For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಚಿತ್ರದಲ್ಲಿ ಪುನೀತ್ ಹಾಗೂ ಸಮುದ್ರ ಖಣಿ

  |

  ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಇದೀಗ ಚಿತ್ರೀಕರಣದಲ್ಲಿರುವ 'ಯಾರೇ ಕೂಗಾಡಲಿ' ಚಿತ್ರದ ನಿರ್ದೇಶಕ ಸಮುದ್ರ ಖಣಿ ಮತ್ತೊಂದು ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಈ ವಿಷಯವನ್ನು ತಮಿಳು ನಿರ್ದೇಶಕರಾಗಿದ್ದ, ಈಗ ಕನ್ನಡದ ಕಡೆ ಮುಖ ಮಾಡಿರುವ ಸಮುದ್ರ ಖಣಿ, ಸ್ವತಃ ಮಾಧ್ಯಮಗಳಿಗೆ ಹೇಳಿದ್ದಾರೆ. ಪುನೀತ್ ನಟನೆ ಹಾಗೂ ಸಮುದ್ರ ಖಣಿ ನಿರ್ದೇಶನದ 'ಯಾರೇ ಕೂಗಾಡಲಿ' ಚಿತ್ರವು ತಮಿಳಿನ ಪೊರಾಲಿ ರೀಮೇಕ್.

  ತಮಿಳು 'ಪೊರಾಲಿ' ನಿರ್ದೇಶಿಸಿ ಅದನ್ನೇ ಕನ್ನಡದಲ್ಲಿ ಯಾರೇ ಕೂಗಾಡಲಿ ಹೆಸರಿನಲ್ಲಿ ನಿರ್ದೇಶಿಸುತ್ತಿರುವ ನಿರ್ದೇಶಕ ಸಮುದ್ರ ಖಣಿ, ಪುನೀತ್ ಅವರಿಗೆ ಮತ್ತೊಂದು ಕಥೆಯನ್ನು ಹೇಳಿದ್ದಾರಂತೆ. ಆ ಕಥೆ ಪುನೀತ್ ಅವರಿಗೆ ಇಷ್ಟವಾಗಿದ್ದು ತಾವು ಅದರಲ್ಲಿ ನಟಿಸುವುದಾಗಿ ಪುನೀತ್ ಹೇಳಿದ್ದಾರಂತೆ. ಆದರೆ ಈ ಚಿತ್ರವು 'ಯಾರೇ ಕೂಗಾಡಲಿ' (ಪೊರಾಲಿ) ಯಂತೆ ರೀಮೇಕ್ ಅಲ್ಲ, ಹೊಸ ಕಥೆ ಎಂದಿದ್ದಾರೆ ಸಮುದ್ರ ಖಣಿ.

  ಸದ್ಯಕ್ಕೆ ಪುನೀತ್ ಹಾಗೂ ಯೋಗೇಶ್ ನಟನೆಯ 'ಯಾರೇ ಕೂಗಾಡಲಿ' ಹಾಗೂ ತಮಿಳು-ತೆಲುಗು ಚಿತ್ರ 'ನಿಮಿರ್ತು ನಿಲ್' ಚಿತ್ರದ ಶೂಟಿಂಗ್ ನಲ್ಲಿ ಬಿಜಯಾಗಿರುವ ಅವರು, ನಂತರ ಪುನೀತ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ. ಆ ಚಿತ್ರವು ಲವ್ ಅಥವಾ ಆಕ್ಷನ್ ಬೇಸ್ಡ್ ಚಿತ್ರವಲ್ಲ, ಬದಲಿಗೆ ಸಂಪೂರ್ಣವಾಗಿ ಸೆಂಟಿಮೆಂಟ್ ಆಧಾರಿತ ಚಿತ್ರ ಎಂಬ ಗುಟ್ಟನ್ನೂ ಸಮುದ್ರ ಖಣಿ ಬಿಚ್ಚಿಟ್ಟಿದ್ದಾರೆ.

  ಅಂದಹಾಗೆ, ಸಮುದ್ರ ಖಣಿ ನಿರ್ದೇಶನದಲ್ಲಿ ತಮಿಳು-ತೆಲುಗಿನಲ್ಲಿ ಮೂಡಿಬರುತ್ತಿರುವ 'ನಿಮಿರ್ತು ನಿಲ್' ಚಿತ್ರದ ತಮಿಳು ಆವೃತ್ತಿಯಲ್ಲಿ ಜಯಂ ರವಿ ಹಾಗೂ ತೆಲುಗು ಆವೃತ್ತಿಯಲ್ಲಿ ನಾನಿ ನಟಿಸುತ್ತಿದ್ದಾರೆ. 'ಯಾರೇ ಕೂಗಾಡಲಿ' ಹಾಗೂ 'ನಿಮಿರ್ತು ನಿಲ್' ಚಿತ್ರಗಳ ನಂತರ ಸಮುದ್ರ ಖಣಿ ಹೊಸ ಚಿತ್ರವು ಸೆಟ್ಟೇರಲಿದೆ. ಆದರೆ ಅದು ಯಾವಾಗ, ನಾಯಕಿ ಯಾರು, ಹಾಗೂ ಉಳಿದ ಮಾಹಿತಿಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. (ಒನ್ ಇಂಡಿಯಾ ಕನ್ನಡ)

  English summary
  Tamil Director Samuthikarani again ties up with Power Star Puneeth Rajkumar. The director confirmed that he already narrated the story and Puneeth gave Green Signal for that. After the completion of his Tamil-Telugu movie 'Nimirthu Nil', he takes this movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X