ಅಂಧಾದುನ್ ತಮಿಳು ರೀಮೇಕ್‌ಗೆ ಎಂಟ್ರಿಯಾದ ಪ್ರಿಯಾ ಆನಂದ್

ದಕ್ಷಿಣದ ನಿರೀಕ್ಷೆಯ ಚಿತ್ರಗಳ ಪೈಕಿ ಅಂಧಾದುನ್ ರೀಮೇಕ್ ಸಹ ಒಂದು. ಹಿಂದಿಯಲ್ಲಿ ಬಿಡುಗಡೆಯಾಗಿ ದೊಡ್ಡ ಹಿಟ್ ಆಗಿರುವ ಈ ಚಿತ್ರ ದಕ್ಷಿಣದ ಮೂರು ಭಾಷೆಯಲ್ಲಿ ತಯಾರಾಗುತ್ತಿದೆ.

ತಮಿಳಿನಲ್ಲಿ 'ಅಂಧಗನ್' ಎಂದು ಹೆಸರಿಡಲಾಗಿದ್ದು, ಪ್ರಿಯಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ರಾಧಿಕಾ ಆಪ್ಟೆ ನಿರ್ವಹಿಸಿದ್ದ ಪಾತ್ರದಲ್ಲಿ ಪ್ರಿಯಾ ಅಭಿನಯಿಸಲಿದ್ದಾರೆ ಎಂದು ನಟ ಪ್ರಶಾಂತ್ ಅಧಿಕೃತ ಪ್ರಕಟಣೆ ಮಾಡಿದ್ದಾರೆ.

ಹಿಂದಿಯಲ್ಲಿ ಆಯುಷ್ಮಾನ್ ಖುರಾನ ಕಾಣಿಸಿಕೊಂಡಿದ್ದ ಪಾತ್ರದಲ್ಲಿ ತಮಿಳು ನಟ ಪ್ರಶಾಂತ್ ಬಣ್ಣ ಹಚ್ಚಿದ್ದು, ಈಗ ಪ್ರಿಯಾ ಆನಂದ್ ಹೊಸ ಎಂಟ್ರಿಯಾಗಿದೆ. ''ರಾಧಿಕಾ ಆಪ್ಟೆ ಪಾತ್ರದಲ್ಲಿ ಪ್ರಿಯಾ ನಟಿಸುತ್ತಿದ್ದಾರೆ ಎಂದು ಘೋಷಿಸುವುದು ಸಂತಸ ತಂದಿದೆ'' ಎಂದು ಪ್ರಶಾಂತ್ ಟ್ವೀಟ್ ಮಾಡಿದ್ದಾರೆ.

Priya Anand plays radhika apte roll in Andhadhun Remake

ಹಿರಿಯ ನಟ, ನಿರ್ದೇಶಕ, ಪ್ರಶಾಂತ್ ಅವರ ತಂದೆ ತ್ಯಾಗರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. ಪ್ರಶಾಂತ್, ಪ್ರಿಯಾ ಆನಂದ್ ಜೊತೆ ಹಿರಿಯ ನಟಿ ಸಿಮ್ರಾನ್ ಸಹ ಇದ್ದಾರೆ. ಹಿಂದಿಯಲ್ಲಿ ಟಬು ಅಭಿನಯಿಸಿದ ಪಾತ್ರವನ್ನು ತಮಿಳಿನಲ್ಲಿ ಸಿಮ್ರಾನ್ ಮಾಡುತ್ತಿದ್ದಾರೆ.

ಇನ್ನುಳಿದಂತೆ ಹಾಸ್ಯನಟ ಯೋಗಿಬಾಬು, ಕೆಎಸ್ ರವಿಕುಮಾರ್, ವನಿತಾ ವಿಜಯ್ ಕುಮಾರ್ ಅವರು ಸಹ ತಾರಬಳಗದಲ್ಲಿದ್ದಾರೆ.

ಅಂದ್ಹಾಗೆ, 2018ರಲ್ಲಿ ತೆರೆಕಂಡಿದ್ದ 'ಅಂಧಾಧುನ್' ಚಿತ್ರವನ್ನು ಹಿಂದಿಯಲ್ಲಿ ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದರು. 2019ನೇ ಸಾಲಿನಲ್ಲಿ ಪ್ರಕಟವಾದ ರಾಷ್ಟ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಪಡೆದುಕೊಂಡಿತ್ತು.

More from Filmibeat

English summary
South beauty Priya Anand plays Radhika apte role in Andhadhun Remake starrer Prashanth in lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X