Don't Miss!
- Automobiles
ಮುಂಬರಲಿರುವ ಹೋಂಡಾ ಬೈಕ್ಗಳಿಗೆ DL ಬೇಡ್ವಂತೆ: 10ಕ್ಕೂ ಹೆಚ್ಚು EV ಬಿಡುಗಡೆಗೆ ಸಿದ್ಧತೆ!
- News
Bengaluru Airport: ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಯುವತಿಯಿಂದ ಬೆದರಿಕೆ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎರಡು ಭಾಗದಲ್ಲಿ ತೆರೆಗೆ ಬರಲಿದೆ ಬಹುನಿರೀಕ್ಷಿತ ಸಿನಿಮಾ 'ಪೊನ್ನಿಯಿನ್ ಸೆಲ್ವನ್'
ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು 'ಪೊನ್ನಿಯಿನ್ ಸೆಲ್ವನ್'. ಭಾರಿ ಬಹುತಾರಾಗಣ ಹೊಂದಿರುವ ಈ ಸಿನಿಮಾದ ಬಗ್ಗೆ ಇಡೀ ದೇಶದ ಸಿನಿಪ್ರಿಯರು ಕಣ್ಣಿಟ್ಟಿದ್ದಾರೆ.
ಐಶ್ವರ್ಯಾ ರೈ, ಚಿಯಾನ್ ವಿಕ್ರಂ, ತ್ರಿಷಾ, ಕಾರ್ತಿ, ಜಯಂ ರವಿ, ವಿಕ್ರಂ ಪ್ರಭು, ಶರತ್ ಕುಮಾರ್, ಪ್ರಕಾಶ್ ರೈ, ಮಲಯಾಳಂನ ಲಾಲ್, ನಾಸರ್, ರೆಹಮಾನ್, ಕನ್ನಡದ ಕಿಶೋರ್, ಶೋಭಿತಾ ಧುಲಿಪಾಲಾ ಇನ್ನೂ ಹಲವಾರು ಖ್ಯಾತ ನಟ-ನಟಿಯರು ಈ ಸಿನಿಮಾದ ಭಾಗವಾಗಿದ್ದಾರೆ.
ಕಲ್ಕಿ ಕೃಷ್ಣಮೂರ್ತಿ ಬರೆದಿರುವ 'ಪೊನ್ನಿಯಿನ್ ಸೆಲ್ವನ್' ಪುಸ್ತಕ ಆಧರಿಸಿ ಅದೇ ಹೆಸರಿನಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡುತ್ತಿದ್ದಾರೆ. ಭಾರಿ ಬಜೆಟ್‌ನ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆಯಂತೆ.
ಈ ಸಿನಿಮಾದ ಮೊದಲ ಭಾಗವು ಸೆಪ್ಟೆಂಬರ್ 30 ರಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಐಶ್ವರ್ಯಾ ರೈ ಸೇರಿದಂತೆ ಕಾರ್ತಿ ಹಾಗೂ ಇನ್ನೂ ಕೆಲವು ನಟ-ನಟಿಯರ ಪೋಸ್ಟರ್‌ಗಳನ್ನು ಚಿತ್ರತಂಡ ಈಗಾಗಲೇ ಬಿಡುಗಡೆ ಮಾಡಿದೆ.
ಸರಿ ಸುಮಾರು 500 ಕೋಟಿ ಬಜೆಟ್ ಅನ್ನು ಈ ಸಿನಿಮಾದ ಮೇಲೆ ಹೂಡಲಾಗಿದ್ದು, ಭಾರಿ ಯುದ್ಧದ ದೃಶ್ಯಗಳು, ಭಾರಿ ಸೆಟ್‌ಗಳು, ಗ್ರಾಫಿಕ್ಸ್, ವಿಎಫ್‌ಎಕ್ಸ್ ಅನ್ನು ಸಿನಿಮಾ ಒಳಗೊಂಡಿರಲಿದೆ. ಸಿನಿಮಾಕ್ಕೆ ಸಂಗೀತವನ್ನು ಎ.ಆರ್.ರೆಹಮಾನ್ ನೀಡಿದ್ದು, ಈ ಸಿನಿಮಾ ವಿಶ್ವಮಟ್ಟದಲ್ಲಿ ಗಮನ ಸೆಳೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಚೋಳರ ಕಾಲದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ವಿಕ್ರಂ, ಆದಿತ್ಯ ಕರಿಕಾಲನ್ ಪಾತ್ರದಲ್ಲಿ ನಟಿಸಿದ್ದಾರೆ. ಐಶ್ವರ್ಯಾ ರೈ, ಪಳವೂರು ರಾಣಿ ನಂದಿನಿ ಪಾತ್ರದಲ್ಲಿ ನಟಿಸಿದ್ದಾರೆ. ಜಯಂ ರವಿ ಅರುಳ್‌ಮೋರಿ ವರ್ಮನ್ ಪಾತ್ರದಲ್ಲಿ ನಟಿಸಿದ್ದಾರೆ. ನಟ ಕಾರ್ತಿ ವಲ್ಲವರಿಯನ್ ವಾಂಡಿಯದೇವನ್ ಪಾತ್ರದಲ್ಲಿ ನಟಿಸಿದ್ದಾರೆ.