For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಮಣಿ, ತಮಿಳು ಸೂರ್ಯ ಮಧ್ಯೆ ಭಾರಿ ಫೈಟ್

  |

  ಮಲಯಾಳಂ ಮೂಲದ ನಟಿ ಪ್ರಿಯಾಮಣಿಯ ಕನ್ನಡ ಚಿತ್ರ 'ಚಾರುಲತಾ'ಗೆ ತಮಿಳು ನಟ ಸೂರ್ಯರ 'ಮಾತ್ರಾನ್' ಪೈಪೋಟಿ ನೀಡಲು ಸಜ್ಜಾಗಿದೆ. ಇದೇನಿದು ವಿಚಿತ್ರ ಹೇಳಿಕೆ ಅಂದುಕೊಳ್ಳಬೇಡಿ. ಅದಕ್ಕೆ ಕಾರಣವಿದೆ, ಎರಡೂ ಚಿತ್ರಗಳು ಸಾಕಷ್ಟು ಹೋಲಿಕೆ ಹೊಂದಿವೆ. ಡಬ್ಬಲ್ ಆಕ್ಟಿಂಗ್ ಅಲ್ಲದ, ಈ ಎರಡೂ ಚಿತ್ರಗಳ ಪಾತ್ರಗಳು ದೇಹಕ್ಕಂಟಿಕೊಂಡಿರುವ ಪಾತ್ರಗಳು. ಸಯಾಮಿ ಅವಳಿಗಳ ಒಂದೇ ರೀತಿಯ ಕಲ್ಪನೆ ಎರಡೂ ಚಿತ್ರಗಳಲ್ಲಿವೆ.

  ಇತ್ತೀಚಿಗಷ್ಟೇ ಈ ಎರಡೂ ಚಿತ್ರಗಳು ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಒಂದೇ ರೀತಿಯ ಕಥೆ ಹೊಂದಿರುವ ಮಾತ್ರಾನ್ ಹಾಗೂ ಚಾರುಲತಾ ಚಿತ್ರಗಳಲ್ಲಿ ಯಾವುದು ಮೊದಲು ಬಿಡುಗಡೆಯಾಗುವುದೋ ಅದಕ್ಕೆ ಅನುಕೂಲ ಹೆಚ್ಚು ಎನ್ನುವುದು ಚಿತ್ರರಂಗದಲ್ಲಿ ಬಂದಿರುವ ಅಭಿಪ್ರಾಯ. ಆದರೆ ಪ್ರೇಕ್ಷಕರ ಅಭಿಪ್ರಾಯವೇ ಅಂತಿಮ ಎಂಬುದೇ ನಿಜ.

  ತಮಿಳು 'ಮಾತ್ರಾನ್' ಚಿತ್ರ ಸೂರ್ಯ ನಾಯಕತ್ವದಲ್ಲಿ ಬಂದ ಈವರೆಗಿನ ಚಿತ್ರಗಳಲ್ಲೇ ಅತಿ ಹೆಚ್ಚು ಬಜೆಟ್ ಹೊಂದಿರುವ ಚಿತ್ರ. ಕೆ.ವಿ. ಆನಂದ್ ನಿರ್ದೇಶನದ ಇದರಲ್ಲಿ ಸೂರ್ಯ ಅವರಿಗೆ ಕಾಜಲ್ ಅಗರವಾಲ್ ನಾಯಕಿ. ಮಾತ್ರಾನ್ ಚಿತ್ರದ ತೆಲುಗು ವಿತರಣೆ ಹಕ್ಕುಗಳೇ ರು. 17 ಕೋಟಿಗೆ ಮಾರಾಟವಾಗಿದೆ. ಭಾರೀ ಮೊತ್ತವನ್ನು ಕೊಟ್ಟು ಈ ಚಿತ್ರವನ್ನು ಖರೀದಿಸಿರುವವರು ಬೆಲ್ಲಂಕೊಂಡ ಸುರೇಶ್. ಕರ್ನಾಟಕದ ವಿತರಣೆ ಹಕ್ಕುಗಳು ಮಂಡ್ಯ ಶ್ರೀಕಾಂತ್ ಕೈಗೆ ಸಿಕ್ಕಿದೆ.

  ಕನ್ನಡದಲ್ಲಿ ನಿರ್ಮಾಣವಾದ ಚಾರುಲತಾ ಅಧಿಕೃತವಾಗಿ 'ಅಲೋನ್' ಹೆಸರಿನ ಥಾಯ್-ಕೊರಿಯನ್ ಚಿತ್ರದ ರಿಮೇಕ್. ಕಾಪಿ ಮಾಡುವ ಬದಲು ರಿಮೇಕ್ ಹಕ್ಕುಗಳನ್ನು ಖರೀದಿಸಿಯೇ ಕನ್ನಡದಲ್ಲಿ ಮಾಡಿದ್ದಾರೆ ನಿರ್ಮಾಪಕ ದ್ವಾರಕೀಶ್. ಮುಂದೆ ಈ ಚಿತ್ರ ತಮಿಳು, ತೆಲುಗು ಹಾಗೂ ಮಲಯಾಳಂಗೆ ಡಬ್ ಆಗಲಿದೆ ಎಂದಿದೆ ಚಿತ್ರತಂಡ. ಅಂದಹಾಗೆ, ಈ ಚಿತ್ರದಲ್ಲಿ ಪ್ರಿಯಾಮಣಿಗೆ ಸ್ಕಂದ ನಾಯಕ. (ಒನ್ ಇಂಡಿಯಾ ಕನ್ನಡ)

  English summary
  Priyamani acted Kannada movie Charulatha and Tamil actor Suriya acted Tamli movie Maatran are ready to Release Soon. Now they are fighting for each other for early release. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X