For Quick Alerts
  ALLOW NOTIFICATIONS  
  For Daily Alerts

  'ಕಿರಾತಕ' ನಟಿ ಓವಿಯಾಗೆ ಕಾಡ್ತಿದ್ಯಾ ಆ ಸಮಸ್ಯೆ?

  |

  ತಮಿಳು ನಟಿ ಓವಿಯಾ 'ಕಿರಾತಕ' ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯವಾಗಿದ್ದರು. ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ಈ ಚಿತ್ರದ ದೊಡ್ಡ ಬ್ಲಾಕ್ ಬಸ್ಟರ್ ಆಗಿತ್ತು. ಈ ಸಿನಿಮಾ ಬಳಿಕ ಮಿಸ್ಟರ್ ಮೊಮ್ಮಗ ಅಂತ ಇನ್ನೊಂದು ಕನ್ನಡ ಚಿತ್ರ ಮಾಡಿದರು. ಅದು ನಿರೀಕ್ಷೆಯ ಯಶಸ್ಸು ಕೊಟ್ಟಿಲ್ಲ.

  ಅದಾದ ಬಳಿಕ ಓವಿಯಾ ಸ್ಯಾಂಡಲ್ವುಡ್ ನಿಂದ ದೂರವೇ ಇದ್ದಾರೆ. ಆದರೆ, ತಮಿಳಿನಲ್ಲಿ ಹೆಚ್ಚು ಹೆಚ್ಚು ಸಿನಿಮಾ ಮಾಡ್ತಿದ್ದಾರೆ. ಕೆಲವು ದಿನಗಳಿಂದ ಈ ನಟಿ ಕುರಿತು ಸುದ್ದಿಯೊಂದು ಹರಿದಾಡುತ್ತಿದೆ.

  ತೆರೆಮರೆಯಾಗಿದ್ದ ನಟಿ ಮಹಾಲಕ್ಷ್ಮಿ ರೀ-ಎಂಟ್ರಿ: ಈ ಬಗ್ಗೆ 'ಮುದ್ದಿನ ರಾಣಿ' ಹೇಳಿದ್ದೇನು?ತೆರೆಮರೆಯಾಗಿದ್ದ ನಟಿ ಮಹಾಲಕ್ಷ್ಮಿ ರೀ-ಎಂಟ್ರಿ: ಈ ಬಗ್ಗೆ 'ಮುದ್ದಿನ ರಾಣಿ' ಹೇಳಿದ್ದೇನು?

  ಓವಿಯಾ ಆರೋಗ್ಯದಲ್ಲಿ ಸ್ಥಿರತೆ ಇಲ್ಲ. ಅವರೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಗಳು ಸದ್ದು ಮಾಡ್ತಿದೆ. ಈ ಬಗ್ಗೆ ಸ್ವತಃ ಓವಿಯಾ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ, ಓವಿಯಾ ಬಳಲುತ್ತಿರುವ ಆ ಸಮಸ್ಯೆ ಏನು? ಮುಂದೆ ಓದಿ....

  ಖಿನ್ನತೆಯಿಂದ ಬಳಲುತ್ತಿದ್ದಾರಾ ಓವಿಯಾ?

  ಖಿನ್ನತೆಯಿಂದ ಬಳಲುತ್ತಿದ್ದಾರಾ ಓವಿಯಾ?

  ಓವಿಯಾ ಹೆಲೆನ್ ಬಹಳ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಜೀವನಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರಗಳ ಕುರಿತು ಟ್ವೀಟ್ ಮಾಡುತ್ತಿದ್ದ ನಟಿಯ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. 'ಲೈಫ್ ಈಸ್ ನೋ ಮೀನಿಂಗ್' ಎಂದು ಮಾಡಿದ್ದ ಟ್ವೀಟ್ ಕೂಡ ಅದೇ ಕೋನದಲ್ಲಿತ್ತು.

  ಚರ್ಚೆಗೆ ಕಾರಣವಾದ 'ಲೈಫ್ ಈಸ್ ನೋ ಮೀನಿಂಗ್'

  ಚರ್ಚೆಗೆ ಕಾರಣವಾದ 'ಲೈಫ್ ಈಸ್ ನೋ ಮೀನಿಂಗ್'

  ಓವಿಯಾ ಅವರ ಆರೋಗ್ಯ ಅಥವಾ ಮಾನಸಿಕ ಸ್ಥಿತಿಯ ಬಗ್ಗೆ ಇದ್ದ ಊಹಾಪೋಹಗಳಿಗೆ ಸ್ವತಃ ನಟಿ ತೆರೆ ಎಳೆದಿದ್ದಾರೆ. ''ಲೈಫ್ ಈಸ್ ನೋ ಮೀನಿಂಗ್' ಎಂದು ಹಾಕಿದ್ದ ಪೋಸ್ಟ್ ಗೆ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ ''ಚಿಂತಿಸಬೇಡಿ, ನಾವು ಸದಾ ನಿಮ್ಮೊಂದಿಗೆ ಇದ್ದೇವೆ. ಎಲ್ಲವೂ ಸರಿಯಾಗುತ್ತೆ'' ಎಂದಿದ್ದರು. ಅದಕ್ಕೆ ಉತ್ತರಿಸಿದ ನಟಿ ''ಅಯ್ಯೋ ಪಾಪಿಗಳ ನನಗೆ ಏನೂ ಆಗಿಲ್ಲ. ನಾನು ಚೆನ್ನಾಗಿದ್ದೇನೆ'' ಎಂದು ಹೇಳಿದ್ದಾರೆ.

  ಬೆಂಗಾಲಿ ನಟಿ ಪಾಯಲ್ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣ?ಬೆಂಗಾಲಿ ನಟಿ ಪಾಯಲ್ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣ?

  ಆತ್ಮಹತ್ಯೆಗೆ ಯತ್ನಿಸಿದ್ದ ನಟಿ!

  ಆತ್ಮಹತ್ಯೆಗೆ ಯತ್ನಿಸಿದ್ದ ನಟಿ!

  ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಓವಿಯಾ ಭಾಗವಹಿಸಿದ್ದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದ ಸ್ವಿಮ್ಮಿಂಗ್ ಪೋಲ್ ನಲ್ಲಿ ಮುಳುಗಿ ಸಾಯುಲು ಮುಂದಾಗಿದ್ದರು ಎಂದು ಹೇಳಲಾಗಿತ್ತು. ಬಳಿಕ ಬಿಗ್ ಮನೆಯಿಂದ ಆಕೆಯನ್ನು ಹೊರಹಾಕಿದ್ದರು.

  'ಬ್ಲಾಕ್ ಕಾಫಿ' ಚಿತ್ರದಲ್ಲಿ ನಟನೆ

  'ಬ್ಲಾಕ್ ಕಾಫಿ' ಚಿತ್ರದಲ್ಲಿ ನಟನೆ

  ಕಲಾವಾಣಿ 2 ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದ ಓವಿಯಾ ತಮಿಳಿನ ರಾಜಭೀಮ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಆ ಕಡೆ ಮಲಯಾಳಂನಲ್ಲಿ ಬ್ಲಾಕ್ ಕಾಫಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Tamil actress Oviya clears rumours about her health. she clarified about her mentally and physically condition.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X