For Quick Alerts
  ALLOW NOTIFICATIONS  
  For Daily Alerts

  ವಯಸ್ಸಿನ ಅಂತರದಿಂದ ಟ್ರೋಲಿಗೆ ಗುರಿಯಾದ ಆರ್ಯ-ಸಯೇಶಾ ದಂಪತಿ

  |

  ತಮಿಳು ಸಿನಿಮಾರಂಗದ ಕ್ಯೂಟ್ ಕಪಲ್ ಗಳಲ್ಲಿ ಆರ್ಯ ಮತ್ತು ಸಯೇಶಾ ಜೋಡಿ ಕೂಡ ಒಂದು. ಈ ಮುದ್ದಾದ ಜೋಡಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಜೋಡಿಯನ್ನು ಅನೇಕರು ಹಾಡಿಹೊಗಳಿದ್ರೆ ಇನ್ನು ಕೆಲವರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

  ಇತ್ತೀಚಿಗೆ ಸಯೇಶಾ ಪತಿಯ ಜೊತೆ ಡ್ಯಾನ್ಸ್ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅನೇಕರು ಹಾರ್ಟ್ ಇಮೋಜಿ ಕಳುಹಿಸಿ, ಅದ್ಭುತ ಜೋಡಿ ಎಂದು ಇನ್ನು ಕೆಲವರು ಇಬ್ಬರ ವಯಸ್ಸಿನ ಅಂತರವನ್ನು ಟ್ರೋಲ್ ಮಾಡುತ್ತಿದ್ದಾರೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಆರ್ಯ; ಪತಿಗೆ ಪ್ರೀತಿಯ ಶುಭಾಶಯ ತಿಳಿಸಿದ 'ಯುವರತ್ನ' ಸುಂದರಿ

  ಅಂದಹಾಗೆ ಆರ್ಯ ಮತ್ತು ಸಯೇಶಾ 2019ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರದ್ದು ಲವ್ ಕಮ್ ಅರೆಂಜ್ ಮ್ಯಾರೇಜ್. ಉತ್ತರ ಭಾರತದ ನಟಿ ಸಯೇಶಾ ಮತ್ತು ದಕ್ಷಿಣ ಭಾರತದ ನಟ ಆರ್ಯ ಅವರದ್ದು ಅನೇಕ ವರ್ಷಗಳ ಪ್ರೀತಿ, ಬಳಿಕ ಮನೆಯವರ ಒಪ್ಪಿಗೆ ಪಡೆದು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದಾರೆ.

  ಆರ್ಯ ಮತ್ತು ಸಯೇಶಾ ನಡುವೆ ದೊಡ್ಡ ವಯಸ್ಸಿನ ಅಂತರವಿದೆ. ಸಯೇಶಾಗಿಂತ ಆರ್ಯ ಬರೋಬ್ಬರಿ 17 ವರ್ಷ ದೊಡ್ಡವರು. ಇಬ್ಬರ ನಡುವೆ 17 ವರ್ಷ ವಯಸ್ಸಿನ ಅಂತರವಿರುವುದನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಡ್ಯಾನ್ಸ ಫೋಟೋಗೆ ಅನೇಕರು 'ತಂದೆ ಮತ್ತು ಮಗಳು' ಎಂದು ಹೇಳುತ್ತಿದ್ದಾರೆ.

  'ನನ್ನ ಪ್ರೀತಿಯ ಜೊತೆ ಡ್ಯಾನ್ಸ್ ಮಾಡುವುದು ಅಲ್ಲ, ತಂದೆಯ ಜೊತೆ' ಎಂದು ವ್ಯಂಗ್ಯವಾಡುತ್ತಿದ್ದಾರೆ.

  ಆದರೆ ಇದ್ಯಾವುದಕ್ಕು ಸಯೇಶಾ ಜೋಡಿ ತಲೆಕೆಡಿಸಿಕೊಂಡಿಲ್ಲ. ವಯಸ್ಸಿನ ಅಂತರದ ಬಗ್ಗೆ ಸಯೇಶಾ ಸಂದರ್ಶನವೊಂದರಲ್ಲಿ ಮಾತನಾಡಿ, ಇಬ್ಬರ ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿ ಬಂದಿಲ್ಲ. ಸಯೇಶಾಳ ಪ್ರಬುದ್ಧತೆ ನೋಡಿ ಅವಳನ್ನು ಮದುವೆ ಆಗಿರುವುದಾಗಿ ಹೇಳಿದ್ದಾರೆ.

  ನಟಿ ಸಯೇಶಾ ಕನ್ನಡದ ಬಹುನಿರೀಕ್ಷೆಯ ಯುವರತ್ನ ಸಿನಿಮಾದಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ತೆರೆಹಂಚಿಕೊಳ್ಳುವ ಮೂಲಕ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈಗಾಗಲೇ ಸಿನಿಮಾದಿಂದ ಮೊದಲ ಹಾಡು ರಿಲೀಸ್ ಆಗಿದ್ದು. ಎರಡನೇ ಹಾಡು ಕ್ರಿಸ್ಮಸ್ ಗೆ ಬಿಡುಗಡೆಯಾಗುತ್ತಿದೆ. ಆರ್ಯ ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Netizens Troll Actor Arya and his wife Sayyesha for their age gap.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X