Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: ಕನಿಷ್ಠ 7 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೊಮ್ಮೆ ಮಾನವೀಯತೆ ಮೆರೆದ ರಾಘವ್ ಲಾರೆನ್ಸ್: ಕೋಟಿ-ಕೋಟಿ ನೆರವು ನೀಡಿದ ನಟ
ಹೆಚ್ಚುವರಿ ಡಾನ್ಸರ್ ಆಗಿ ಸಿನಮಾಕ್ಕೆ ಬಂದವರು ನಂತರ ಲೀಡ್ ಡಾನ್ಸರ್, ನೃತ್ಯ ನಿರ್ದೇಶಕ, ನಿರ್ದೇಶಕ, ನಟ, ನಾಯಕ ಎಲ್ಲವೂ ಆಗಿ ಸೈ ಎನಿಸಿಕೊಂಡವರು ರಾಘವ ಲಾರೆನ್ಸ್.
ಕಪ್ಪು ಮುಖ ಬಣ್ಣದ ಈ ಹಾಲುಹೃದಯದ ನಟ, ನೃತ್ಯ ನಿರ್ದೇಶಕ ಆಗಾಗ್ಗೆ ತಮ್ಮ ಮಾನವೀಯತೆ ತುಂಬಿದ ಕಾರ್ಯಗಳಿಂದ ಸುದ್ದಿಗೆ ಬರುತ್ತಲೇ ಇರುತ್ತಾರೆ.
ಅಂಗವಿಕಲರಿಗೆ ಸಹಾಯ ಮಾಡುವುದು, ಮಂಗಳಮುಖಿಯರಿಗೆ ನೆರವು ನೀಡುವುದು, ಮಕ್ಕಳ ಆಪರೇಷನ್ ಗೆ ನೆರವಾಗುವುದು ಇದೇ ಹಲವು ಸಾಮಾಜಿಕ ಕಾರ್ಯಗಳನ್ನು ರಾಘವ್ ಲಾರೆನ್ಸ್ ಮಾಡುತ್ತಲೇ ಬಂದಿದ್ದಾರೆ.
ಈಗ ಇಡೀಯ ವಿಶ್ವವೇ ಸಂಕಷ್ಟದಲ್ಲಿದೆ, ಭಾರತದ ಎಲ್ಲಾ ರಾಜ್ಯಗಳು ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುತ್ತಿವೆ. ಇಂಥಹಾ ಸಮಯದಲ್ಲಿ ಮತ್ತೊಮ್ಮೆ ರಾಘವ ಲಾರೆನ್ಸ್ ತಮ್ಮ ಮಾನವೀಯತೆ ಪ್ರದರ್ಶಿಸಿದ್ದಾರೆ.

ಸಂತಸದ ಸಮಯದಲ್ಲಿ ಸಂಕಷ್ಟದಲ್ಲಿರುವವರನ್ನು ನೆನೆದರು
ರಘವ ಲಾರೆನ್ಸ್ ಅವರು ಪ್ರಸ್ತುತ ಬಹು ಸಂತೋಶದಲ್ಲಿದ್ದಾರೆ. ಆದರೆ ಈ ಸಂತಸದ ಸಮಯದಲ್ಲಿ ಅವರು ಸಂಕಷ್ಟದಲ್ಲಿರುವವರ ನೆನೆದು ಅವರಿಗಾಗಿ ಸಹಾಯ ಮಾಡಿದ್ದಾರೆ. ಈ ಬಗ್ಗೆ ಫೇಸ್‌ಬುಕ್ ನಲ್ಲಿ ಅವರು ಬರೆದುಕೊಂಡಿದ್ದಾರೆ.

ರಜನೀಕಾಂತ್ ಜೊತೆ ನಟಿಸುತ್ತಿರುವ ರಾಘವ ಲಾರೆನ್ಸ್
ರಾಘವ ಲಾರೆನ್ಸ್ ಅವರಿಗೆ ರಜನೀಕಾಂತ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ. ಅವರು ಚಂದ್ರಮುಖಿ-2 ಸಿನಿಮಾದಲ್ಲಿ ರಜನೀಕಾಂತ್ ಅವರೊಂದಿಗೆ ನಟಿಸುತ್ತಿದ್ದಾರೆ. ಈ ಬಗ್ಗೆ ರಾಘವ ಲಾರೆನ್ಸ್ ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಅಡ್ವಾನ್ಸ್ ಹಣವನ್ನು ದೇಣಿಗೆ ನೀಡಿದ ರಾಘವ್ ಲಾರೆನ್ಸ್
ಪ್ರಮುಖ ವಿಷಯವೆಂದರೆ ಈ ಸಿನಿಮಾಕ್ಕೆ ಅಡ್ವಾನ್ಸ್ ರೂಪದಲ್ಲಿ ರಾಘವ ಲಾರೆನ್ಸ್ ಗೆ ಮೂರು ಕೋಟಿ ಹಣ ದೊರೆತಿದ್ದು, ಆ ಹಣವನ್ನು ಲಾರೆನ್ಸ್ ಅವರು ಕೊರೊನಾ ವಿರುದ್ಧ ಹೋರಾಟಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಮೂರು ಕೋಟಿ ಹಣವನ್ನು ವಿವಿಧ ಸಂಸ್ಥೆಗಳಿಗೆ ಅವರು ದೇಣಿಗೆ ನೀಡಿದ್ದಾರೆ.

ಹಲವು ಸಂಗ-ಸಂಸ್ಥೆಗಳಿಗೆ ಹಣ ಹಂಚಿಕೆ ಮಾಡಿರುವ ರಾಘವ್
50 ಲಕ್ಷ ಹಣವನ್ನು ಪ್ರಧಾನಿ ನಿಧಿಗೆ ನೀಡಿದ್ದಾರೆ. 50 ಲಕ್ಷ ಹಣವನ್ನು ತಮಿಳುನಾಡು ಸಿಎಂ ನಿಧಿಗೆ ನೀಡಿದ್ದಾರೆ. 50 ಲಕ್ಷ ಹಣವನ್ನು ಸಿನಿಮಾ ಕಾರ್ಮಿಕರಿಗೆಂದು ಸಿನಿಮಾ ಒಕ್ಕೂಟಕ್ಕೆ ನೀಡಿದ್ದಾರೆ. 50 ಲಕ್ಷ ಹಣವನ್ನು ನೃತ್ಯಗಾರರ ಒಕ್ಕೂಟಕ್ಕೆ, 25 ಲಕ್ಷ ಹಣವನ್ನು ಅಂಗವಿಕಲ ಮಕ್ಕಳ ಕಲ್ಯಾಣಕ್ಕೆ, 75 ಲಕ್ಷ ಹಣವನ್ನು ತಮ್ಮ ಹುಟ್ಟೂರು ರಾಯಪುರಂ, ದೇಸೀಯನಗರದ ದಿನಗೂಲಿ ನೌಕರರಿಗಾಗಿ, ಪೊಲೀಸರಿಗೆ, ಬಡವರಿಗೆ, ನಿರ್ಗತಿಕರಿಗೆ ಆಹಾರ ಸರಬರಾಜು ಮಾಡಲು ನೀಡುವುದಾಗಿ ಅವರು ಹೇಳಿದ್ದಾರೆ.

ಪಿ.ವಾಸು ಅವರೇ ನಿರ್ದೇಶಿಸುತ್ತಿದ್ದಾರೆ
ಇನ್ನು ರಜನೀಕಾಂತ್ ನಟಿಸುತ್ತಿರುವ ಚಂದ್ರಮುಖಿ-2 ಸಿನಿಮಾವನ್ನು ಚಂದ್ರಮುಖಿಯ ಮೂಲ ಸಿನಿಮಾ ಆಗಿದ್ದ ಆಪ್ತಮಿತ್ರ ನಿರ್ದೇಶಿಸಿದ್ದ ಪಿ.ವಾಸು ಅವರೇ ನಿರ್ದೇಶಿಸುತ್ತಿದ್ದಾರೆ. 2005 ರಲ್ಲಿ ಚಂದ್ರಮುಖಿ ಸಿನಿಮಾವನ್ನು ಅವರೇ ನಿರ್ದೇಶಿಸಿದ್ದರು. ಸನ್ ಪಿಕ್ಚರ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.