For Quick Alerts
  ALLOW NOTIFICATIONS  
  For Daily Alerts

  'ಪೊನ್ನಿಯನ್ ಸೆಲ್ವನ್'ಗಾಗಿ ರಜನಿಕಾಂತ್, ಕಮಲ್ ಹಾಸನ್ ಸಮಾಗಮ!

  |

  ಭಾರತೀಯ ಚಿತ್ರರಂಗದ ಮುಂದಿನ ಬಹುನಿರೀಕ್ಷಿತ ಸಿನಿಮಾ ಮಣಿರತ್ನಂ 'ಪೊನ್ನಿಯನ್ ಸೆಲ್ವನ್' ಎಂದರೆ ತಪ್ಪಾಗಲಾರದು. ಈ ಸಿನಿಮಾ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಸುದ್ದಿಯಲ್ಲಿದೆ. ದೊಡ್ಡ ತಾರಾಗಣ ಹೊಂದಿರುವ ಈ ಸಿನಿಮಾ ಕಾದಂಬರಿಯನ್ನು ಆಧರಿಸಿದ ಕಥೆಯಾಗಿದೆ. ಹಾಗಾಗಿ ಚಿತ್ರದ ಮೇಲೆ ಮತ್ತು ಮಣಿರತ್ನಂ ನಿರ್ದೇಶನದ ಮೇಲೆ ಭರವಸೆ ಹೆಚ್ಚಾಗಿದೆ.

  'ಪೊನ್ನಿಯಿನ್ ಸೆಲ್ವನ್' ಪ್ಯಾನ್ ಇಂಡಿಯಾ ಸಿನಿಮಾ. ಚಿತ್ರದಲ್ಲಿ ಹಲವು ಖ್ಯಾತ ಕಲಾವಿದರು ಇದ್ದಾರೆ. ಸೌತ್ ಜೊತೆಗೆ ಬಾಲಿವುಡ್ ಕಲಾವಿದರು ಕೂಡ ಅಭಿನಯಿಸುತ್ತಿದ್ದಾರೆ. ಈಗಾಗಲೇ ಹಲವು ಪಾತ್ರವರ್ಗದ ಪರಿಚಯವನ್ನು ಚಿತ್ರತಂಡ ಮಾಡಿಕೊಟ್ಟಿದೆ.

  Breaking: ತಮಿಳು ನಟ ವಿಕ್ರಮ್‌ಗೆ ಎದೆ ನೋವು: ಚೆನ್ನೈ ಆಸ್ಪತ್ರೆಗೆ ದಾಖಲುBreaking: ತಮಿಳು ನಟ ವಿಕ್ರಮ್‌ಗೆ ಎದೆ ನೋವು: ಚೆನ್ನೈ ಆಸ್ಪತ್ರೆಗೆ ದಾಖಲು

  ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ 'ಪೊನ್ನಿಯನ್ ಸೆಲ್ವನ್' ತೆರೆಗೆ ಬರ್ತಿದೆ. ಈ ಚಿತ್ರದ ಆಡಿಯೋ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದ್ದು, ಅದ್ಧೂರಿ ಕಾರ್ಯಕ್ರಮ ನೆರವೇರಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ಓದಿ.

  ಚೋಳರ ಕಥೆ ಹೇಳೊ ಪೊನ್ನಿಯಿನ್ ಸೆಲ್ವನ್!

  ಚೋಳರ ಕಥೆ ಹೇಳೊ ಪೊನ್ನಿಯಿನ್ ಸೆಲ್ವನ್!

  ಬಹುನಿರೀಕ್ಷಿತ ಮಣಿರತ್ನಂ ನಿರ್ದೇಶನದ ಸಿನಿಮಾ 'ಪೊನ್ನಿಯನ್ ಸೆಲ್ವನ್'. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈ ನಿರೀಕ್ಷೆ ಮತ್ತು ಕುತೂಹಲಗಳನ್ನು ಮತ್ತಷ್ಟು ಹೆಚ್ಚು ಮಾಡಿದೆ. ಈ ಹಿಂದೆ ರಿಲೀಸ್ ಆಗಿರುವ ಟೀಸರ್, ಸಿನಿಮಾದ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಟ್ಟಿತು. ಪಾತ್ರ ವರ್ಗದ ಪರಿಚಯ ಟೀಸರ್‌ನಲ್ಲಿ ಆಗಿದೆ. ಇನ್ನು ಎಆರ್ ರೆಹಮಾನ್ ಸಂಗೀತ ಚಿತ್ರಕ್ಕಿದ್ದು ಆಡಿಯೋ ಮೇಲೆ ಸಾಕಷ್ಟು ನಿರೀಕ್ಷೆ ಮನೆ ಮಾಡಿದೆ.

  'ಪೊನ್ನಿಯಿನ್ ಸೆಲ್ವನ್' ತಂಡ ಸೇರಿದ ರಕ್ಷಿತ್ ಶೆಟ್ಟಿ, ಸೂರ್ಯ, ಮಹೇಶ್ ಬಾಬು!'ಪೊನ್ನಿಯಿನ್ ಸೆಲ್ವನ್' ತಂಡ ಸೇರಿದ ರಕ್ಷಿತ್ ಶೆಟ್ಟಿ, ಸೂರ್ಯ, ಮಹೇಶ್ ಬಾಬು!

  ಚೆನ್ನೈನಲ್ಲಿ ಅದ್ಧೂರಿ ಆಡಿಯೋ ಲಂಚ್!

  ಚೆನ್ನೈನಲ್ಲಿ ಅದ್ಧೂರಿ ಆಡಿಯೋ ಲಂಚ್!

  'ಪೊನ್ನಿಯನ್ ಸೆಲ್ವನ್' ಸಿನಿಮಾದ ಆಡಿಯೋ ಲಾಂಚ್‌ಗೆ ಸಕಲ ಸಿದ್ಧತೆ ನಡೆದಿದೆ. ದೊಡ್ಡದಾಗಿ ನಡೆಯುವ ಆಡಿಯೋ ಲಾಂಚ್‌ನಲ್ಲಿ ಸಿನಿಮಾರಂಗದ ಗಣ್ಯರು ಭಾಗಿಯಾಗಲಿದ್ದಾರೆ. ಚೆನ್ನೈನ ನೆಹರೂ ಒಳಾಂಗಣ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 6ರಂದು ಕಾರ್ಯಕ್ರಮ ನಡೆಯಲಿದೆ. ಮಣಿರತ್ನಂ ಮತ್ತು ಎ.ಆರ್. ರೆಹೆಮಾನ್ ಕಾಂಬಿನೇಷನ್ ಇರುವ ಕಾರಣಕ್ಕೆ ಚಿತ್ರದ ಆಡಿಯೋ ರಿಲೀಸ್ ಹೆಚ್ಚಿನ ಗಮನ ಸೆಳೆದಿದೆ.

  ರಜನಿಕಾಂತ್, ಕಮಲ್ ಹಾಸನ್ ಅತಿಥಿ!

  ರಜನಿಕಾಂತ್, ಕಮಲ್ ಹಾಸನ್ ಅತಿಥಿ!

  'ಪೊನ್ನಿಯನ್ ಸೆಲ್ವನ್' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ನಟ ರಜನಿಕಾಂತ್ ಮತ್ತು ಕಮಲ್ ಹಾಸನ್ ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ. ಈ ವಿಚಾರ ಸದ್ಯ ರಿವೀಲ್ ಆಗಿದ್ದು, ಈ ಇಬ್ಬರು ಸೂಪರ್ ಸ್ಟಾರ್‌ಗಳನ್ನು ಒಟ್ಟಿಗೆ ವೇದಿಕೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಲೈವ್ ಪ್ರದರ್ಶನದ ಮೂಲಕ ಹಾಡುಗಳನ್ನು ಪ್ರಸ್ತುತ ಪಡಿಸಲಾಗುತ್ತದೆ.

  ಗಮನ ಸೆಳೆದಿದ್ದ ಟೀಸರ್!

  ಗಮನ ಸೆಳೆದಿದ್ದ ಟೀಸರ್!

  'ಪೊನ್ನಿಯಿನ್ ಸೆಲ್ವನ್' ಟೀಸರನ್‌ನಲ್ಲಿ ಗತಕಾಲದ ವೈಭವವನ್ನು ನೋಡಬಹುದು. ಚೋಳರ ಸಾಮ್ರಾಜ್ಯದ ದರ್ಶನ ಮಾಡಿಸುತ್ತೆ. ಸಾಮ್ರಾಜ್ಯಕ್ಕಾಗಿ ನಡೆಯುವ ಹೋರಾಟ, ಯುದ್ಧ, ತೊಳಲಾಟ ಎಲ್ಲದರ ತುಣುಕುಗಳನ್ನು ತೋರಿಸಲಾಗಿದೆ. ಇನ್ನು ಒಂದು ಡೈಲಾಗ್ ಮಾತ್ರವೇ ಟೀಸರ್‌ನಲ್ಲಿ ಇದೆ. "ಮದ್ಯ, ಹಾಡು, ರಕ್ತ, ಸಮರ, ಎಲ್ಲಾದನ್ನೂ ಮರೆಯಲೆಂದೇ, ಅವಳನ್ನೂ ಮರೆಯಲೆಂದೆ, ನನ್ನನ್ನು ಮರೆಯಲೆಂದೆ.." ಎನ್ನುವ ಒಂದೇ ಒಂದು ಡೈಲಾಗ್ ಇದೆ. ಇನ್ನು ಒಂದು ಉಂಗುರ ಹಲವು ಕುತೂಹಲಗಳನ್ನು ಹುಟ್ಟು ಹಾಕಿದೆ.

  English summary
  Rajinikanth and Kamal Haasan Will be chief guests for Ponniyin Selvan Audio launch, know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X