twitter
    For Quick Alerts
    ALLOW NOTIFICATIONS  
    For Daily Alerts

    ಕಾನ್ ಫೆಸ್ಟಿವಲ್‌ನಲ್ಲೇ 'ಕೆಜಿಎಫ್' ಕಥೆ ಹೇಳಿದ್ದ ಪಾ.ರಂಜಿತ್: ಇದು ರಿಯಲ್ ಸ್ಟೋರಿ!

    |

    ಕನ್ನಡ ಚಿತ್ರರಂಗದಲ್ಲಿ 'ಕೆಜಿಎಫ್' ಎನ್ನುವ ಹೆಸರು ಇತಿಹಾಸದ ಪುಟದಲ್ಲಿ ಸೇರಿ ಹೋಗಿದೆ. 'ಕೆಜಿಎಫ್' ಎನ್ನುವ ಸಿನಿಮಾ ಬಂದಮೇಲೆ ಈ ಹೆಸರು ಮತ್ತಷ್ಟು ಹೆಚ್ಚು ಪ್ರಚಾರ ಪಡೆದುಕೊಂಡಿದೆ ಅಷ್ಟೇ. ಆದರೆ ಕೆಜಿಎಫ್ ಚಿನ್ನದ ಗಣಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಕೆಜಿಎಫ್, ಕೋಲಾರ್ ಗೋಲ್ಡ್ ಫೀಲ್ಡ್ ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಸೇರಿದ ಸ್ಥಳ.

    ಕರ್ನಾಟಕ ಚಿನ್ನದ ನಾಡು, ಬಂಗಾರದ ಬೀಡು ಎನಿಸಿಕೊಳ್ಳಲು ಇದು ಕೂಡ ಕಾರಣ. ಕೆಜಿಎಫ್ ಬಗ್ಗೆ ಈಗ ಮತ್ತೆ ಮಾತನಾಡೋಕೆ ಕಾರಣ ತಮಿಳಿನ ನಿರ್ದೇಶಕ. ಹೌದು, ತಮಿಳಿನಲ್ಲೂ ಕೆಜಿಎಫ್ ಸಿನಿಮಾ ಸೆಟ್ಟೇರಲಿದೆ. ಕನ್ಫ್ಯೂಸ್ ಆಗ್ಬೇಡಿ, ತಮಿಳು ನಿರ್ದೇಶಕ ಪಾ.ರಂಜಿತ್ ಈ ಹಿಂದೆಯೇ ಕೆಜಿಎಫ್ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದರು.

    ಶ್ರೀನಿಧಿ ಶೆಟ್ಟಿ ಹತ್ತನೇ ತರಗತಿ ಅಂಕ ಪಟ್ಟಿ ವೈರಲ್: ಕನ್ನಡದಲ್ಲಿ ಅತಿ ಹೆಚ್ಚು ಅಂಕ!ಶ್ರೀನಿಧಿ ಶೆಟ್ಟಿ ಹತ್ತನೇ ತರಗತಿ ಅಂಕ ಪಟ್ಟಿ ವೈರಲ್: ಕನ್ನಡದಲ್ಲಿ ಅತಿ ಹೆಚ್ಚು ಅಂಕ!

    ಅರೆ ಕನ್ನಡದಲ್ಲಿ ತೆರೆಕಂಡು, ಎರಡು ಭಾಗಗಳಲ್ಲಿ ಬಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ 'ಕೆಜಿಎಫ್' ಸಿನಿಮಾ. ಈಗ ಮತ್ತೆ ಅದೇ ಸಿನಿಮಾ ಬರುತ್ತಾ ಅಂತ ಅನಿಸೋದು ಸಹಜ. ಈ 'ಕೆಜಿಎಫ್‌'ನಲ್ಲಿ ಏನಿರಲಿದೆ. ಈಗ ಕೆಜಿಎಫ್ ಮಾಡಲು ಕಾರಣ ಏನು ಎನ್ನುವುದನ್ನು ಮುಂದೆ ಓದಿ.

    ಕಾನ್ ಚಿತ್ರೋತ್ಸದಲ್ಲಿ ಪಾ.ರಂಜಿತ್ ಹೇಳಿಕೆ!

    ಕಾನ್ ಚಿತ್ರೋತ್ಸದಲ್ಲಿ ಪಾ.ರಂಜಿತ್ ಹೇಳಿಕೆ!

    'ಕಬಾಲಿ' ಸಿನಿಮಾ ಖ್ಯಾತಿಯ ನಿರ್ದೇಶಕ ಪಾ.ರಂಜಿತ್ ಕೆಜಿಎಫ್ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಅವರು ಕಾನ್ ಚಿತ್ರೋತ್ಸವದಲ್ಲಿ ಹೇಳಿಕೊಂಡಿದ್ದರು. ಕಾನ್ ಚಿತ್ರೋತ್ಸವಕ್ಕೆ ಅತಿಥಿಯಾಗಿ ಹೋಗಿದ್ದ ಪಾ.ರಂಜಿತ್, ಕೆಜಿಎಫ್ ಬಗ್ಗೆ ನೈಜ ಕಥೆ ಆಧಾರಿತ ಸಿನಿಮಾ ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು. ಈಗಾಗಲೇ ಆ ಸಿನಿಮಾದ ಕೆಲಸಗಳು ಆರಂಭವಾಗಿವೆ. ನಟ ಚಿಯಾನ್ ವಿಕ್ರಂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದಿದ್ದರು.

    'ಸಲಾರ್' ಲುಕ್ ಗೆ ಅಭಿಮಾನಿಗಳು ಫಿದಾ, 'ಕೆಜಿಎಫ್' ಜೊತೆ ಹೋಲಿಕೆ'ಸಲಾರ್' ಲುಕ್ ಗೆ ಅಭಿಮಾನಿಗಳು ಫಿದಾ, 'ಕೆಜಿಎಫ್' ಜೊತೆ ಹೋಲಿಕೆ

    'ಕೆಜಿಎಫ್' ನೈಜ ಕಥೆ ಹೇಳ್ತಾರೆ ಪಾ. ರಂಜಿತ್?

    'ಕೆಜಿಎಫ್' ನೈಜ ಕಥೆ ಹೇಳ್ತಾರೆ ಪಾ. ರಂಜಿತ್?

    'ಕೆಜಿಎಫ್' ಅಂದಾಕ್ಷಣ ಎಲ್ಲರಿಗೂ ಕೋಲಾರದ ಗೋಲ್ಡ್ ಫೀಲ್ಡ್ ನೆನಪಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ 'ಕೆಜಿಎಫ್' ಸಿನಿಮಾ ಮೊದಲು ನೆನಪಾಗುತ್ತದೆ. ಆದರೆ ಪಾ.ರಂಜಿತ್ ಕೆಜಿಎಫ್ ಚಿತ್ರಕ್ಕೂ ಕನ್ನಡದ ಸೂಪರ್ ಹಿಟ್ ಸಿನಿಮಾ ಕೆಜಿಎಫ್‌ಗೂ ಯಾವುದೇ ರೀತಿಯಾದ ಸಂಬಂಧ ಇಲ್ಲ. ಇದು ನೈಜ ಕಥೆಗಳನ್ನು ಬಿಚ್ಚಿಡುವ ಸಿನಿಮಾ. ಕೆಜಿಎಫ್ ಹುಟ್ಟಿದ್ದು ಹೇಗೆ? ಅಲ್ಲಿ ನಿಜವಾಗಿಯೂ ಆಗ ನಡೆದಿದ್ದು ಏನು? ಎನ್ನುವ ನೈಜ ಅಂಶಗಳು ಈ ಸಿನಿಮಾದಲ್ಲಿ ಇರಲಿವೆ.

    19ರ ದಶಕದ 'ಕೆಜಿಎಫ್' ಕಥೆ!

    19ರ ದಶಕದ 'ಕೆಜಿಎಫ್' ಕಥೆ!

    ಪಾ.ರಂಜಿತ್ ಕೆಜಿಎಫ್ ಸಿನಿಮಾ 19 ದಶಕದ ಕಥೆ ಆಗಿರುತ್ತದೆ. ಆಗ ಕೆಜಿಎಫ್‌ಗಾಗಿ ಬ್ರಿಟಿಷರು ಹೂಡಿದ ಆಟಗಳು ಚಿತ್ರದಲ್ಲಿ ಇರುತ್ತವೆ. ಇನ್ನು ಮುಖ್ಯವಾಗಿ ಕೆಜಿಎಫ್ ಗಣಿಗೆ ತಮಿಳರ ಕೊಡುಗೆ ಏನು ಎನ್ನುವ ಹಿನ್ನೆಲೆಯಲ್ಲಿ ಈ ಸಿನಿಮಾ ಇರಲಿದೆಯಂತೆ. ಕರ್ನಾಟಕದ ಕೋಲಾರದ ಚಿನ್ನದ ಗಣಿಯಲ್ಲಿ ಬ್ರಿಟಿಷರು ತಮಿಳರನ್ನು ಬಲವಂತವಾಗಿ ತಂದು ಇಳಿಸುತ್ತಿದ್ದರ ಸುತ್ತ ಈ ಕಥೆ ಸುತ್ತಲಿದೆ. ಮುಖ್ಯವಾಗಿ ಇದು ತಮಿಳರ ಜೀವನ ಕುರಿತಾಗಿ ಇರಲಿದೆಯಂತೆ.

    'ಕೆಜಿಎಫ್ 2' ಕನ್ನಡದ ಹೆಮ್ಮೆ: 'ಪುಷ್ಪ' ತೆಲುಗು ಹೆಮ್ಮೆ ಎಂದ ಧನಂಜಯ್'ಕೆಜಿಎಫ್ 2' ಕನ್ನಡದ ಹೆಮ್ಮೆ: 'ಪುಷ್ಪ' ತೆಲುಗು ಹೆಮ್ಮೆ ಎಂದ ಧನಂಜಯ್

    ಕನ್ನಡದ ಕೆಜಿಎಫ್ ನಿಜ ಅಲ್ವ?

    ಕನ್ನಡದ ಕೆಜಿಎಫ್ ನಿಜ ಅಲ್ವ?

    ಕನ್ನಡದ ಕೆಜಿಎಫ್ ಸಾವಿರ ಕೋಟಿ ಕಲೆ ಹಾಕಿ ಸೈ ಎನಿಸಿಕೊಂಡಿದೆ. ಈ ಸಿನಿಮಾದ ಟೈಟಲ್ಲೇ ಕೆಜಿಎಫ್ ಇದೆ. ಹಾಗಂತ ಇಲ್ಲಿ ಇರುವುದು ರಾಕಿ ಭಾಯ್ ಕಥೆ. ಇದೊಂದು ಕಾಲ್ಪನಿಕ ಕಥೆಯೇ ಹೊರತು ನೈಜ ಕಥೆಯಲ್ಲ. ಕೆಜಿಎಫ್ ಚಿತ್ರದಲ್ಲಿ ಗಣಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿತ್ತು. ರಾಕಿ ಭಾಯ್ ಎನ್ನುವ ಒಬ್ಬ ಗ್ಯಾಂಗ್‌ಸ್ಟರ್ ಕಥೆಯನ್ನು ಹೆಣೆಯಲಾಗಿತ್ತು. ಇದು ನಿರ್ದೇಶಕ ಪ್ರಶಾಂತ್ ನೀಲ್ ಕಲ್ಪನೆಯ ಕಥೆ.

    'ಕಬಾಲಿ'ನಂತರ ಕೆಜಿಎಫ್ ಕಥೆ!

    'ಕಬಾಲಿ'ನಂತರ ಕೆಜಿಎಫ್ ಕಥೆ!

    ಪಾ.ರಂಜಿತ್ ಸಿನಿಮಾ ವೃತ್ತಿ ಬದುಕಿಗೆ ದೊಡ್ಡ ಟರ್ನ್ ಕೊಟ್ಟ ಸಿನಿಮಾ 'ಕಬಾಲಿ'. 'ಕಬಾಲಿ' ಸಿನಿಮಾ ಪಾ.ರಂಜಿತ್‌ಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ. ಈ ಚಿತ್ರದ ಬಳಿಕ 'ಕೆಜಿಎಫ್' ಕಥೆಯನ್ನು ಸಿನಿಮಾ ಮಾಡಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಸಾಧ್ಯ ಆಗಿಲ್ಲ. ಜೊತೆಗೆ ಕನ್ನಡದಲ್ಲಿ ಕೆಜಿಎಫ್ ಬಂದ ಕಾರಣ, 'ಕೆಜಿಎಫ್ ಭಾಗ 2' ರಿಲೀಸ್ ಅಗುವ ತನಕ ಕಾದು, ಈಗ ಸಿನಿಮಾ ಆರಂಭಿಸುತ್ತಿದ್ದಾರೆ. ಜುಲೈನಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿದೆ.

    English summary
    Pa.Ranjith's KGF Story Of 19th Century is Based On Tamilians Contribution to the KGF, Know More.
    Wednesday, June 22, 2022, 16:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X