For Quick Alerts
  ALLOW NOTIFICATIONS  
  For Daily Alerts

  ಪೊನ್ನಿಯಿನ್ ಸೆಲ್ವನ್: ಯಾವ ಸ್ಟಾರ್‌ಗೆ ಯಾವ ಪಾತ್ರ? ಲೀಕ್‌ ಆಯ್ತು ಸಂದೇಶ

  |

  ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸುತ್ತಿರುವ 'ಪೊನ್ನಿಯಿನ್ ಸೆಲ್ವನ್' ದೇಶದ ಸಿನಿಪ್ರೇಮಿಗಳ ಗಮನ ಸೆಳೆದಿದೆ. ಮಣಿರತ್ನಂ ಬಹಳ ವರ್ಷಗಳಾದ ನಂತರ ನಿರ್ದೇಶಿಸುತ್ತಿರುವ ಇದು ಎನ್ನುವುದು ಒಂದು ಕಾರಣವಾದರೆ, ಹಲವು ಸ್ಟಾರ್‌ಗಳು ನಟಿಸಿರುವ ಸಿನಿಮಾ ಇದು ಎಂಬುದು ಮತ್ತೊಂದು ಕಾರಣ.

  'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿ ಐಶ್ವರ್ಯಾ ರೈ ಸೇರಿದಂತೆ 20ಕ್ಕೂ ಹೆಚ್ಚು ಸ್ಟಾರ್ ನಟರು ನಟಿಸಿದ್ದಾರೆ. ಸಿನಿಮಾದಲ್ಲಿ ಕಂಡು ಬರುವ ಎಲ್ಲ ಪಾತ್ರಗಳಲ್ಲಿಯೂ ಸ್ಟಾರ್ ನಟರೇ ತುಂಬಿದ್ದಾರೆ ಎನ್ನಲಾಗಿದೆ. ಆದರೆ ಯಾರಿಗೆ ಯಾವ ಪಾತ್ರ ನೀಡಿದ್ದಾರೆ ಮಣಿರತ್ನಂ ಎಂಬುದು ಇಷ್ಟು ದಿನ ಗುಟ್ಟಾಗಿತ್ತು. ಆದರೆ ಆ ಗುಟ್ಟು ಈಗ ರಟ್ಟಾಗಿದೆ.

  'ಪೊನ್ನಿಯಿನ್ ಸೆಲ್ವನ್' ಸಿನಿಮಾವು ತಮಿಳಿನ ಹಳೆಯ ಕಾದಂಬರಿ ಆಧರಿಸಿದ ಸಿನಿಮಾವನ್ನು ಆಧರಿಸಿದ ಸಿನಿಮಾ ಎಂಬುದು ಈಗಾಗಲೇ ಖಾತ್ರಿಯಾಗಿದೆ. ಆದರೆ ಕಾದಂಬರಿಯಲ್ಲಿನ ಯಾವ ಪಾತ್ರ ಯಾವ ನಟರಿಗೆ ನೀಡಲಾಗಿದೆ ಎಂಬುದು ಅನುಮಾನವಾಗಿತ್ತು. ಇದೀಗ ಟ್ವಿಟ್ಟರ್‌ನಲ್ಲಿ ಚಿತ್ರವೊಂದು ವೈರಲ್ ಆಗಿದ್ದು ಚಿತ್ರದಲ್ಲಿ ಯಾವ ಪಾತ್ರವನ್ನು ಯಾವ ನಟ ಅಥವಾ ನಟಿಗೆ ನೀಡಲಾಗಿದೆ ಎಂಬ ಮಾಹಿತಿ ಇದೆ.

  'ಪೊನ್ನಿಯಿನ್ ಸೆಲ್ವನ್‌' ಸಿನಿಮಾದಲ್ಲಿ ಐಶ್ವರ್ಯಾ ರೈ, ಪ್ರಕಾಶ್ ರೈ, ಚಿಯಾನ್ ವಿಕ್ರಂ, ನಟ ಕಾರ್ತಿ, ಜಯಂ ರವಿ, ತ್ರಿಶಾ, ಐಶ್ವರ್ಯಾ ಲಕ್ಷ್ಮಿ, ಹಿರಿಯ ನಟರಾದ ಶರತ್, ಪಾರ್ತಿಬನ್, ಶೋಭಿತಾ, ಮಲಯಾಳಂನ ಲಾಲ್, ತಮಿಳಿನ ಜಯರಾಮ್, ಪ್ರಭು, ಕನ್ನಡದ ನಟ ಕಿಶೋರ್, ವಿಕ್ರಮ್ ಪ್ರಭು, ಮೋಹನ್‌ರಾಮ್ ಇನ್ನೂ ಕೆಲವರಿದ್ದಾರೆ. ಇಷ್ಟು ದೊಡ್ಡ ತಾರಾಗಾಣ ಸಿನಿಮಾಕ್ಕಿದೆ.

  ಯಾರಿಗೆ ಯಾವ ಪಾತ್ರ?

  ಯಾರಿಗೆ ಯಾವ ಪಾತ್ರ?

  ಚೋಳ ವಂಶದ ಬಗೆಗಿನ ಕತೆಯನ್ನು ಸಿನಿಮಾ ಒಳಗೊಂಡಿದ್ದು ಸಿನಿಮಾದಲ್ಲಿ ಪ್ರಕಾಶ್ ರೈಗೆ ಸುಂದರ ಚೋಳರ್, ವಿಕ್ರಂಗೆ ಆದಿತ್ಯ ಕರಿಕಾಲನ್, ಜಯಂ ರವಿಗೆ ಅರುಳ್‌ಮೋಳಿ ವಿಜಯನ್, ಕಾರ್ತಿಗೆ ವಾಂಡಿಯೇತವನ್, ತ್ರಿಶಾಗೆ ಕುಂದವಿ (ಜಯಂ ರವಿಯ ಪತ್ನಿ), ಐಶ್ವರ್ಯಾ ರೈಗೆ ನಂದಿನಿ ಮತ್ತು ಮಂದಾಕಿನಿ ದೇವಿ ಪಾತ್ರ ನೀಡಲಾಗಿದೆ. ಐಶ್ವರ್ಯಾ ಲಕ್ಷ್ಮಿಗೆ ಪೂಂಗುಳಲಿ, ಶೋಬಿತಾಗೆ ವಾನತಿ, ಶರತ್‌ಗೆ ಪೆರಿಯ ಪಲುವೆಟ್ಟರಯಾರ್, ಪಾರ್ತಿಬನ್‌ಗೆ ಚಿನ್ನ ಪಲುವೆಟ್ಟೆರಯಾರ್, ಲಾಲ್‌ಗೆ ಮಲಯಾಮಾನ್, ಪ್ರಭುಗೆ ಅನಿರುದ್ಧ ಬ್ರಹ್ಮರಯಾರ್, ಕನ್ನಡದ ಕಿಶೋರ್‌ಗೆ ರವಿದಾಸನ್, ವಿಕ್ರಮ್ ಪ್ರಭುಗೆ ಕಂದ ಮಾರನ್, ಅರ್ಜುನ್ ಚಿದಂಬರನ್‌ಗೆ ಮಧುರಂದಾಗನ್ ಪಾತ್ರಗಳನ್ನು ನೀಡಲಾಗಿದೆ.

  ಐಶ್ವರ್ಯಾ ರೈಗೆ ವಿಲನ್ ಪಾತ್ರ

  ಐಶ್ವರ್ಯಾ ರೈಗೆ ವಿಲನ್ ಪಾತ್ರ

  ಸಿನಿಮಾದಲ್ಲಿ ನಟಿ ಐಶ್ವರ್ಯಾ ರೈ ಅವರದ್ದು ವಿಲನ್ ಪಾತ್ರ. ಐಶ್ವರ್ಯಾ ರೈ ಮಾತ್ರವೇ ಅಲ್ಲದೆ ರಿಯಾಜ್ ಖಾನ್, ಕನ್ನಡದ ನಟ ಕಿಶೋರ್ ಸಹ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಕಾಶ್ ರೈಗೆ ಪ್ರಮುಖ ಪಾತ್ರವನ್ನು ಮಣಿರತ್ನಂ ನೀಡಿದ್ದು ಆ ಪಾತ್ರಕ್ಕಾಗಿ ಮೊದಲು ಅಮಿತಾಬ್ ಬಚ್ಚನ್ ಅವರನ್ನು ಕೇಳಲಾಗಿತ್ತು. ತ್ರಿಶಾ ಚೋಳ ರಾಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ 31 ಮುಖ್ಯ ಪಾತ್ರಗಳಿವೆ. ಬಹುತೇಕ ಪಾತ್ರಗಳಿಗೆ ಸ್ಟಾರ್ ನಟ-ನಟಿಯರನ್ನೇ ಮಣಿರತ್ನಂ ಆಯ್ಕೆ ಮಾಡಿರುವುದು ವಿಶೇಷ.

  ಚೋಳ ಸಾಮ್ರಾಜ್ಯದ ಕತೆ ಹೊಂದಿರುವ ಸಿನಿಮಾ

  ಚೋಳ ಸಾಮ್ರಾಜ್ಯದ ಕತೆ ಹೊಂದಿರುವ ಸಿನಿಮಾ

  'ಪೊನ್ನಿಯಿನ್ ಸೆಲ್ವನ್' ಸಿನಿಮಾವು ಚೋಳ ಸಾಮ್ರಾಜ್ಯದ ಕತೆಯಾಗಿದೆ. ಇದೇ ಹೆಸರಿನ ಕಾದಂಬರಿಯನ್ನು ಕಾದಂಬರಿಕಾರ ಕಲ್ಕಿ ಕೃಷ್ಣಮೂರ್ತಿ 1950ರಲ್ಲಿ ತಮಿಳಿನ ಮಾಸಿಕ ಒಂದಕ್ಕೆ ಬರೆದಿದ್ದರು. ನಂತರ ಅದನ್ನೇ ಕಾದಂಬರಿಯಾಗಿ ಪ್ರಕಟಿಸಲಾಯ್ತು. ಈ ಹಿಂದೆಯೇ ಈ ಕತೆಯನ್ನು ಸಿನಿಮಾ ಮಾಡಲು ಕೆಲವರು ಯತ್ನಿಸಿ ವಿಫಲವಾಗಿದ್ದರು ಇದೀಗ ಮಣಿರತ್ನಂ ಇದೇ ಕತೆಯನ್ನು ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆಗಳು ಸಿನಿಮಾ ಪ್ರೇಕ್ಷಕರಿಗಿದೆ.

  ಚಿತ್ರದ ಬಜೆಟ್ 500 ಕೋಟಿ

  ಚಿತ್ರದ ಬಜೆಟ್ 500 ಕೋಟಿ

  'ಪೊನ್ನಿಯಿನ್ ಸೆಲ್ವನ್' ಸಿನಿಮಾವು ತಮಿಳಿನ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಿದ್ದು, ಇಷ್ಟು ದೊಡ್ಡ ಸ್ಟಾರ್ ತಾರಾಗಣವಿರುವ ಮೊದಲ ಸಿನಿಮಾ ಇದಾಗಿದೆ. ಸಿನಿಮಾಕ್ಕೆ ಸ್ವತಃ ಮಣಿರತ್ನಂ ಮತ್ತು ಲೈಕಾ ಪ್ರೊಡಕ್ಷನ್‌ ಹಣ ಹೂಡಿದೆ. 'ಪೊನ್ನಿಯಿನ್ ಸೆಲ್ವನ್‌'ಗೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾದ ಸಂಕಲನ ಮಾಡುತ್ತಿರುವುದು ಶ್ರೀಕರ್ ಪ್ರಸಾದ್. ಸಿನಿಮಾದ ಬಜೆಟ್ 500 ಕೋಟಿ ರು. ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು ಭರದಿಂದ ಸಾಗಿದೆ.

  English summary
  Ponniyan Selvan movie character details leaked on social media. characters of Aishwarya Rai, Vikram, Trisha, Prakash Rai reveled.
  Wednesday, August 4, 2021, 19:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X