For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ಆರ್.ಮಾಧವನ್ ಇನ್ನು ಮುಂದೆ ಡಾ.ಆರ್.ಮಾಧವನ್

  |

  ತಮಿಳಿನ ಖ್ಯಾತ ನಾಯಕ ನಟ ಆರ್.ಮಾಧವನ್ ಗೆ ಡಾಕ್ಟರೇಟ್ ಲಭಿಸಿದೆ. ಸಿನಿಮಾ ಕಲೆಗೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.

  ಎರಡು ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ರಂಗದಲ್ಲಿ ನಿರತರಾಗಿರುವ ಆರ್.ಮಾಧವನ್ ಅರವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಹಲವು ಸಿನಿಮಾಗಳಿಗೆ ಚಿತ್ರಕತೆ ಬರೆದಿದ್ದಾರೆ, ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಕೆಲವು ವೆಬ್ ಸೀರೀಸ್ ಹಾಗೂ ಡಾಕ್ಯುಮೆಂಟರಿಗಳಲ್ಲಿಯೂ ನಟಿಸಿದ್ದಾರೆ ಮಾಧವನ್.

  ಆರ್.ಮಾಧವನ್ ಅವರು ಸಿನಿಮಾಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿರುವ ಮಹಾರಾಷ್ಟ್ರದ ಕೊಲ್ಹಾಪುರದ ಡಿವೈ ಪಾಟಿಲ್ ಎಜುಕೇಶನ್ ಸೊಸೈಟಿ ವಿವಿಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಆರ್.ಮಾಧವನ್, 'ಈ ಗೌರವ ನೀಡಿದ್ದಕ್ಕೆ ಧನ್ಯವಾದಗಳು, ಇದು ನನ್ನನ್ನು ಇನ್ನಷ್ಟು ಜವಾಬ್ದಾರಿಯಿಂದ ವರ್ತಿಸುವಂತೆ ಮಾಡಿದೆ' ಎಂದಿದ್ದಾರೆ.

  ಮಾಧವನ್ ವಿದ್ಯಾರ್ಥಿ ದೆಸೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಎಂಎಸ್‌ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಮಾಧವನ್, ವಿದ್ಯಾರ್ಥಿವೇತನ ಪಡೆದು ಕೆನಡಾ, ಅಲ್ಬೆರ್ಟಾ, ಸೆಟ್ಲರ್‌ಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದರು.

  Recommended Video

  ಜೂ.ಚಿರು ರಿಲೀಸ್ ಮಾಡಿದ ಟ್ರೈಲರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ | Filmibeat Kannada

  ಇತ್ತೀಚೆಗಷ್ಟೆ ಮಾಧವನ್, ಕನ್ನಡತಿ ಶ್ರದ್ಧಾ ಶ್ರೀನಾಥ್ ನಟನೆಯ 'ಮಾರಾ' ಸಿನಿಮಾ ಬಿಡುಗಡೆ ಆಗಿದೆ. ಇದೀಗ ಮಾಧವನ್ ಅವರೇ ನಿರ್ದೇಶಿಸಿ, ಹಣ ಸಹ ಹೂಡಿರುವ 'ರಾಕೆಟ್ರಿ; ದಿ ನಂಬಿ ಎಫೆಕ್ಟ್' ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ.

  English summary
  Tamil actor R Madhavan got honorer Doctorate from DY patil university Kolhapur.
  Thursday, February 18, 2021, 18:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X