For Quick Alerts
  ALLOW NOTIFICATIONS  
  For Daily Alerts

  ರಜಿನಿಕಾಂತ್ 2.0 ಕಲೆಕ್ಷನ್ ಹಿಂದಿಕ್ಕಿ ನಂಬರ್ 1 ಆದ ಪೊನ್ನಿಯಿನ್ ಸೆಲ್ವನ್

  |

  ಕಾಂತಾರ ತೆರೆಕಂಡ ದಿನವೇ ಅಂದರೆ ಸೆಪ್ಟೆಂಬರ್ 30ರಂದು ತಮಿಳಿನ ಬಹು ನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವನ್ ಕೂಡ ತೆರೆಕಂಡಿತ್ತು. ಮಣಿರತ್ನಂ ನಿರ್ದೇಶನ ಹಾಗೂ ಚಿಯಾನ್ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ತ್ರಿಶಾ ಹಾಗೂ ಇನ್ನೂ ಹಲವಾರು ಸ್ಟಾರ್‌ಗಳು ಚಿತ್ರದಲ್ಲಿ ಇದ್ದರಿಂದ ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತ್ತು. ಇನ್ನು ಖ್ಯಾತ ಕಲ್ಕಿ ಕೃಷ್ಣಮೂರ್ತಿ ಬರೆದಿದ್ದ 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಆಧಾರಿತ ಚಿತ್ರವಾಗಿದ್ದರಿಂದ ಈ ಚಿತ್ರದತ್ತ ವಯಸ್ಸಾದವರ ಒಲುವು ಹೆಚ್ಚಿತ್ತು. ನಿರ್ದೇಶಕ ಮಣಿರತ್ನಂ ಎಷ್ಟರ ಮಟ್ಟಿಗೆ ಪೊನ್ನಿಯಿನ್ ಸೆಲ್ವನ್ ಪುಸ್ತಕವನ್ನು ಓದಿಕೊಂಡಿದ್ದಾರೆ ಹಾಗೂ ಅದನ್ನು ತೆರೆ ಮೇಲೆ ತರುವಲ್ಲಿ ಯಶಸ್ವಿಯಾದ್ರಾ ಎಂಬ ಕುತೂಹಲದೊಂದಿಗೆ ಹಿರಿಯರು ಚಿತ್ರಮಂದಿರಕ್ಕೆ ಬಂದಿದ್ದರು.

  ಹೀಗೆ ಬೃಹತ್ ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡ ಪೊನ್ನಿಯಿನ್ ಸೆಲ್ವನ್ ಕೇವಲ ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆಗೊಂಡ ಪ್ಯಾನ್ ಇಂಡಿಯಾ ಸಿನಿಮಾವಾಗಿತ್ತು. ಹೀಗೆ ದೊಡ್ಡ ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡ ಪೊನ್ನಿಯಿನ್ ಸೆಲ್ವನ್ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ 80 ಕೋಟಿ ಕಲೆಕ್ಷನ್ ಮಾಡಿತು. ಒಳ್ಳೆಯ ಓಪನಿಂಗ್ ಪಡೆದುಕೊಂಡ ಪೊನ್ನಿಯಿನ್ ಸೆಲ್ವನ್ ತಮಿಳು ವರ್ಷನ್ ಹೊರತುಪಡಿಸಿ ಬೇರೆಡೆ ಗೆಲ್ಲುಲಾಗದೇ ವಿಫಲವಾಯಿತು.

  'ಕಾಂತಾರ' ಚಿತ್ರದಲ್ಲಿ ಬಳಕೆಯಾದ ಹದಿನಾರು‌ ವರ್ಷದ ಹಿಂದಿನ ತುಳು ಹಾಡು!'ಕಾಂತಾರ' ಚಿತ್ರದಲ್ಲಿ ಬಳಕೆಯಾದ ಹದಿನಾರು‌ ವರ್ಷದ ಹಿಂದಿನ ತುಳು ಹಾಡು!

  ಸದ್ಯ ಚಿತ್ರ ತಮಿಳುನಾಡು ಮಾತ್ರವಲ್ಲದೇ ಯುಎಸ್ಎಯಲ್ಲಿಯೂ ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದು, ರಜಿನಿಕಾಂತ್ ಅಭಿನಯದ ರೊಬೊ 2.0 ಚಿತ್ರದ ಗಳಿಕೆಯನ್ನು ಹಿಂದಿಕ್ಕಿ ಯುಎಸ್‌ಎಯಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ತಮಿಳು ಚಿತ್ರ ಎಂಬ ದಾಖಲೆ ಬರೆದಿದೆ. ಪೊನ್ನಿಯಿನ್ ಸೆಲ್ವನ್ ಚಿತ್ರ ಒಂಬತ್ತು ದಿನಗಳಲ್ಲಿ 5,564,305 ಅಮೆರಿಕನ್ ಡಾಲರ್ ಕಲೆಕ್ಷನ್ ಮಾಡಿದ್ದು, 2018ರಲ್ಲಿ ಬಿಡುಗಡೆಗೊಂಡು ಅಮೆರಿಕಾದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ದಾಖಲೆ ಬರೆದಿದ್ದ ರೊಬೊ 2.0 ಚಿತ್ರವನ್ನು ಹಿಂದಿಕ್ಕಿದೆ.

  English summary
  Ponniyin Selvan beats 2.0 movie's collection in US and became highest grossing tamil film. Read on
  Monday, October 10, 2022, 13:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X