ ರೌಡಿ ಧಾನ್' ಚಿತ್ರದ ಮೂಲಕ ನಯನತಾರಾ ಕಮ್ ಬ್ಯಾಕ್ ಮಾಡಿದ್ದರು. ಈ ಚಿತ್ರ ಅವರ ವೈಯಕ್ತಿಕ ಜೀವನದ ದಿಕ್ಕನ್ನೂ ಬದಲಿಸಿತು. ಏಕೆಂದರೆ ಚಿತ್ರದ ನಿರ್ದೇಶಕ ವಿಘ್ನೇಶ್ ಮತ್ತು ನಯನತಾರಾ ಪ್ರೀತಿಯಲ್ಲಿ ಬೀಳಲು ಕಾರಣವಾಗಿದ್ದು ಇದೇ ಚಿತ್ರ.


Click it and Unblock the Notifications











