For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ಪ್ರವೇಶ ನಿರ್ಧಾರ ಹಿಂಪಡೆದ ರಜನೀಕಾಂತ್: ಕಾರಣವೇನು?

  |

  ಕೆಲವು ದಿನಗಳ ಹಿಂದಷ್ಟೆ, ತಾವು ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡುವುದಾಗಿ ಹೇಳಿದ್ದ ರಜನೀಕಾಂತ್ ಈಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

  ಆರೋಗ್ಯ ಕಾರಣ ನೀಡಿ ರಾಜಕೀಯ ಪಕ್ಷ ಸ್ಥಾಪನೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ ನಟ ರಜನೀಕಾಂತ್. ಮಂಗಳವಾರ ಟ್ವಿಟ್ಟರ್‌ನ ಈ ವಿಷಯವನ್ನು ಪ್ರಕಟಿಸಿದ್ದಾರೆ ರಜನಿ.

  ರಜನೀಕಾಂತ್ ಅವರು ತಮ್ಮ ಪಕ್ಷದ ಘೋಷಣೆಯನ್ನು ಡಿಸೆಂಬರ್ 31 ರಂದು ಮಾಡುವವರಿದ್ದರು. ಪಕ್ಷದ ಉದ್ಘಾಟನೆ ಜನವರಿ ತಿಂಗಳಲ್ಲಿ ಮಾಡುವುದಾಗಿ ಇದೇ ತಿಂಗಳ ಆರಂಭದಲ್ಲಿ ಹೇಳಿದ್ದರು. ರಜನೀಕಾಂತ್ ರಾಜಕೀಯ ಪ್ರವೇಶ ತಮಿಳುನಾಡು ರಾಜಕೀಯ ರಂಗದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಈಗ ಎಲ್ಲಾ ಉಲ್ಟಾ ಆಗಿದೆ.

  ನಟ ರಜನೀಕಾಂತ್ ಅವರು ಎರಡು ದಿನಗಳ ಹಿಂದಷ್ಟೆ ಅನಾರೋಗ್ಯದಿಂದಾಗಿ ಹೈದರಾಬಾದ್‌ನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ರಕ್ತದೊತ್ತಡದಲ್ಲಿ ಏರು-ಪೇರಾಗಿತ್ತು ಎಂದು ವೈದ್ಯರು ಹೇಳಿದ್ದರು. ಪ್ರಸ್ತುತ ಡಿಸ್ಚಾರ್ಜ್ ಆಗಿ ಮನೆಯಲ್ಲಿರುವ ರಜನೀಕಾಂತ್‌ಗೆ ಪೂರ್ಣ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ

  English summary
  Rajinikanth announces that he is not going to foray into politics citing his health condition.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X